Saturday 22 October 2016

ಒಂದು ಕ್ಷಣ

 ಒಂದು ಕ್ಷಣ
  ಮಾಧವ್ ಕಾಲ್ ಮಾಡಿ ನನ್ನನ್ನು ಮದುವೆಗೆ ಕರೆದಾಗ ಮನದ ಮೂಲೆಯಲ್ಲಿದ್ದ ಅಪರೂಪದ ನಂಬಿಕೆ ಎಂಬ ತಿಳಿಯಾದ ನೀರು ಒಂದು ಕ್ಷಣ ಅಲುಗಾಡಿದ್ದು ಉಂಟು. ಯಾಕೆ ಎಂದು ಹೊಸದಾಗಿ ಹೇಳಬೇಕಾಗಿಲ್ಲ ಅವಳು ಕೂಡ ಮದುವೆಗೆ  ಬರುತ್ತಾಳೆ ಎಂದು ಲೋಕೇಶ್ ಹೇಳಿದಾಗ ಅವನಿಗೆ ಏನು ಹೇಳಬೇಕು ಎಂದು ತಿಳಿಯದೆ. ನಾನು ಮದುವೆಗೆ ಬರೋದು ಅನುಮಾನ ಲೋಕೆಶ್ ಮಾಧವನಿಗೆ ಈ ವಿಷಯ ಹೇಳ ಬೇಡ ಸುಮ್ಮನೆ ಬೇಜಾರು ಮಾಡ್ಕೊತಾನೆ ಎಂದು ಫೋನ್ ಕಟ್ ಮಾಡಿದ್ದೆ.
  ರಾತ್ರಿಯಲ್ಲ ಒಬ್ಬರಾದ ಮೇಲೊಬ್ಬರಂತೆ ಮೆಸೆಜ್ ಗಳ ಸುರಿಮಳೆ, ಕಾಲ್ ಗಳ ಸೋನೆ ಮಳೆ, ಯಾಕೆ ನೀನು ಬರೊದಿಲ್ಲ? ತುಂಬಾ ದಿನ ಆಗಿದೆ ಎಲ್ಲರನ್ನ ಮೀಟ್ ಮಾಡಿ, ಮಾತನಾಡಿಸಿ, ಎಲ್ಲರು ಬರಬೇಕಾದರೆ ನಿನ್ನದೇನೋ ಕಷ್ಟ ಸುಮ್ನೆ ಬಾರೋ ಎಂದು ಅರುಣ್ ಸಾರಿ ಸಾರಿ ಹೇಳಿದರು  ಮನಸೇಕೊ ಅತ್ತ ಕಡೆ ವಾಲುತ್ತಲೆ ಇಲ್ಲ.
  ಹರಿದು ಹೋದ ಹಾಳೆಯನ್ನು ಜೋಡಿಸುತ್ತಾ ಕುಳಿದ್ದಾಗ ಅವಳು ಕೊಟ್ಟು ಮರೆತು ಹೋದ ಕೊನೆಯ ಬಾರಿ ಹೇಳಿದ ‘ಈ ನಿನ್ನ ಕೆಟ್ಟ ಮುಖ ಯಾವತ್ತು ತೋರಿಸ ಬೇಡ’ ಅನ್ನೋ ಮಾತು ಪದೇ ಪದೇ ನೆನಪಿಗೆ ಬರುತ್ತಿತ್ತು. ಅತೀಯಾಗಿ ಪ್ರೀತಿಸಿದ ಕಾರಣ ಕಳೆದುಕೊಂಡ ಅವಳ ನಿರ್ಮಲ ಮನಸ್ಸು ಇನ್ನೆಂದು ನನಗೆ ಸಿಗದು. ಮನ ನೋಯಿಸುವಂತೆ ಮಾಡಿದ ತಪ್ಪು, ಅಹಂಕಾರಿಯಾಗಿ ಮಾತನಾಡುವ ನನ್ನಂತ ಎಷ್ಟೋ ಮಂದಿಗೆ ಅರ್ಥವಾಗುವುದಿಲ್ಲ.
  ಮದುವೆಗೆ ಹೋಗುವುದು ಬೇಡ ಎನ್ನುವ ನಿರ್ಧಾರ ಬಲವಾಗಿರುವಾಗಲೇ ನನ್ನ ಸೆಲ್ ಫೋನ್ ರಿಂಗ್ ಎದೆ ಬಡಿತದ ನಡುವೆ ಜೋರಾಗಿ ಹೊಡೆದುಕೊಂಡಿತು. ಯಾರೆಂದು ಟೇಬಲ್ ಮೇಲಿದ್ದ ಮೊಬೈಲ್ ಗೆ ಕೈನ ಸಹಾಯ ಕೊಟ್ಟೆ ದೊಡ್ಡ ಶಾಕ್ ನನಗಾಗಿತ್ತು…?

ಮಂಜುನಾಥ್ ಜೈ