Tuesday 24 May 2016

ಪ್ರಾದೇಶಿಕ ಭಾಷೆಗೆ ಪರ್ವಕಾಲ

   ನಮ್ಮೂರಿನ ತಾಲೂಕು ಕೇಂದ್ರದಿಂದ ಹಿಡಿದು ಜಿಲ್ಲಾ ಕೇಂದ್ರಗಳಲ್ಲಿ ಕನ್ನಡ ಭಾಷೆಯ ಘೋಷಣೆಗಳು ಸಾಮಾನ್ಯ ಯಾಕೆಂದರೆ ಅದು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ್ದು, ರೈಲ್ವೇ ಇಲಾಖೆ ಕೇಂದ್ರ ಸರ್ಕಾರದ ಆಡಳಿತಕ್ಕೆ ಸಂಬಂಧಿಸಿದ್ದರೂ ಅಲ್ಲಿ ಹಿಂದಿ, ಇಂಗ್ಲೀಷ್ ಭಾಷೆಯ ಜೊತೆಗೆ ಸ್ಥಳೀಯ ಭಾಷೆಗಳಿಗೋ ಮಣೆ ಹಾಕಿದ್ದರೂ. ಆದರೆ ಈಗ ಸ್ಥಳೀಯರೆಲ್ಲರು ಸಂತಸ ಪಡುವಂತಹ ವಿಚಾರ, ಸ್ಥಳೀಯ ಭಾಷೆಗಳಲ್ಲಿ ವಿಮಾನ ಯಾನದ ಮಾಹಿತಿ ನೀಡುವ ಕುರಿತು ಚಿಂತನೆ ನಡೆಯುತ್ತಿದೆ. ಇದು ಎಲ್ಲಾ ಪ್ರಾದೇಶಿಕ ಭಾಷಿಗರು ಹೆಮ್ಮೆ ಪಡುವಂತೆ ಮಾಡಿದೆ. 
   ಎಷ್ಟೋ ಬಾರಿ ವಿಮಾನ ನಿಲ್ದಾಣಗಳಲ್ಲಿ ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಘೋಷಣೆಗಳನ್ನು ಕಿವಿಕೊಟ್ಟು ಆಲಿಸುವಾಗ, ಸ್ಥಳೀಯ ಭಾಷೆಯಲ್ಲಿ ಇರಬಾರದೇ ಎಂದು ಎಷ್ಟೋ ಜನಕ್ಕೆ ಅನ್ನಿಸಿದೆ. ಹೌದು ಆ ನಿಮ್ಮ ಮನದ ಮಾತು ತಲುಪಬೇಕಾದವರಿಗೆ ತಲುಪಿದೆ. ಭಾರತದ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಸಂಬಂಧಿಸಿದ ಘೋಷಣೆಗಳು ಪ್ರದೇಶಿಕ ಭಾಷೆಯಲ್ಲಿ ಕೂಡ ಇರಬೇಕೆಂದು ಕಡ್ಡಾಯಗೊಳಿಸಿವ ಸಾಧ್ಯತೆ ಇದೆ.
   ಸಾಮಾನ್ಯ ಜನರ ದೀರ್ಘ ಕಾಲದ ಬೇಡಿಕೆಯಿಂದಾಗಿ ದೇಶದ ನಾನಾ ಕಡೆಗಳಲ್ಲಿ ಹಲವಾರು ಸಣ್ಣ ಪುಟ್ಟ ವಿಮಾನ ನಿಲ್ದಾಣಗಳನ್ನು ಅಭಿವೃದ್ದಿಪಡಿಸುವುದಕ್ಕೆ ಹಾಗೂ ವೈಮಾನಿಕ ಸಂಪರ್ಕ ಹೆಚ್ಚಿಸಲು ಸರ್ಕಾರ ಯತ್ನಿಸುತ್ತಿದೆ. ವಿಮಾನ ಹಾರಾಟ ಮಾಡುವ ಸಮಯ ಮತ್ತು ಅದಕ್ಕೆ ಸಂಬಂಧಿಸಿದ ಘೋಷಣೆಗಳನ್ನು ನಿಲ್ದಾಣದಲ್ಲಿ  ಸ್ಥಳೀಯ ಭಾಷೆಯಲ್ಲೂ ನೀಡಬೇಕು ಎಂಬ ಬೇಡಿಕೆ ಹಿಂದಿನಿಂದಲೇ ಇತ್ತು. ಈ ಸಂಬಂಧ ನಾಗರೀಕ ವಿಮಾನ ಯಾನ ಸಚಿವಾಲಯ ಕ್ರಮ ತೆಗೆದುಕೊಳ್ಳುವ ನಿರೀಕ್ಷೆ ಇದೆ. 
    ಸದ್ಯದಲ್ಲಿ ಉತ್ತರ ಭಾರತದಲ್ಲಿರುವ ಏರ್‍ಫೋರ್ಟ್‍ಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್‍ನಲ್ಲಿ ಘೋಷಣೆಗಳನ್ನು ಮಾಡುತ್ತಾರೆ. ದಕ್ಷಿಣ ಭಾರತದ ಕೆಲ ಏರ್‍ಪೋರ್ಟ್‍ಗಳಲ್ಲಿ ಹಿಂದಿ-ಇಂಗ್ಲಿಷ್ ಜೊತೆಗೆ ಸ್ಥಳೀಯ ಭಾಷೆ ಉಪಯೋಗಿಸಲಾಗುತ್ತಿದೆ. ಆದರೆ ಸ್ಥಳೀಯ ಭಾಷೆಯ ಘೋಷಣೆ ಕಡ್ಡಾಯವಾಗು ಸಂದರ್ಭ ಇದೀಗ ಒದಗಿ ಬಂದಿದೆ. ಭಾರತದಲ್ಲಿ 65 ವಿಮಾನ ನಿಲ್ದಾಣಗಳಲ್ಲಿ ದೇಶಿಯ ಮಾರ್ಗದ ವಿಮಾನಗಳು ಹಾರಾಟ ನಡೆಸುತ್ತಿವೆ. ಸ್ಥಳೀಯ ಭಾಷೆಯಲ್ಲಿ ಘೋಷಣೆ ಬೇಕೆಂದು ಅನೇಕ ಪ್ರಯಾಣಿಕರು ನಾಗರೀಕ ವಿಮಾನ ಇಲಾಖೆಗೆ ಒತ್ತಾಯಿಸಿದ್ದರು.
   ಕಳೆದ ಜನವರಿ-ಏಪ್ರಿಲ್‍ನಲ್ಲಿ ದೇಶಿಯ ಏರ್ ಲೈನ್ ವಲಯದಲ್ಲಿ 23.29 ಪರ್ಸೆಂಟ್ ಬೆಳವಣಿಗೆ ದಾಖಲಾಗಿತ್ತು. ಸಣ್ಣ ಪುಟ್ಟ ಪಟ್ಟಣಗಳಿಂದಲೂ ವಿಮಾನದಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚುತ್ತಿದೆ. ಆದ್ದರಿಂದ ಸ್ಥಳೀಯ ಭಾಷೆಯನ್ನು ಬಳಸುವುದು ಅನಿವಾರ್ಯವಾಗುತ್ತಿದೆ. ಭಾರತದಲ್ಲಿ 400 ಮೀಟರ್‍ನಿಂದ 1 ಕಿ.ಮೀ ತನಕದ ರನ್ ವೇ ಇರುವ ವಿಮಾನ ನಿಲ್ದಾಣಗಳಿವೆ. ಇವುಗಳು ಭಾಗಶಃ ಸಕ್ರಿಯವಾಗಿವೆ. ಇವುಗಳ ಪೈಕಿ 10 ಏರ್ ಪೋರ್ಟ್‍ಗಳಿಗೆ ಪ್ರಸಕ್ತ ಸಾಲಿನಲ್ಲಿ ಕಾಯಕಲ್ಪ ನೀಡಲು ನಿರ್ಧರಿಸಿದ್ದಾರೆ. 
    ಅಂತೂ ಇಂತು ಪ್ರಾದೇಶಿಕ ಭಾಷೆಗಳಿಗೆ ಒಂದೊಳ್ಳೆ ಕಾಲ ಬಂದಿದೆ. ಅಳಿವಿನ ಅಂಚಿಗೆ ಸೇರುತ್ತಿದ್ದ ಭಾಷೆಗಳು ದೊಡ್ಡವರ ಅಂಗಳದಲ್ಲಿ ಬೆಳಗಲಿವೆ. ಇನ್ನೂ ಮುಂದೆಯಾದರು ಪ್ರಾದೇಶಿಕ ಭಾಷೆಯನ್ನ ಉಳಿಸುವತ್ತ ಸರ್ಕಾರಗಳು ಗಮನ ಹರಿಸಲಿ. ಇದು ಕನ್ನಡ ಭಾಷೆಗೆ ಎಷ್ಟರ ಮಟ್ಟಿಗೆ ಅನುಕೂಲವಾದಿತು ಎಂಬುದು ಪ್ರಶ್ನೆ ಯಾದರೆ, ಇಲ್ಲಿಯಾದರೂ ಉಳಿಯಲಿ ಅನ್ನುವುದು ನಮ್ಮವರ ಆಶಯ.


