Monday 29 February 2016

ಮದುವೆ ಎಂಬ ಮೂರಕ್ಷರ .......!

 ಕೆಲವರು ಹುಡುಗರಿಗೆ ಮದುವೆ ಅಂದ್ರೆ ಖುಷಿ ಈ ಬ್ರಹ್ಮಚರ್ಯ ಜೀವನಕ್ಕೆ ವಿದಾಯ ಹೇಳಿ ಧಾಂಪತ್ಯ ಜೀವನಕ್ಕೆ ಯಾವಾಗ ಕಾಲಿಡುತ್ತೇವೋ ಎಂದು ಅನ್ನಿಸಿಬಿಟ್ಟಿರುತ್ತದೆ. ಹೆಂಡತಿ ಮಕ್ಕಳು  ಆ ಸಂಸಾರದ ಸುಖವನ್ನು ಅನುಭವಿಸಲು ಹಾತೊರೆಯತ್ತಿರುತ್ತಾರೆ. ಮತ್ತೆ ಕೆಲವರು ಮದುವೆಗೂ ಮುನ್ನ ಜೀವನದಲ್ಲಿ ಏನಾದರೂ ಸಾಧನೆ ಮಾಡಿ ಸಾಕಷ್ಟು ಹಣವನ್ನು ಸಂಪಾದನೆ ಮಾಡಿಕೊಂಡು ನಂತರ ಮದುವೆ ಮಾಡಿಕೊಳ್ಳೋಣವೆಂದುಕೊಂಡಿರುತ್ತಾರೆ. ಹೀಗೆ ಒಬ್ಬೂಬ್ಬರದು ಒಂದೂಂದು ರೀತಿಯ ಕನಸುಗಳಿರುತ್ತವೆ ಮದುವೆಯ ಬಗ್ಗೆ ಭಯ ಇರುವುದಿಲ ಆದರೆ ಕೆಲವರಿಗೆ ಮದುವೆ ಎಂದರೆ ಭಯ ಶುರುವಾಗುತ್ತೆ.
       ಶ್ರೀನಿವಾಸನನ್ನು ನೋಡಿ ದೇವರಾಜ ಬಿದ್ದು ಬಿದ್ದು ನಗುತ್ತಿದ್ದನು ಯಾಕೆಂದು ಅರ್ಥವಾಗದ ನಮಗೆ ಅವನ ನಗು ನೋಡಿ ತಡೆಯಲಾಗದೆ ನಾವು ನಗುತ್ತಿದ್ದವು ಶ್ರೀನಿವಾಸ  ಯಾಕ್ರೊ ಹೀಗೆ ನಗ್ತಿದಿರಾ,? ಅದೇನು ಹೇಳ್ರೋ ನಾನು ನಗ್ತಿನಿ ಎಂದು ಹೇಳಿದ. ದೇವರಾಜ ಮಾತು ಆರಂಭಿಸಿ ಏನಪ್ಪ ನಿನಗೆ ಧೈರ್ಯ ಜಾಸ್ತಿನ, ತಾಳಿ ಕಟ್ಟಬೇಕಾದ್ರೆ ನಿನ್ನ ಕೈ ನಡುಗೊದಿಲ್ಲವ, ನಿನ್ನ ಮದುವೆ ದಿನ ತಾಳಿ ಕಟ್ಟಬೇಕಾದ್ರೆ ನಡುಗಿಸುತ್ತಿದ್ದುದು ನಮ್ಮ ಕೈ ಎಂದು ಗೇಲಿ ಮಾಡಿ ನಗು ಜೋರು ಮಾಡಿದನು. ಶ್ರೀನಿವಾಸ ಮದುವೆಗೆ ಮುನ್ನ ಅನೇಕ ಮದುವೆಗಳಲ್ಲಿ ವರ ವಧುವಿಗೆ ತಾಳಿಯನ್ನು ಕಟ್ಟ ಬೇಕಾದರೆ ವರನ ಕೈ ನಡುಗುವುದು ಸಹಜ ಆದರೆ ಒಣ ಪ್ರತಿಷ್ಟೆಗೆ ಶ್ರೀನಿವಾಸ ಇದನ್ನು ಹೇಳೀದ್ದ ಕೊನೆಗೆ ಎಲ್ಲರ ಅಪಹಾಸ್ಯಕ್ಕೆ ಒಳಗಾಗಿ ಅರೆಕ್ಷಣ ಮಂಕಾಗಿದ್ದನು.
ಇದು ಶ್ರೀನಿವಾಸನದು ಇನ್ನು ಲಕ್ಷಿ ನಾರಾಯಣನನ್ನು ನೆನಸಿಕೊಂಡರೆ ಸಾಕು ಮಧ್ಯ ರಾತ್ರಿ ಕನಸಿನಲ್ಲೂ ನಗು ಬಾರದೆ ಇರಲಾರದು. 