ಮಂಜುನಾಥ ಹೆಚ್.ಆರ್
email : manjunathahr1991@gmail.com

Saturday 21 May 2016

ಇವನೊಬ್ಬ ಫೀಲಿಂಗ್ ಸ್ನೇಹಿತ


   

ನಮಗೆ ನೋವಾದಾಗ ಅಥವಾ ತುಂಬಾ ಖುಷಿಯಾದಗ ಯಾರ ಬಳಿಯಾದ್ರೂ ಹೇಳಿಕೊಳ್ಳಬೇಕು, ಅಂತ ಅನ್ಸುತ್ತೆ ಆದ್ರೆ ಯಾರ ಹತ್ರನ್ನೂ ಹೇಳಿಕೊಳ್ಳಲಾಗದ ಮನಸ್ಥಿತಿ, ಯಾರಾದ್ರು ನಮ್ಮ ಬಗ್ಗೆ ತಪ್ಪು ತಿಳಿದುಕೊಳ್ತಾರೇನೋ, ನಮ್ಮ ಮೇಲೆ ತಪ್ಪು ಭಾವನೆ ಮೂಡಬಹುದೇನು ಎಂಬ ತಳಮಳ ಮನದೊಳಗೆ. ಇಂತ ಕಷ್ಟ ಪರಿಸ್ಥಿಯಲ್ಲಿ ಅಪತ್ಬಾಂವನಂತೆ ಕಾಣುವವನೇ ವಾಟ್ಸ್ ಆಪ್. ಇವನೊಬ್ಬ ಇದ್ರೆ ಸಾಕು ಯಾರು ಬೇಡ, ಏನು ಬೇಡ.
   ಇಫ್ ಯು ಗೆಟ್ ಎ ಗುಡ್ ವೈಫ್ ಯು ವಿಲ್ ಬಿ ಹ್ಯಾಪಿ,  ಇಪ್ ಯು ಗೆಟ್ ಎ ಬ್ಯಾಡ್ ಒನ್ ಯು ವಿಲ್ ಬಿಕಮ್ ಫಿಲೋಸಫರ್, ಇಂತ ಸ್ಟೇಟಸ್ ಮದುವೆಯಾದ ಅನುಭವಿ ಗಂಡದೀರ ಮನದಾಳದ ಮಾತು, ಐ ಆಮ್ ವೈಟಿಂಗ್, ಅಂತ ಕೆಲವರು ಹಾಕಿಕೊಂಡಿರ್ತಾರೆ. ಅವರ ಗರ್ಲ್ ಫ್ರಂಡ್‍ಗೋಸ್ಕರ ವೈಟ್ ಮಾಡ್ತಿದರೂ ಅಥವಾ ಜೀವನದ ಒಳ್ಳೆ ಅವಕಾಶಕ್ಕಾಗಿ ಕಾಯ್ತಾ ಇರ್ತಾರೋ ಗೊತ್ತಿಲ್ಲ ಒಟ್ಟಿನಲ್ಲಿ ಜೀವನವೆಲ್ಲಾ ವೈಟ್ ಮಾಡ್ತಾನೇ ಇರ್ತಾರೆ. ಮೈ ಆಟಿಟ್ಯೂಡ್ ಇಸ್ ಮೈ ಐಡೆಂಟಿಟಿ, ಇದು ಅವರ ಬಗ್ಗೆ ಇರುವ ಹೋಫ್ ಅಂತಾನೇ ಹೇಳ್ಬೋದು. ಇನ್ ಮೈ ಡ್ರೀಮ್ಸ್ ಯು ಆರ್ ಮೈ ಲೈಫ್, ಭಟ್, ಇನ್ ಮೈ ಲೈಫ್ ಯು ಆರ್ ಎ ಡ್ರೀಮ್,  ಇದು ಬೇರೆಯವರ ಬಗ್ಗೆ ಆದ್ರೆ, ಮೈ ಬ್ಯೂಟಿಫುಲ್ ಫ್ಯಾಮೀಲಿ, ಮೈ ಕ್ಯೂಟ್ ಹೌಸ್, ಮೈ ಸ್ವೀಟ್ ಡಾಟರ್, ಸನ್. ಇವೆಲ್ಲಾ ಮತ್ತೊಬ್ಬರಿಗೆ ತಮ್ಮ ಬಗ್ಗೆ ತಾವೇ ಪರಿಚಯ ಮಾಡಿಕೊಳ್ಳುವಂತೆ ಮಾಡುತ್ವೆ.
   ವಾಟ್ಸ್ ಆಫ್ ಲವ್, ಸೆಂಟಿಮೆಂಟ್, ಅಲ್ಲದೆ, ಕೋಪ, ಅಸಹನೆ, ಸ್ವಾಭಿಮಾನದ ಸಾಲುಗಳಿಗೆ ವೇದಿಕೆಯನ್ನ ಒದಗಿದುಸುತ್ತೆ. ಅಲ್ಲಿ ಬೇರೆಯವರು ನಿಮ್ಮ ಬಗ್ಗೆ ತಪ್ಪು ತಿಳಿದುಕೊಳ್ಳುತ್ತಾರೆ ಎಂಬ ಭಯವಾಗಲಿ, ಮತ್ತೊಬ್ಬರ ಮನಸ್ಸಿಗೆ ನೋವಾಗುವಂತ ಸನ್ನಿವೇಶವಾಗಲಿ ಉಂಟಾಗುವುದಿಲ್ಲ. ಇತ್ತೀಚೆಗೆ ಆತ್ಮೀಯ ಗೆಳೆಯನಾಗಿದ್ದಾನೆ. ನಮ್ಮ ಭಾವನೆ, ಈಗಿರುವ ಮನಸ್ಥಿತಿ ಎಲ್ಲವನ್ನು ಬೇರೆಯವರಿಗೆ ತೋರಿಸುತ್ತಾನೆ ವಾಟ್ಸ್ ಆಫ್ ಗೆಳೆಯ. ಕೋಪವನ್ನು ಇದರ ಮೂಲಕ ವ್ಯಕ್ತಪಡಿಸಿ ತಮಗೆ ತಾವೇ ಸಮಾದಾನ ತಂದುಕೊಳುವಂತಹ ಮನಸ್ಥಿತಿಯನ್ನ ತಂದುಕೊಳ್ಳುವತ್ತಾ ಇಂದಿನ ಮಂದಿ ಮುನ್ನಡೆದಿದ್ದಾರೆ. ಯಾರಿಗೂ ಬೇಡ ಯಾವುದಕ್ಕೂ ಬೇಡ ಎನ್ನುವವರು ಶಾಟ್ ಲೈನ್ ಬರೆದುಕೊಂಡು ಸುಮ್ಮನಿದ್ದರೆ ಸಾಕು. ಯಾರಿಗೆ ಏನು ತಲುಪಬೇಕು ಅದು ತಲುಪುತ್ತದೆ. ತಲುಪೇ ತಲುಪುತ್ತದೆ ಅನ್ನೋ ಮೊಂಡ ಭರವಸೆ ಅಂತೂ ಇದ್ದೇ ಇರುತ್ತದೆ.
ಮಂಜುನಾಥ ಹೆಚ್.ಆರ್
manjunathahr1991@gmail.com

ವಿಶ್ವ ಮಾನವ ಗೀತೆ ಹುಡುಕಲು ಹೊರಟಾಗ..........