     ಮಗ ಮದುವೆ ವಯಸ್ಸಿಗೆ ಬಂದಿದ್ದಾನೆ ಆತನಿಗೆ ಮೊದಲು ಒಂದು ಮದುವೆ ಮಾಡಬೇಕು ಇವನ ಇಬ್ಬರು ತಮ್ಮಂದಿರು ಇನ್ನೆರಡು ವರ್ಷದಲ್ಲಿ ಮದುವೆಗೆ ಬಂದುಬಿಡುತ್ತಾರೆ. ಎಂದು ಮನೆಯಲ್ಲಿ ಮದುವೆಯ ವಿಚಾರದ ಪ್ರಸ್ತಾಪ ಮಾಡಿದರು ಇದಾದ ಒಂದು ದಿನದಲ್ಲಿ ಪಾಪ ಲಕ್ಷಿ ನಾರಾಯಣ ಚಳಿ ಜ್ವರ ಬಂದು ಹಾಸಿಗೆ ಹಿಡಿದನು. ಇದುವರೆಗೂ ಮನೆಯವರಿಗೂ ಗೊತ್ತಿಲ್ಲ ಇತನಿಗೆ ಯಾಕೆ ಚಳಿ ಜ್ವರ ಬಂದಿದ್ದು ಅಂತ. ಇದನ್ನು ಕೇಳಿ ನಾವೆಲ್ಲರು ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದರೆ ನಮ್ಮ ಕಷ್ಟ ನಮಗೆ ನಿಮಗೇನು ನಗು ಬರುತ್ತೆ ಬಿಡ್ರೊ ಲೋ ಎಂದು ಬೇಜಾರಿನಿಂದ ನುಡಿದನು.
    ನಮ್ಮ ಪುಟ್ಟ ರಾಜುವಿನದು ಮತ್ತೊಂದು ತೆರನಾದುದು ಮನೆಗೆ ಹಿರಿಯನಾದ್ದರಿಂದ ಮನೆಯಲ್ಲಿ ಮದುವೆ ಶುಭ ಕಾರ್ಯ ನಡೆದು ಸುಮಾರು ವರ್ಷಗಳು ಕಳೆದಿದ್ದವು. ಸಹಜವಾಗಿ  ನನ್ನ ಮದುವೆಯೇ ಎಂದು ನಂಬು ಸ್ಥಿತಿಯಲ್ಲಿರಲಿಲ್ಲ ಮನೆಯಲ್ಲಿ ಸಹಜವಾಗಿ ಹಿರಿಯರು ಹೆಣ್ಣು ನೋಡಲು ಆರಂಬಿಸಿದರು ಈತ ಮನೆ ಬಿಟ್ಟು ತೋಟ ಸೇರಿದ. ಯಾಕೋ ಮನೆ ಬಿಟ್ಟು ತೋಟ ಸೇರಿದಿಯ ಎಂದು ಕೇಳಿದರೆ ಮದುವೆ ಎಂದ ಹೌದು ಕಣೊ ನಿನಗೆ ಮದುವೆ ಮಾಡ್ತಿರೋದು ಅದಕ್ಕೆ ನಾನು ಮನೆ ಬಿಟ್ಟು ತೋಟದ ಮನೆಯಲ್ಲಿ ಇದ್ದಿನಿ ಎಂದ ಅಲ್ಲ ಕಣೊ ಮದುವೆ ಅಂದ್ರೆ ಎಲ್ಲರೂ ಖುಷಿ ಪಡ್ತಾರೆ, ನೀನ್ ನೊಡಿದ್ರೆ ಭಯ ಆಗುತ್ತೆ ಅಂತ ಹೇಳ್ತಿದಿಯಲ್ಲ ಮರಾಯ ಎಂದು ಅವನನ್ನು ಮನೆಗೆ ಕರೆ ತಂದಿದಾಯ್ತು.
   ರೇಣುಕಯ್ಯ ಒಲ್ಲದ ಮನಸ್ಸಿನಿಂದ ಮದುವೆಗೆ ಒಪ್ಪಿ ಮದುವೆ ನಡೆದ ಒಂದು ದಿನದಲ್ಲಿ ನಮ್ಮ ಬಳಿ ಬಂದು ಕಣ್ಣೀರಾಕಿದ್ದು ಉಂಟು. ಅದು ಸಂತೋಷಕ್ಕೊ ಅಥವಾ ದುಃಖಕ್ಕೊ ತಿಳಿಯದು ಆದರೆ ಈ ಬ್ಯಾಚುಲರ್ ಲೈಫ್ ಮತ್ತೆ ಬಾರದು ಅದು ಬರಿ ನೆನಪು ಮಾತ್ರ. 