Saturday 14 May 2016

ನೂರು ಕದನಗಳ ಸಿಂಹ

ನೆಪೋಲಿಯನ್ ಬೊನಪಾರ್ಟೆ



   ನೆಪೋಲಿಯನ್ ಕಾರ್ಸಿಕಾ ದ್ವೀಪದ ಅಜಾಶಿಯೋ ಗ್ರಾಮದಲ್ಲಿ ೧೫ನೇ ಆಗಸ್ಟ್ ೧೭೬೯ರಲ್ಲಿ ಹುಟ್ಟಿದ್ದು. ಎಂಟು ಮಕ್ಕಳಲ್ಲಿ ಎರಡೆಯವನಾದ ಇವನಿಗೆ ನೆಪೋಲೆಯೋನ್ ದಿ ಬೋನೋಪಾರ್ಟೆಎಂದು ಹೆಸರಿಟ್ಟಿದ್ದರು. ಇವನ ತಂದೆ ಕಾರ್ಲೋ ಬೊನಪಾರ್ಟೆ ಫ್ರೆಂಚ್ ರಾಜ ೧೬ ಲೂಯಿಸ್ನ ಅರಮನೆಯಲ್ಲಿ ಕಾರ್ಸಿಕಾ ದ್ವೀಪದ ಪ್ರತಿನಿಧಿಯಾಗಿದ್ದರು.
   1779 ರಲ್ಲಿ 9 ವರ್ಷದ ನೆಪೋಲಿಯನ್ ಸೈನ್ಯವನ್ನು ಸೇರಿದ. 1789ರ ಫ್ರೆಂಚ್ ಕ್ರಾಂತಿ ಫ್ರಾನ್ಸ್ ದೇಶದಲ್ಲಿ ಜಗಳಗಳನ್ನು ಉಂಟು ಮಾಡಿತ್ತು. 1793ರ "ಸೀಜ್ ಆಫ್ ಟೂಲನ್" ಯುದ್ಧದಲ್ಲಿ ನೆಪೋಲಿಯನ್ ಸೈನ್ಯವನ್ನು ಮುನ್ನಡಿಸಿ ಜಯವನ್ನು ತಂದನು. ೫ ಅಕ್ಟೋಬರ್ 1795ರಲ್ಲಿ "13 ವೆಂಡೆಮಿಯರ್"ರಲ್ಲಿ ಜಯ ಸಾದಿಸಿದ ಇವನನ್ನು ಯೋಗ್ಯ ಸೈನ್ಯ ನಾಯಕನೆಂದು ಗುರುತಿಸಿದರು.
  ಕೇವಲ 27 ವರ್ಷದ ಹರೆಯ ನೆಪೋಲಿಯನ್ ಬೋನಾಪಾರ್ಟ್ ಆಗಷ್ಟೇ ಇಟಲಿಯಲ್ಲಿಯ ಫ್ರೆಂಚ್ ಸೇನೆಗೆ ಬ್ರಿಗೇಡಿಯರ್ ಜನರಲ್ ಆಗಿ ನೇಮಕಗೊಂಡಿದ್ದ . ಅಲ್ಲಿಯತನಕವೂ ಯಾವತ್ತೂ ಒಂದು ಬೃಹತ್ ಸೇನೆಯನ್ನು ನೇತೃತ್ವ ವಹಿಸಿರಲಿಲ್ಲ . ಮೊದಲ ಬಾರಿಗೆ ನೇಮಕಗೊಂಡ ಈ ಚಿಕ್ಕ ಹುಡುಗ ಏನು ಸಾಧಿಸಿ ತೋರಿಸಿಯಾನೋ ಎಂದು ಅವನ ಕೆಳಗಿನವರು ಮೂದಲಿಸುತ್ತಿದ್ದರು. ಅದಲ್ಲದೇ ಕುಬ್ಜಕಾಯ ಬೇರೆ ಎಂದು ಅಣಕಿಸುತ್ತಿದ್ದರಂತೆ. ಆದರೆ ನೆಪೋಲಿಯನ್ನಿನ ಆ ಕುಬ್ಜ ಶರೀರದೊಳಡಗಿತ್ತು ಅಧಮ್ಯ ಆತ್ಮವಿಶ್ವಾಸ ಮಿತಿಮೀರಿದ ಛಲ. ಇದನ್ನು ತೋರಿಸಲು ಒಂದು ಅವಕಾಶಕ್ಕಾಗಿ ಹಾತೊರೆಯುತ್ತಿದ್ದನಷ್ಟೇ. ಸಿಕ್ಕ ಈ ಮೊದಲ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುವುದಕ್ಕಾಗಿ ಜಾಗರೂಕತೆಯಿಂದ ತಯಾರಿಮಾಡುತ್ತಿದ್ದ.
   ಅವನ ವ್ಯಕ್ತಿತ್ವದ ವರ್ಚಸ್ಸು ಹೇಗಿತ್ತೆಂದರೆ ಕೇವಲ ನೋಟಮಾತ್ರದಿಂದ ಅವನನ್ನು ಕಡೆಗಣಿಸುವ ಸೇನಾಧಿಕಾರಿಗಳಿಗೆ ಒಂದು ಸಣ್ಣ ನಡುಕ ಹುಟ್ಟಿಸುತ್ತಿತ್ತಂತೆ . ಆದರೆ ನೆಪೋಲಿಯನ್ ಸದಾ ಗಾಂಭೀರ್ಯ ಸ್ವಭಾವದವನಲ್ಲದೇ ಆಗಾಗ ಹಸನ್ಮುಖಿಯಾಗಿ ಕುಚೋದ್ಯ ಮಾಡುತ್ತಲೋ ಎಲ್ಲರೊಂದಿಗೆ ಅವರಂತೆಯೇ ಬೆರೆತು ಉತ್ಸಾಹ ಚಿಮುಕಿಸುತ್ತಾ ಮತ್ತೆ ಕೆಲವು ಬಾರಿ ಸೇನಾಪತಿಯಂತೆ ಸಿಟ್ಟನ್ನೂ ತೋರುತ್ತಿದ್ದ. 
   ಆಗ ಅವನು ನೇತೃತ್ವ ವಹಿಸಿಕೊಂಡಿದ್ದ ಸೇನೆ ತುಂಬಾ ಕಷ್ಟದ ಪರಿಸ್ಥಿತಿಯಲ್ಲಿತ್ತು. ದೂರದ ಪ್ರಾನ್ಸ್ ಸದಾ ಕ್ರಾಂತಿಯಲ್ಲಿ ಮುಳುಗಿ ಆರ್ಥಿಕವಾಗಿ ಮುರಿದು ಬಿದ್ದಿದ್ದರಿಂದ ಇವರಿಗೆ ಸರಿಯಾಗಿ ವೇತನವೂ ದೊರೆಯುತ್ತಿರಲಿಲ್ಲ . ಸರಿಯಾದ ನಾಯಕತ್ವದ ಕೊರೆತೆ ಇದ್ದ ಕಾರಣ ಸೈನಿಕರು ಬೇಸತ್ತಿದ್ದರು ಕೂಡ . ಅದರ ಮೇಲೆ ನೆಪೋಲಿಯನ್ನನಿಗೆ ಮೇಲಿನಿಂದ ಆದೇಶ ಬಂದಿದ್ದೇನೆಂದರೆ ಈ ನಿರುತ್ಸಾಹಿ ಪಡೆಯಿಂದ ಸುಸಜ್ಜಿತ ಆಸ್ಟಿಯನ್ ಮತ್ತು ಪೀಡ್ ಮಾಂಟಿಯನ್ನರನ್ನು ಮಣಿಸಬೇಕೆಂದು.
   ನೆಪೋಲಿಯನ್ ಅಲ್ಲಿ ಬಂದ ಕ್ಷಣದಿಂದಲೇ ಸೇನೆಯ ಪರಿಸ್ಥಿತಿಯನ್ನು ಸುಧಾರಿಸುವತ್ತ ಗಮನವಿತ್ತಿದ್ದ . ಸೇನೆಯ ರೀತಿ ರಿವಾಜುಗಳನ್ನು ಸರಿಪಡಿಸುವುದು ಅವಶ್ಯಕ ಸಾಮಾಗ್ರಿಗಳನ್ನು ಎಲ್ಲರಲ್ಲಿ ಹಂಚುವುದು ಮೊದಲಾದ ಕೆಲಸಗಳಲ್ಲಿ ಮಗ್ನನಾದ . ಫ್ರಾನ್ಸ್ ನಿಂದ ಬರುವ ಸರಬರಾಜಿನ ಕೊರತೆಯೂ ಇತ್ತು . ಕೇವಲ 24 ತೋಪುಗಳು , 4000 ಬಳಲಿದ ಕುದುರೆಗಳು, 3 ಲಕ್ಷ ಬೆಳ್ಳಿ ನಾಣ್ಯಗಳು ಮತ್ತು ಕೇವಲ 30000 ಜನರಿಗೆ ಒಂದು ತಿಂಗಳಿಗೆ ಸಾಲುವ ಅರ್ಧದಷ್ಟು ಆಹಾರಸಾಮಾಗ್ರಿಗಳಿಂದ ಈಗ ಇಡೀ ಇಟಲಿಯನ್ನು ಕಬಳಿಸಬೇಕಿತ್ತು.
  ಅದರ ಮೇಲೆ ಇವನ ರಣ ಚಾತುರ್ಯವೇನಿತ್ತೆಂದರೆ ಶತ್ರುಗಳಿಗೆ ಗೊತ್ತಾಗದಂತೆಯೇ ಅವನ ಬಳಿ ಅತಿ ವೇಗವಾಗಿ ಸೇನೆಯನ್ನು ಮುನ್ನುಗ್ಗಿಸುವುದು ! ಯಾವ ಚಳಿ, ಮಳೆಗೂ ಅಂಜದೆ ಎಂಥಹ ಗಿರಿಕಂದರಗಳ ನಡುವೆಯೂ ಮುನ್ನುಗ್ಗುವುದು. ಅದು ಆ ಕಾಲದಲ್ಲಿ ಇವನೇ ಕಂಡುಹಿಡಿದ ಬ್ಲಿಟ್ಜ್ ಕ್ರೀಗ್ ತಂತ್ರ .
  ತನ್ನ ಸೈನಿಕರಿಗೆ ಉತ್ತೇಜಿಸುತ್ತಿದ್ದ – ಸೈನಿಕರೇ, ನಿಮ್ಮ ಹೊಟ್ಟೆ ಅರ್ಧ ಹಸಿದಿದೆ, ಸರ್ಕಾರ ನಿಮಗೆ ಸಾಕಷ್ಟು ಅನುಕೂಲಗಳನ್ನು ಇನ್ನೂ ಮಾಡಿಕೊಡಬೇಕಿದೆ, ಆದರೆ ಅದಕ್ಕೆ ಏನೂ ಮಾಡಲಾಗುತ್ತಿಲ್ಲ. ನಿಮ್ಮ ತಾಳ್ಮೆ ಧೈರ್ಯ ನಿಮಗೆ ಗೌರವ ನೀಡುತ್ತಿದೆ. ಆದರೆ ಯಾವ ವೈಭವ ಅಥವಾ ಉಪಯೋಗ ಅದರಿಂದಾಗುವುದಿಲ್ಲ ್ಲ. ನಾನು ನಿಮ್ಮನ್ನು ಪ್ರಪಂಚದ ಸಂವೃದ್ಧ ಪ್ರದೇಶದ ಕಡೆಗೆ ಮುನ್ನಡೆಸುತ್ತೇನೆ.  ಅಲ್ಲಿ ನೀವು ಪ್ರವರ್ಧಮಾನಕ್ಕೆ ಬರುತ್ತಿರುವ ನರಗಳು, ಕಳೆದು ಹೋಗುತ್ತಿರುವ ಪ್ರಾಂತ್ಯಗಳನ್ನು ಕಾಣುವಿರಿ. ಅಲ್ಲಿ ನೀವು ಗೌರವ ಮತ್ತು ವೈಭವದ ಸಂಪತ್ತಿನ ಬೆಳೆಯನ್ನು ಕೊಯ್ಲು ಮಾಡಬಹುದು. ಇಟಲಿಯ ಸೈನ್ಯದ ಸೈನಿಕರೇ ಭದ್ರತೆ ಮತ್ತು ಧೈರ್ಯವನ್ನು ಬಯಸುವುದಾದರೆ ಬನ್ನಿ.
    ನೆಪೋಲಿಯನ್ನಿನ ಈ ಮಾತುಗಳಿಗೆ ಕೇವಲ ನೀರಸ ಪ್ರತಿಕ್ರಿಯೆ ಇರುತಿತ್ತು. ಆದರೂ ಸೇನೆಯನ್ನು ಉತ್ತೇಜಿಸುತ್ತಿದ್ದ – 
ನೀವು ನನ್ನಿಂದ ಪವಾಡವನ್ನು ನಿರೀಕ್ಷಿಸಿದ್ದೀರಿ, ಆದರೆ ನಾನದನ್ನು ಮಾಡಲಾಗುವುದಿಲ್ಲ. ವಿವೇಕ ಮತ್ತು ಮುಂದಾಲೋಚನೆಯೊಂದಿಗೆ ಮಹತ್ತರವಾದುದನ್ನು ಸಾಧಿಸಬಹುದು. ಆದರೆ ಅದು ಯಶಸ್ಸಿನಿಂದ ಪರಾಭವದ ಕಡೆಗಿನ ನಡೆಯಾಗುತ್ತದೆ. ವ್ಯಾವಹಾರಿಕ ಅನುಭವದ ಪರಿಮಾಣದಿಂದ ನಾನು ಅರಿತಿರುವುದೇನೆಂದರೆ ಅಂತ್ಯೋಪಾಯದ ಎಲ್ಲವೂ ಏಕರೂಪವಾಗಿ ಕೆಲಸಕ್ಕೆ ಬಾರದ ವಸ್ತುವಿನ ಕಡೆ ತಿರುಗುತ್ತದೆ.
    ಇನ್ನು ಹೇಳುವ ದೊಡ್ಡ ಮಾತುಗಳನ್ನು ಮಾಡಿ ತೋರಿಸಬೇಕಲ್ಲ. ಆಗಲೇ ಶತ್ರುಗಳ ಚಲನವಲನಗಳನ್ನು ಗಮನಿಸಿತ್ತಿದ್ದ. ಪೀಡ್ ಮಾಂಟೀಸ್ ಮತ್ತು ಆಸ್ಟ್ರಿಯನ್ನರ ಒಟ್ಟು 60,000 ಬಲದ ಸೇನೆ. ಅದರಲ್ಲಿ 25,000 ಪೀಡ್ ಮಾಂಟಿಯನ್ನರು ಮತ್ತು ಉಳಿದ 35,000 ಆಸ್ಟ್ರಿಯನ್ನರ ಪಡೆ ಉತ್ತರಕ್ಕೂ ಮತ್ತು ಪಶ್ಚಿಮಕ್ಕೆ ಹಬ್ಬಿತ್ತು . ನೆಪೋಲಿಯನ್ ಗಮನಿಸಿದ್ದೇನೆಂದರೆ ಆ ಎರಡು ಸೇನೆಯ ನಡುವಿದ್ದ ಅಂತರ . 
    ಆ ಅಂತರವನ್ನು ಮತ್ತಷ್ಟು ಹೆಚ್ಚಿಸಲೆಂದು ಒಂದು ಸಣ್ಣ ಪಡೆಯನ್ನು ಆಸ್ಟ್ರಿಯನ್ನರು ಅಟ್ಟಲೆಂದು ಪಶ್ಚಿಮದ ಬೋಶೆಟ್ಟಾ ಪಾಸ್ ಹಾದಿಯಾಗಿ ಕಳಿಸಿದ . ಆ ಸಣ್ಣ ಪಡೆಯಿಂದ ಮಣ್ಣು ಮುಕ್ಕಿದ ಆಸ್ಟ್ರಿಯನ್ನರು ಅದನ್ನು ಮುತ್ತುವರೆಯಲು ತಮ್ಮ ಸೇನೆಯನ್ನು ಮತ್ತಷ್ಟು ಪಶ್ಚಿಮಕ್ಕೆ ಎರಡು ಪಾರ್ಶ್ವದಲ್ಲಿ ಮುನ್ನುಗ್ಗಿದರು . ಆದರೆ ನೆಪೋಲಿಯನ್ನಿನ ಮುಖ್ಯ ಪಡೆ ಆ ಎರಡು ಸೇನೆಯ ನಡುವೆ ತಲುಪಲೆಂದು ಆಪನ್ನೈನ್ಸ್ ಮೂಲಕ ನಡೆದ . ಆಗ ಆಸ್ಟ್ರಿಯನ್ನಿನ ಒಂದು ಪಾರ್ಶ್ವ ಬೋಶೆಟ್ಟಾನಲ್ಲಿ ಸಿಲುಕಿ (ಬ್ಯಾಟಲ್ ಆಫ್ ಮೊಂಟೆನೊಟ್ಟಾ ಎಂಬಲ್ಲಿ ) ಸೋತುಹೋಯಿತು . ಇದು ನೆಪೋಲಿಯನ್ ಗೆ ಸಂದ ಮೊದಲ ಜಯ.
   ನೆಪೋಲಿಯನ್ ಮತ್ತೆ ಉತ್ತರಕ್ಕೆ ತಲುಪಿ ಪೀಡ್ ಮಾಂಟೀಸ್ ರನ್ನು ಎರಡೇ ವಾರದಲ್ಲಿ ಆರು ಯುದ್ಧಗಳಲ್ಲಿ ಮಣಿಸಿ ಒಪ್ಪಂದಕ್ಕೆ ಸಹಿ ಹಾಕಿಸಿದ. ಪೀಡ್ ಮಾಂಟಿಯನ್ನರು ಅಪಾರ ಕಪ್ಪ ಕಾಣಿಕೆಗಳನ್ನು ಕೊಟ್ಟರು. ಅವುಗಳನ್ನು ನೆಪೋಲಿಯನ್ ತನ್ನ ಸೈನಿಕರಿಗೆ ಹಂಚಿ ಅಭಿನಂದಿಸಿದ.
  ನೆಪೋಲಿಯನ್ನನ ಮಿಂಚಿನ ಆಕ್ರಮಣಕ್ಕೆ ಮಿಕ್ಕ ಆಸ್ಟ್ರಿಯನ್ ಪಡೆಗಳು ಹೆದರಿದರು. ಅದ್ಯಾರೋ ಹೊಸ ಬ್ರಿಗೇಡಿಯರ್ ಜನ್ರಲ್ ಅಂತೆ , ಒಂದು ಕಡೆ ಕೈಗೆ ಸಿಗುವುದಿಲ್ಲ , ಪದೇ ಪದೇ ತನ್ನ ಸೇನಾ ನೆಲೆಯನ್ನು ಬದಲಾಯಿಸುತ್ತಾನೆ. ಇವನ ಯುದ್ಧಕೌಶಲ್ಯ ವನ್ನು ಅರಿಯಲಾಗದೆ ಸೇನೆಯನ್ನು ಹಿಂಪಡೆಯುವುದು ಒಳ್ಳೆಯದೆಂದು ಆಸ್ಟ್ರಿಯನ್ ಪಡೆ ಕಾಲ್ಕಿತ್ತಿತು. ಆದರೆ ನೆಪೋಲಿಯನ್ ಬೆನ್ನಟ್ಟುತ್ತಾ ಸ್ವಿಜರ್ ಲ್ಯಾಂಡಿನ ಆಲ್ಫ್ಸ್ ಮತ್ತೂ ಇನ್ನೂ ಮುಂದೆ ತಲುಪಿದ. ಆಸ್ಟ್ರಿಯಾದ ತನ್ನ ಹಿಂಬದಿಯ ಒಂದು ಸೇನಾ ಭಾಗವನ್ನು ಲೋಡಿ ಎಂಬ ಸಣ್ಣ ಪಟ್ಟಣದಲ್ಲಿ ಬಿಟ್ಟು ಮಿಕ್ಕ ಪಡೆಗಳು ಮುಂದೆ ನಡೆದಿದ್ದವು .