ಮಂಜುನಾಥ ಹೆಚ್.ಆರ್.

E – mail : manjunathahr1991@gmail.com



ಗೆಳೆಯನ ಫಸ್ಟ್ ಲವ್ ಲೆಟರ್.........!
  
  ಮಳೆಗಾಲದಲ್ಲಿ ಮಳೆ ಬೀಳುವ ರೀತಿ ಟಿನೇಜ್‍ನಲ್ಲಿ ಮೋಹನ್‍ಗೆ ಲವ್ ಆಗಿತ್ತು. ಮಾನವ ಅನ್ನೊ ಪ್ರಾಣಿಗೆ ಲವ್ ಆದ್ರೆ ಏನೇನ್ ಆಗುತ್ತೋ ಆ ಎಲ್ಲ ಲಕ್ಷಣಗಳು ಅವನಲ್ಲಿ ಎದ್ದು ಕಾಣುತ್ತಿದ್ದವು. ಅದು ಅವನ ಅತ್ತೆ ಮಗಳು ಜ್ಯೋತಿಯ ಮೇಲೆ. ಅವಳಿಗೆ ತನ್ನ ಪ್ರೀತಿಯನ್ನ ಹೃದಯಕ್ಕೆ ತಟ್ಟುವಂತೆ ಹೇಗೆ ಹೇಳಬೇಕು ಎಂದು ಗೊತ್ತಾಗದೆ ತುಂಬ ತಲೆ ಕೆಡಿಸಿಕೊಂಡು ಮಟ ಮಟ ಮಧ್ಯಾಹ್ನದಲ್ಲಿ ನಕ್ಷತ್ರ ಎಣಿಸೊ ಕೆಲಸ ಮಾಡುತ್ತಿದ್ದ. ಆಗಲೊ ಈಗಲೊ ಮರಿಹಾಕುವ ಬೆಕ್ಕಿನ ಹಾಗೆ ಇತ್ತು ಅವನ ಪರಿಸ್ಥಿತಿ.
   ಅವನ ಪಾಡನ್ನು ನೋಡಿಯು ನೊಡಲಾಗದೆ ಇರಲು ನಾವೇನು ಅವನ ಸಂಬಂಧಿಗಳಾಗಿರಲಿಲ್ಲ ಅದೇನೋ ಚಡ್ಡಿ ದೋಸ್ತಿ ಅಂತರಲ್ಲ ಹಾಗೇನು ಇರಲಿಲ್ಲ ಚಿಕ್ಕ ವಯಸ್ಸಿನಲ್ಲಿ ಚಡ್ಡಿ ಎಲ್ಲಿಗೆ ಹಾಕೊಬೇಕು ಎಂದು ಗೊತ್ತಾಗದೆ ತಲೆ ಮೇಲೆ ಹಾಕಿಕೊಂಡು ಓಡಾಡುತ್ತಿದ್ದ ದೋಸ್ತಿಗಳು. ಎಲ್ಲ ಫ್ರೆಂಡ್ಸ್ ತಮ್ಮ ತಮ್ಮ ಕಷ್ಟ-ಸುಖಗಳನ್ನ ತಮ್ಮ ತಮ್ಮ ಫ್ರೆಂಡ್ಸ್ ಹತ್ರ ಹೇಳಿಕೊಳ್ಳುವ ಹಾಗೆ ಅವನು ತನ್ನ ಪ್ರೇಮ ಕಥೆಯನ್ನು ನಮ್ಮ ಬಳಿ ಬಿಚ್ಚಿಟ್ಟನು.