   ಆ ಲೋಡಿಯಲ್ಲಿ ಒಂದು ಸೇತುವೆಯನ್ನು 14 ತೋಪುಗಳಿಂದ ಮತ್ತು 3 ಬೆಟ್ಯಾಲಿಯನ್ ಗಳಿಂದ ಪ್ರೆಂಚರ ಪಡೆಯನ್ನು ತಡೆಯಲು ನಿಂತಿದ್ದವು . ನದಿಯ ಮತ್ತೊಂದು ದಂಡೆಯಲ್ಲಿ ಬಂದು ನಿಂತಿದ್ದ ನೆಪೋಲಿಯನ್ ಸೇನೆಗೆ ಇದೊಂದು ಸವಾಲಾಗಿ ಎದುರಾಯಿತು. ಯಾವ ರಣತಂತ್ರವೂ ಇಂಥಹ ಸ್ಥಿತಿಯಲ್ಲಿ ನಡೆಯುವುದಿಲ್ಲ. ಇಲ್ಲಿ ಬೇಕಾಗಿರುವುದು ಧೈರ್ಯವಷ್ಟೇ . ಅಲ್ಲಿಯ ತನಕ ತನ್ನ ಸೇನೆಯನ್ನು ಮುಂದುವರೆಸಿ ಬಂದಿದ್ದ ನೆಪೋಲಿಯನ್ನನಿಗೆ ತನ್ನ ಸೈನಿಕರಿಂದ ಗೌರವ ವಿಶ್ವಾಸ ಗಳಿಸಿದ್ದ. ಈಗ ಮತ್ತಷ್ಟು ಉತ್ತೇಜಿಸಿ ಒಂದೊಂದು ಸುತ್ತಿನಲ್ಲಿ ಅವರ ತೋಪಿನ ಧಾಳಿಯ ನಡುವೆಯೂ ಮುನ್ನುಗ್ಗುವುದೆಂದು ಯೋಜನೆ . ಹಾಗೆಯೇ ಸೈನಿಕರೂ ತಮ್ಮ ಪ್ರಾಣ ಕೊಡುತ್ತಲೇ ಮುಂದೆ ನುಗ್ಗುತ್ತಾ ಸೇತುವೆ ದಾಟಿ ಅವರ ತೋಪುಗಳ ಸದ್ದಡಗಿಸಿ ಜಯಗಳಿಸಿದರು. 
  ಈ ಹೋರಾಟದ ನಡುವೆ ನಪೋಲಿಯನ್ ತಾನೊಬ್ಬ ದಂಡಾಧಿಕಾರಿಯೆಂಬ ಗರ್ವವಿಲ್ಲದೇ ತನ್ನ ಸೈನಿಕರ ಮಧ್ಯೆಯೇ ಓಡಾಡುತ್ತಿದ್ದ. ಪಕ್ಕದಲ್ಲಿಯೇ ತೋಪಿನ ಗುಂಡಿನ ಸ್ಫೋಟಗಳಾಗುತ್ತಿದ್ದರೂ ಭಯವಿಲ್ಲದೇ ತನ್ನ ಸೈನಿಕರಿಗೆ ಉತ್ಸಾಹ ತುಂಬುತ್ತಿದ್ದ. ತದ ನಂತರ ಪುನಃ ತನ್ನ ಸೇನೆಯನ್ನು ಆಸ್ಟ್ರಿಯಾದ ಒಳಗೇ ನುಗ್ಗಿ ವಿಯೆನ್ನಾದ ಕೇವಲ 75 ಕಿ ಮೀ ಸಮೀಪ ತಲುಪಿದ . ಈ ರಭಸದ ವೇಗಕ್ಕೆ ತತ್ತರಿಸಿದ ಆಸ್ಟ್ರಿಯನ್ ರಾಜ ಮರುಮಾತಿಲ್ಲದೇ ಶರಣಾದ. ನೆಪೋಲಿಯನ್ನಿನ ಈ ಇಟಲಿಯ ದಂಡಯಾತ್ರೆ ಪ್ಯಾರಿಸ್ಸಿನಲ್ಲಿ ಮನೆ ಮಾತಾಯಿತು. ಆಗಿನ್ನೂ ಅವನಿಗೆ ಕೇವಲ 28 ವಯಸ್ಸು, ಚಕ್ರವರ್ತಿಯೂ ಆಗಿರಲಿಲ್ಲ ಮತ್ತು ಆಗ ಇದು ಯುರೋಪಿನಲ್ಲಿ ನೆಪೋಲಿಯನ್ನಿನ ಬಿರುಗಾಳಿಯ ಪ್ರಾರಂಭವಷ್ಟೇ.
   ಅಕ್ಟೋಬರ್ 1799ರಲ್ಲಿ ನೆಪೋಲಿಯನ್ ಯುದ್ಧಗಳ ಗೆಲುವಿನ ನಂತರ ಪ್ಯಾರಿಸ್ಗೆ ವಾಪಾಸ್ ಬಂದನು. ಆ ಸಮಯದಲ್ಲಿ ಪ್ರಾನ್ಸ್ನ ವ್ಯೆವಸ್ಥೆ ಸರಿಯಾಗಿರಲಿಲ್ಲ.  ಫ್ರೆಂಚ್ ಕ್ರಾಂತಿಯಾದ ಮೇಲೆ ಬಂದ ಜಾಕೊಬಿನ್ ಸರ್ಕಾರ ಬಿದ್ದು, ಫ್ರಾನ್ಸ್ ದೇಶವನ್ನು ಕೈಗೆ ತೆಗೆದುಕೊಂಡಿದ್ದ ಡೈರೆಕ್ಟರಿಗಳು ಜಗಳವಾಡುತ್ತಿದ್ದರು. ಈ ಕಾರಣ ನೆಪೋಲಿಯನ್ ಧಿಡೀರ್ ಸೈನ್ಯ ಕ್ರಾಂತಿಯನ್ನು ನಡೆಸಿ ಆಡಳಿತ ಆಕ್ರಮಣವನ್ನು ಮಾಡಿದನು.
  2 ನೆ ಡಿಸಂಬರ್ 1804ರಲ್ಲಿ ಗ್ರಾಂಡ್ ಕೊರೋನೇಷನ್ ಕಾರ್ಯಕ್ರಮದಲ್ಲಿ ಎಲ್ಲರ ಮುಂದೆ ನೆಪೋಲಿಯನ್ ಪ್ರಾನ್ಸ್ ಚಕ್ರವರ್ತಿಎಂದು ಪಟ್ಟಾಭಿಶೇಕ ಮಾಡಿಸಿಕೊಂಡನು.
ಇಡೀ ಫ್ರಾನ್ಸ್ ದೇಶದಲ್ಲಿ ಇವನ ಆಳ್ವಿಕೆಯಲ್ಲಿ ಕಾನೂನು ಕೋಡ್ ಮಾಡಿದ್ದನು. ಇದೇ ನೆಪೋಲಿಯನಿಕ್ ಕೋಡ್. ಇದರಲ್ಲಿ ಸಮಾನತೆ, ಜಾತ್ಯಾತೀತ ಮುಂತಾದ ಸರ್ಕಾರವನ್ನು ರೂಪಿಸಿದ್ದನು. ಆದರೆ ಫ್ರೆಂಚ್ ಕ್ರಾಂತಿಯು ಮಹಿಳೆಯರಿಗೆ ತಂದು ಕೊಟ್ಟ ಹಕ್ಕುಗಳನ್ನು ನೆಪೋಲಿಯನ್ ತೆಗೆದುಹಾಕಿದನು.
1. ಧಾರ್ಮಿಕ ಸುಧಾರಣೆಗಳು-1801 ರಲ್ಲಿ ಕೊಂಕೋರ್ಡಟ್ನಲ್ಲಿ ಕತೋಲಿಕ್ ಗಳ ಜತೆ ಶಾಂತಿ ಮಾಡಿದನು.
2. ಆರ್ಥಿಕ ಸುಧಾರಣೆ-ಆರ್ಥಿಕತೆಯನ್ನು ಹೆಚ್ಚಿಸಲು ನೆಪೋಲಿಯನ್ ಹೊಸ ಕೈಗಾರಿಕಾ ಉದ್ಯಮವನ್ನು ಬೆಂಬಲಿಸಿದನು.
3. ಲೋಕೋಪಯೋಗಿ- ರಸ್ತೆಗಳನ್ನು ಹಾಗು ನೀರಿನ ಕೊಡ್ಲುಗಳನ್ನು ತಯಾರಿಸಿ ಜನರಿಗೆ ಸಹಾಯ ಮಾಡಿದನು. ಶಿಕ್ಷಣದಲ್ಲು ಸುಶಾರಣೆಯನ್ನು ತಂದ ಇವನು ಶಾಲೆಗಳನ್ನು ಸರ್ಕಾರದ ಕೆಳಗೆ ತೆಗೆದುಕೊಂಡು ಮಕ್ಕಳನ್ನು ಶಾಲೆಗೆ ಬರುವಹಾಗೆ ಮಾಡಿದನು.ಹಾಗೆಯೆ ಇಡೀ ಫ್ರಾನ್ಸ್ನಲ್ಲಿ ಏಕಪ್ರಕಾರದ ಅಳತೆ ಸಾಧನವನ್ನು ತಂದನು.
4. ಯುದ್ಧ ಸುಧಾರಣೆ-ಯುದ್ಧ ತಂತ್ರಜ್ಞಾನ, ಸೇನಾ ನಡೆಸುವಿಕೆ ಹಾಗು ಆಯುಧ ವಿಜ್ಞಾನಕ್ಕೆ ಫ್ರಾನ್ಸ್ನಲ್ಲಿ ಇವನದ್ದೆ ಹೆಸರು.
ಚಕ್ರವರ್ತಿ ನೆಪೋಲಿಯನ್ನಿಗೆ ಇಡೀ ಜಗತ್ತನ್ನೇ ಗೆಲ್ಲಬೇಕೆಂಬ ಆಸೆಯಿತ್ತು. ಇದರಂತೆ 1805ರಲ್ಲಿ ಆಸ್ತರ್ಲಿಟ್ಜಿ ಯುದ್ಧದಲ್ಲಿ ಆಸ್ಟ್ರಿಯ ಮತ್ತು ರಷ್ಯಾ ಸೈನ್ಯಗಳನ್ನು ಸೋಲಿಸಿ, 1806ರಲ್ಲಿ ಜೇನ ಎಂಬ ಊರಿನಲ್ಲಿ ಪ್ರಷ್ಯಾ ಸೈನ್ಯವನ್ನು ಮುಳುಗಿಸಿದನು. ಅದೇ ವರ್ಷದಲ್ಲಿ ಡಚ್ ರಾಜ್ಯವನ್ನು ಗೆದ್ದು ಗ್ರಾಂಡ್ ಎಂಪೈರ್ ಸೃಷ್ಟಿಸಿದನು.
    ನೆಪೋಲಿಯನ್ ಆಸೆ ಪೂರ್ಣವಾಗಲು ಲೈಪ್ಜಿಗ್ ಯುದ್ಧ ತಡೆಯಾಯಿತು. ಅದರಲ್ಲಿ ನೆಪೋಲಿಯನ್ ಮೊದಲನೇ ಸೂಲನ್ನು ಕಂಡ ಇದರಿಂದಾಗಿ ಇವನನ್ನು ಎಲ್ಬಾ ದ್ವೀಪಕ್ಕೆ ಗಡಿಪಾರು ಮಾಡಲಾಯಿತು. ನೆಪೋಲಿಯನ್ ಅಲ್ಲಿಂದ ತಪ್ಪಿಸಿಕೊಂಡು ಪ್ರಾನ್ಸ್ಗೆವಾಪಸ್ ಬಂದನು. ಮತ್ತೊಮ್ಮೆ ರಾಜನಾಗಿ ೧೦೦ದಿನಗಳ ಕಾಲ ಪ್ರಾನ್ಸ್ ಆಳಿದನು.  ನೂರು ಕದನಗಳ ಸಿಂಹ ಎಂಬ ಹೆಸರನ್ನು ಪಡೆದ ತನ್ನ ಪ್ರಪಂಚ ಗೆಲ್ಲುವ ಕನಸಿಗೆ ತಡೆಗೋಡೆಯಾಗಿದ್ದು ವಾಟರ್ಲೂ ಕದನ. ಇವನು ಅನುಭವಿಸಿದ ಮತ್ತೊಮ್ಮೆ ಸೋಲಿನಿಂದಾಗಿ, ಸೈಂಟ್ ಹೆಲೆನ ದ್ವೀಪಕ್ಕೆ ಗಡಿಪಾರು ಮಾಡಲಾಗುತ್ತೆ. ಇದೇ ಅವನ ಕೊನೆಯ ಯುದ್ಧವಾಗಿತ್ತು.
ನೆಪೋಲಿಯನ್ ಇನ್ನೈದು ವರ್ಷಗಳನ್ನು ಹೆಲೆನ ದ್ವೀಪದಲ್ಲೆ ಕಳೆದನು. ಇವನ ಆರೊಗ್ಯ ಅಸ್ಥಿರವಾಗಿದ್ದು ಟ್ಯೂಬರ್ಕ್ಯುಲೋಸಿಸ್ ಹಾಗು ಲಿವರ್ ತೊಂದರೆಗಳು ಅಂಟಿತ್ತು. ಮೇ 5 1821ರಂದು ಹೊಟ್ಟೆಯ ಕಾನ್ಸರ್ದಿಂದಾಗಿ ನೆಪೋಲಿಯನ್ ವಿಧಿವಶನಾದನು. 
   ಆದರೆ ಇಂದಿಗೂ ಇವನ ಸಾವಿನ ಕಾರಣ ವಿವಾದಾಸ್ಪದವಾಗಿದ್ದು ನಿಗೂಡ ಎನಿಸುತ್ತದೆ.ಕೆಲವರು ನೆಪೋಲಿಯನ್ ಸತ್ತಿದ್ದು ಕಾನ್ಸರ್ದಿಂದಾಗಿ ಎಂದರೆ. ಕೆಲವರು ಅವನನ್ನು ಅರ್ಸೆನಿಕ್ ವಿಷದಿಂದ ಸಾಯಿಸಿದ್ದು ಎನ್ನುತ್ತಾರೆ. ಇಂದಿಗೂ ಫ್ರಾನ್ಸ್ ದೇಶ ನೆಪೋಲಿಯನ್ ದಿನಗಳ ಬಗ್ಗೆ ಹೆಮ್ಮೆ ಪಡುತ್ತದೆ. ಇವನ ನೆಪೋಲಿಯನಿಕ್ ಕೋಡ್ ಈಗಿನ ಫ್ರೆಂಚ್ ಸಂವಿಧಾನವನ್ನು ರೂಪಿಸುತ್ತದೆ. ಆಯುಧ ವಿಜ್ಞಾನ, ಸೇನಾ ನಡವಳಿಕೆ, ಯುದ್ಧ ತಂತ್ರಜ್ಞಾನ ಈಗಲು ಬಳಿಕೆಯಲ್ಲಿದೆ. ವಿಶ್ವದ ಅಡಿಯಲ್ಲಿ ನೆಪೋಲಿಯನ್ ತನ್ನ ನಡತೆಯಿಂದ ಜನರ ಮನಗಳನ್ನು ಗೆದ್ದು, ಅವರಲ್ಲಿ ಮಹತ್ತರ ಬದಲಾವಣೆಯ ಕಲ್ಪನೆಯನ್ನು ಹಾಕಿದನು. ನೆಪೋಲಿಯನ್ ಇಡೀ ವಿಶ್ವವನ್ನು ಗೆಲ್ಲಲಿಕ್ಕಾಗದಿದ್ದರು, ಯುರೋಪ್ ಜನರಲ್ಲಿ ದೇಶಭಕ್ತಿ ಮನೋಭಾವನೆಯನ್ನು ರೋಪಿಸಿದ್ದಾನೆ.
     1796ರಲ್ಲಿ ನೆಪೋಲಿಯನ್ ಜೋಸೆಫೈನ್ಳನ್ನು ಮದುವೆಯಾದನು. ಜೋಸೆಫೈನ್ ಗೆ ಮಕ್ಕಳಿಲ್ಲದ ಕಾರಣ ೧೮೧೦ರಲ್ಲಿ ಮೇರಿ ಲುಯಿಸಿಳನ್ನು ಮದುವೆಯಾದನು. ಇವರಿಬ್ಬರಿಗೆ ನೆಪೋಲಿಯನ್ ಚಾರ್ಲೆಸ್ ಎಂಬ ಮಗನು ಹುಟ್ಟಿದನು. ಅವನು ಮುಂದೆ ನೆಪೋಲಿಯನ್-೨ ಎಂದು ಪ್ರಸಿದ್ಧಿಯಾದನು.
     ನೆಪೋಲಿಯನ್ ಮತ್ತು ಕರುನಾಡಿಗೂ ನಂಟಿರುವುದನ್ನು ಕಾಣಬಹುದು. ನೆಪೋಲಿಯನ್ ಮತ್ತು ಮೈಸೂರಿನ ಹುಲಿ ಟಿಪ್ಪುಸುಲ್ತಾನನ ನಡುವೆ ಸ್ನೇಹ ವಿತ್ತು ಅನ್ನೋದು ಒಂದಂಶದಿಂದ ತಿಳಿದು ಬರುತ್ತೆ. ಬ್ರೀಟೀಷರನ್ನು ಹೊಡೆದೋಡಿಸಬೇಕು ಎಂಬ ದೃಡ ಸಂಕಲ್ಪ ಮಾಡಿದ್ದ ಟಿಪ್ಪು ನೆಪೋಲಿಯನ್ ನ್ನನ ಸಹಾಯ ಯಾಚಿಸಿದ್ದ. ವಿಧಿಯಾಟವೆಂಬಂತೆ ಆ ಸಮಯದಲ್ಲಿ ಫ್ರಾನ್ಸಿನ ಸೈನ್ಯ ಆತಂಕದಲ್ಲಿದ್ದ ಕಾರಣ ನೆಪೋಲಿಯನ್ ಬರುವೆನೆಂದು ಮಾತುಕೊಟ್ಟು ನಂತರ ನಿರಾಕರಿಸಿದ್ರು. ಇದು ನಡೆದ್ದು ಹದಿನೆಂಟನೆಯ ಶತಮಾನದಲ್ಲಿ ಬಹುಶಃ ಅಂದು ನೆಪೋಲಿಯನ್ ಟಿಪ್ಪುವಿಗೆ ಸಹಾಯ ಹಸ್ತ ಚಾಚಿದ್ರೆ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆಯುವುದಕ್ಕೆ ಮೊದಲೇ ಭಾರತ ಸ್ವಾತಂತ್ರ್ಯವನ್ನು ಪಡೆದಿರುತ್ತಿತ್ತು ಎಂಬುದು ಗಮನಿಸಬೇಕಾದ ಸಂಗತಿ.
ಮಂಜುನಾಥ್ ಹೆಚ್.ಆರ್
Mail : m


anjunathahr1991@gmail.com

Thursday 12 May 2016

ಕೋಪ


   ಕೆಲವರಿಗೆ ತಮ್ಮ ಬಗ್ಗೆ ತಿಳಿದುಕೊಳ್ಳುವ ಕುತುಹಲ ಮತ್ತೆ ಕೆಲವರಿಗೆ ಅದರಿಂದಾಗುವ ಪ್ರಯೋಜನವೇನಿಲ್ಲ ಎಂಬ ಜಂಬದ  ಮಾತು. ಇವರೆಡರ ಮಧ್ಯೆ ತಮ್ಮ ಬಗ್ಗೆ ಬೇರೆಯವರ ಅಭಿಪ್ರಾಯ ತಿಳಿದುಕೊಳ್ಳುವ ತವಕ ಕುತೂಹಲ. ಇದರ ಪಟ್ಟಿಗೆ ಸೇರಿದವನು ಮೋಹನ್. ತುಂಬಾ ನೀಟ್, ಕಬ್ಬು ಕತ್ತರಿಸಿದಂತೆ ಮಾತು, ಈ ಕೆಲಸ ಹೀಗೆ ಆಗಬೇಕಂದರೆ ಅದು ಆ ಕ್ಷಣದಲ್ಲೇ ಆಗಬೇಕು. ಸ್ವಲ್ಪ ಲೇಟಾಯಿತೆಂದರೆ ಅವನ ಮುಖದಲ್ಲಿ ಆಗುವಂತ ಬದಲಾವಣೆ ಉಹೆ ಮಾಡುವುದಕ್ಕೂ ಆಗುವುದಿಲ್ಲ. ಮೂಗಿನ ತುದಿಯ ಮೇಲಿರುವ ಕೋಪ.
  ಹುಡುಗರ ಅಡ್ಡ ಸೋಮಾರಿ ಕಟ್ಟೆಯ ಮೇಲೆ ಕುಳಿತು ಮಾತನಾಡುವಾಗ ಆ ದಿನ ಮೋಹನ್ ಖುಷಿಯಾಗಿ ಇದ್ದ, ಇದೇ ಸಮಯ ಒಳ್ಳೆಯದೆಂದು ಜೀವಾ, ಮಗಾ ನಿನಗೊಂದು ಮಾತು ಹೇಳ್ತಿನಿ  ಬೇಜಾರು ಮಾಡ್ಕೊಬೇಡ, ನಿನ್ನತ್ರ ಎಂತ ಬೇಜಾರು ಹೇಳು ಮಗಾ, ಮೊದಲು ನಿನ್ನ ಕೋಪನ ಕಡಿಮೆ ಮಾಡ್ಕೊ, ಮೋಹನನಿಗೆ ಫುಲ್ ಶಾಕ್, ಏನಪ್ಪ ಇವನು ನನ್ನ ಬಗ್ಗೆ ಈ ರೀತಿ ಹೇಳತಿದನಲ್ಲ. ಯಾಕೆಂದ್ರೆ ಜೀವಾ ಇಂದು ನೆನ್ನೆ ಫ್ರಂಡ್ ಆದವನಲ್ಲ ಬಾಲ್ಯದಿಂದಲೇ ಒಟ್ಟಿಗೆ ಆಡಿ ಬೆಳೆದವರು. ನಾನೆಂದು ಇವನಿಂದ ಇಂತ ಮಾತನ್ನು ಬಯಸಿರಲಿಲ್ಲ ಅನ್ನೊ ಸಾಲು ಮನದೊಳಗೆ ಗಿರಕಿ ಹೊಡೆಯುತ್ತಿತ್ತು.
ಅದಕ್ಕೂ ಒಂದು ಕಾರಣ ಇದೆ. ಇದುವರೆಗೂ ಮೋಹನನ ಹತ್ತಿರದಿಂದ ಬಲ್ಲವರು, ಅವನ ಗೆಳೆತನವನ್ನು ಮಾಡಿದವರು ಮೋಹನ್ ಒಬ್ಬ ಇನೊಸೆಂಟ್, ಸೈಲೆಂಟ್, ಕೊಪನೇ ಮಾಡ್ಕೊಳದಿಲ್ಲ ಇವನ ಹಾಗೆ ನಮಗೆ ಇರೋದಕ್ಕೆ ಆಗಲ್ಲವಲ್ಲ ಅನ್ನೋ ಮಾತುಗಳೆ ಕೇಳುತ್ತಿದ್ದ ಇನನಿಗೆ ಇದೊಂದು ಹೊಸದು ಅನ್ನಿಸಿಬಿಟ್ಟಿತ್ತು.
   ಮುಂಗೋಪವನ್ನು ಕಡಿಮೆ ಮಾಡಿಕೊಳ್ಳೋ ಅನ್ನು ಮಾತು ಕೇಳಿ ಮೋಹನ್ ಗೆ ಅರಗಿಸಿಕೊಳ್ಳುವುದಕ್ಕೆ ಆಗಲಿಲ್ಲ, ನಿಧಾನವಾಗಿ ಯೋಚನೆ ಮಾಡಿದ, ಹಿಂದೆ ಕೆಲವರು ಅವನ ಗುಣದ ಬಗ್ಗೆ ಹೇಳಿದ್ದೆಲ್ಲ ನೆನಪಾಯಿತು. ಇರಬಹುದೇನೋ ಎನ್ನುವ ನಿದ್ರಾರಕ್ಕೆ ಬಂದ.
   ಅದು ಅವನ ಕುಟುಂಬದಿಂದ ಬಂದ ಬಳುವಳಿ, ಅಮ್ಮ ತುಂಬಾ ಸ್ಟ್ರಿಟ್, ಮನೆಯಲ್ಲಾಗಲಿ ಹೊರಗೆಯಾಗಲಿ, ನಿಟಾಗಿ ಇರ್ಬೇಕು ಅನ್ನೋದು ಅವರ ವಾದ, ಇದಕ್ಕೆ ಅಪ್ಪಾ ಏನು ಕಡಿಮೆ ಅಲ್ಲ ಶಿಸ್ತಿನಲ್ಲಿ ಅವರು ಒಂದು ಹೆಜ್ಜೆ ಮುಂದೇನೆ ಇರ್ತಾರೆ. ಆದ್ರೆ ಒಂದು ಅಮ್ಮನಿಗೆ ಕೋಪ ಜಾಸ್ತಿ, ಅಪ್ಪನಿಗೆ ತಾಳ್ಮೆ ಜಾಸ್ತಿ, ಇದರಿಂದಾಗಿ ಮೋಹನ್ ಬೇಗ ಕೋಪನು ಬರುತ್ತೆ ಅಷ್ಟೇ ಬೇಗ ತಾಳ್ಮೆನೂ ತಗೊತಾನೆ. ತಾಳ್ಮೆಗಿಂತ ಮುಂಗೋಪ ಇವನನ್ನ ಬಿಟ್ಟಿರಲಾರದೇನೋ ಅನ್ನಿಸಿ ಬಿಡುತ್ತೆ.
  ಮುಂಗೋಪದಿಂದಾಗಿ ಬಹಳ ತೊಂದರೆಗಳಿಗೆ ಒಳಗಾಗಿದ್ದ, ತುಂಬಾ ಆತ್ಮೀಯರನ್ನು ಕಳೆದುಕೊಂಡಿದ್ದಾ. ಜೀವಾನ ಮಾತನ್ನು ಸಮಾದಾನದಿಂದ ಕೇಳಿದ ಮೋಹನ್ ತನ್ನ ಬಗ್ಗೆ ಬೇರೆಯವರಲ್ಲಿ ಇರುವ ಅಭಿಪ್ರಾಯವನ್ನ ಪಡೆದುಕೊಂಡ. ಒಂದು ವೇಳೆ ಆಗ ಕೋಪ ಮಾಡಿಕೊಂಡಿದ್ದರೆ. ಜೀವನ ಬದಲಾಗುತ್ತಿರಲಿಲ್ಲ. ಜೀವವೇ ಬದಲಾಗುತ್ತಿತ್ತು.
  ಕೋಪ ಎಲ್ಲರಿಗೂ ಬರುತ್ತೆ ಅದನ್ನ ತಾಳ್ಮೆಗೆ ತೆಗೆದುಕೊಂಡು ನಡೆದರೆ ಜೀವನ ಸುಂದರ, ಸ್ವಲ್ಪ ಹೆಚ್ಚಾದರೆ ನರಕದ ದರುಶನ, ನಮಗೆ ಮಾತ್ರವೇ ಕೋಪ ಬರುವುದು ಎಂದು ಮಾತನಾಡುವವರು ಇದ್ದಾರೆ. ಅದು ಅವರ ದಡ್ಡತನ, ಕೋಪ ಬಂದರೆ ಒಬ್ಬರಿಗಿಂತ ಮತ್ತೊಬ್ಬರು ಹೆಚ್ಚೇ ಇರುತ್ತಾರೆ.
ಮಂಜುನಾಥ್ ಹೆಚ್.ಆರ್.
Gmail : manjunathahr1991@gmail.com

ಆತುರದ ಻ಅವಾತಂರಗಳು....

ವೃತ್ತಿ ಜೀವನದ ಮೊದಲ ಲೇಖನ ಸರಿಯೋ ತಪ್ಪೋ, ಬರೆಯಲೇ ಬೇಕೆಂದಾಗ ಸರಿ ತಪ್ಪುಗಳನ್ನು ತಿದ್ದಿದವರಿಗೆ ನನ್ನ ಕೃತಜ್ಞತೆ..........

Sunday 1 May 2016

ಅದೇ ಹದಿನೆಂಟನೇ ಪಾಠ - ಪ್ರೀತಿಯ ಕಾಟ


    ಕೆಲವು ಸಲ ಇಷ್ಟ ಪಟ್ಟು ಬರೆಯುವುದಕ್ಕಿಂತ ಕಷ್ಟ ಪಟ್ಟು ಬರೆಯಬೇಕಾಗುತ್ತೆ ಯಾಕೆ ಅಂತ ಗೊತ್ತಿಲ್ಲದೆ, ಯಾರಿಗೆ ಅಂತ ಹೇಳದೆ, ಕೈ ಹಿಡಿದ ಲೇಖನಿ ಒಂದೇ ಆಧಾರವಾಗಿ ನಿಂತಿರುತ್ತೆ. ಬಿಳಿಯ ಸ್ವಚ್ಚಂದ ಹಾಳೆಯ ಮೇಲೆ ಕಪ್ಪು ಮಸಿಯ ಆಲಿಂಗನ ಆಗುವಲ್ಲಿ. ಮನದೊಳಗೆ ಮುಚ್ಚಿಟ್ಟ ಮನದ ಭಾವನೆಯ ಗೂಡು ನಿಧಾನವಾಗಿ ತೆರೆದುಕೊಳ್ಳುತ್ತೆ. ಇದನ್ನು ಬರೆಯುವುದಕ್ಕೆ ಇಷ್ಟು ದಿನ ಬೇಕಾಯಿತಲ್ಲ ಅನ್ನುವುದು ಒಂದು ಕಡೆ, ಇಷ್ಟು ದಿನವಾದರು ಯಾಕೆ ಬರೆಯಲಿಲ್ಲ ಅನ್ನುವುದು ಮತ್ತೊಂದು ಕಡೆ. ಈಗಲಾದರೂ ಬರೆಯುತ್ತಿದ್ದೇನಲ್ಲ ಅನ್ನುವುದು ಒಳಗೊಳಗೆ ಸಂತೋಷದ ಖುಷಿಯ ಕಡೆಗೆ. ಪ್ರೀತಿಯ ಮೂಲೆಗೆ.
  ತಲೆಗೆ ಅರಳೆಣ್ಣೆ ಮೆತ್ತಿಕೊಂಡು, ಪಟ್ಟೆ ಪಟ್ಟೆ ಅಂಗಿ ತೊಟ್ಟ, ದೊಗಲೆಯ ಪ್ಯಾಂಟ್ ಸೇರಿಸಿಕೊಡು, ಸವೆಯಲು ಇನ್ನೇನು ಇಲ್ಲದ ಹಾವಾಯ್ ಚಪ್ಪಲಿಯ ಕಾಲಿಗೆ ಸಿಕ್ಕಿಸಿ ಓಡಾಡುತ್ತಿದ್ದವನಿಗೆ, ಆಕಸ್ಮಿಕವಾಗಿ ಪಿಯುಸಿ ಪಾಸ್ ಮಾಡಿಕೊಂಡು, ಫ್ಯಾಷನ್ ತನ್ನ ಉಸಿರಾಗಿಸಿಕೊಂಡು ತಿರುಗಾಡುವ ಕಾಂಕ್ಟ್ರಿ್ ನಗರಕ್ಕೆ ಕಾಲಿಟ್ಟರೆ ಹೇಗೆ ಆಗಬೇಡ. ಅಲ್ಲಿ ಏನು ಮಾಡಬೇಕು ಎಂದು ತೋಚದೆ. ಕಾಲೇಜಿನ ಮರ ಒರಗಿ ನಿಂತ್ತಿದ್ದೆ.
  ಅವಸರ ಅವಸರವಾಗಿ ಗುಳಿ ಕೆನ್ನೆಯ ಹುಡಿಗಿಯೊಬ್ಬಳು ಹತ್ತಿರ ಬಂದು ಕೆಮಿಸ್ಟ್ರಿ ಲ್ಯಾಬ್ ಯಾವ ಕಡೆ ಎಂದು ಹೇಳಿ, ಅವಳ ಮುಖವನ್ನೇ ನೋಡುತ್ತಿದ್ದ. ನನ್ನ ಮುಖವನ್ನು ನೋಡಿ. ಅವಳೇ ಮಾತನಾಡಿಕೊಳ್ಳುತ್ತಾ ಥ್ಯಾಂಕ್ಸ್ ಹೇಳಿ ಹೋದಳು. ಹಳ್ಳಿಯಲ್ಲಿ ದೆವ್ವ ಬಂದವರು ಬಿಡುವ ಹಾಗೆ ಕೂದಲು, ಅವರಪ್ಪ ಚಿಕ್ಕ ವಯಸ್ಸಿನವಳಾಗಿದ್ದಾಗ ತಂದಿದ್ದ ಟೀ ಶಟ್ರ್, ಹರಿದ ಬಟ್ಟೆ ಹಾಕುವ ಬಡವರಂತೆ ಹರಿದ ಜೀನ್ಸ್ ಪ್ಯಾಂಟ್ ಎಲ್ಲಾ ಹೊಸತರಲ್ಲಿ ಹೊಸತು.
  ಮರುದಿನ ಹತ್ತಿರ ಬಂದು ಅವಳೇ ಮಾತನಾಡಿಸುವಾಗ, ಗಂಟಲಿನಲ್ಲಿ ನೀರು ಹಿಂಗಿ ಹೋಗಿದ್ದು ಅವಳಿಂದಾಗಿಯೇ, ಅವಳ ಮಿಂಚಿನ ಕಣ್ಣಿನಿಂದಾಗಿಯೇ, ಬಯಸಿ ಬಂದ ಅವಳ ಸ್ನೇಹ ಬೇಡ ಎನ್ನಲು ಮನಸ್ಸಾಗದೇ ಅವಳನ್ನೇ ಹಿಂಬಾಲಿಸಿತ್ತು. ಅವಳ ನೋಡುತ್ತಾ ಬದಲಾಗಿದ್ದು, ನಾನು ನನ್ನ ಜೀವನ ಶೈಲಿ. ಬರು ಬರುತ್ತಾ ಬಿಟ್ಟಿರಲಾರದ ಸಂಬಂಧ. ಏನೆಂದು ಹೇಳಬೇಕು ಅವಳ ಚಂದ.
 ಸಾಲು ಸಾಲು ಮರ ಸುತ್ತುವ ಹಂಬಲ, ಕೆಳಬೇಕೆ ಅವಳ ಅನುಮತಿ, ತಿರಸ್ಕರಿಸಿದರೆ ಏನು ಮಾಡುವುದು, ಕಳೆದುಕೊಳ್ಳುವುದಕ್ಕಿಂತ. ಅವಳ ನೆನಪಿನಲ್ಲಿ ಕೊನೆಯವರೆಗೂ ಇರಲೇ. ಕೊನೆಯವರೆಗೂ ನನ್ನ ಮನದ ಒಡತಿ ಬರುವವರೆಗೂ.
ಮಂಜುನಾಥ್ ಹೆಚ್.ಆರ್.
Email : manjunathahr1991@gmil.com