ನಿಧಾನವಾಗಿ ಮಹೇಶ್, ಮನು ಯೋಚನೆ ಮಾಡುತ್ತ ಇದಕ್ಕೆ ಒಂದು ಉಪಾಯ ಮಾಡಲೇ ಬೇಕು ಅಂತ ಒಂದು ದಿನ ರಾತ್ರಿ ಮಹೇಶನ ತೋಟದ ಮನೆಯಲ್ಲಿ ಗುಂಡಿನ ಪಾರ್ಟಿ ಇಟ್ಟರು. ಅವರಿಗೆ ಕುಡಿಯುವುದಕ್ಕೆ ಅಂತ ನಾಲ್ಕು ಬಿಯರ್ ಮತ್ತು ಅದರ ಜೊತೆಗೆ ಸ್ನ್ಯಾಕ್ಸ್ ತಂದಿದ್ದನು ಮೋಹನ. ಇದು ಸಾಲದು ಅಂತ ಮೂರು ಜನಕ್ಕೂ ಬಿರಿಯಾನಿ ಕಟ್ಟಿಸಿಕೊಂಡು ಬಂದಿದ್ದನು. ಅದೇ ಫಸ್ಟ್ ಟೈಮ್ ಎಲ್ಲರು  ಹಾಟ್ ಡ್ರಿಂಕ್ಸ್ ಕುಡಿಯುತ್ತಿರುವುದು. ಯಾರೋ ಹೇಳೀದ್ದರಂತೆ ಎಣ್ಣೆ ಹೊಡೆದರೆ ಒಳ್ಳೆ ಒಳ್ಳೆ ಐಡಿಯಾ ಬರುತ್ತವೆ ಅಂತ ಅದನ್ನ ನೆನಪು ಮಾಡಿಕೊಂಡು ಮಹೇಶ ಮೋಹನನಿಗೆ ಈ ಡಬ್ಬ ಐಡಿಯಾ ಕೊಟ್ಟಿದ್ದ ಪಾಪ ಮೂಕ ಪ್ರಾಣಿ ಮುಂದೆ ಬಂದರೆ ಹಾಯುವುದಿಲ್ಲ ಹಿಂದೆ ಬಂದರೆ ಒದೆಯುವುದಿಲ್ಲ ಅಂತ ಸ್ಥಿತಿ ಮೋಹನನದಾಗಿತ್ತು ಮೂಗನ ಕೂಗಿಗೆ ಮೋಡ ಕರಗಿ ಮಳೆ ಹನಿ ಬಂದರು ಬರಬಹುದೆಂದು ನಂಬಿದ್ದ.
   ಅಂದು ಒಂಬತ್ತು ಗಂಟೆಗೆ ಸರಿಯಾಗಿ ಊರು ಖಾಲಿ ಮಾಡಿ ಮಹೇಶನ ತೋಟದ ಮನೆಯನ್ನು ಸೇರಿದರು. ಅಮವಾಸ್ಯೆಯ ಕತ್ತಲಲ್ಲಿ ಹುಣ್ಣಿಮೆಯ ಬೆಳಕನ್ನು ಕಾಣುವ ಆಸೆ ಮೋಹನನದಾಗಿತ್ತು. ತೋಟದ ಮನೆಯ ಬಾಗಿಲನ್ನು ತೆರೆದು ಒಳಗೆ ಮೂರು ಜನರು ಕುಳಿತುಕೊಂಡರು. ಮೋಹನ ಲೋ ನೀವು ಹೇಳಿದ ಹಾಗೆ ಮಾಡಿದಿನಿ ಲವ್ ಲೆಟರ್ ಬರೆಯೋಕೆ ಐಡಿಯಾ ಕೊಡ್ರೊ, ಇವನ ಮಾತು ಮುಗಿಯುವುದರಲ್ಲಿ ಮನು ನಾವಿನ್ನು ಎಣ್ಣೆನೇ ಹೊಡೆದಿಲ್ಲ ಮೊದಲು ಕುಡಿಯೋಣ ಆಮೇಲೆ ಐಡಿಯಾ ಕೊಡ್ತಿವಿ ಸ್ವಲ್ಪ ಸಮಾದಾನ ಮಾಡ್ಕೊಳೊ.
    ಒಂಬತ್ತು ತಿಂಗಳು ಕಾಯ್ದವನಿಗೆ ಇನ್ನ ಒಂದು ದಿನ ಕಾಯೋಕೆ ಆಗಲ್ವ ಎಂದು ಮನಸ್ಸಿನಲ್ಲಿ ಗೊಣಗುತ್ತ ಲೋಟದೊಳಗೆ ಬಿಯರ್ ಸುರಿದನು ಮೋಹನ. ಮನು ಮೊದಲು  ಸ್ನ್ಯಾಕ್ಸ್ ತಿನ್ನಬೇಕಾ, ಬಿಯರ್ ಕುಡಿಬೇಕಾ ಇದಕ್ಕೆ ಮಹೇಶ ಲೋ ಮನು ನಾನೇನ್ ನಿನ್ನ ಕಣ್ಣಿಗೆ ದೊಡ್ಡ ಕುಡುಕನ ಹಾಗೆ ಕಾಣಿಸ್ತಿದಿದಿನ?, ನನಗೇನೊ ಹಾಗೆ ಕಾಣೀಸ್ತಿದಿಯ ಎಂದನು ಮನು, ಲೋ ಮಾತು ಸಾಕು ಬೇಗ ಕುಡಿದು ನನಗೊಂದು ಒಳ್ಳೆ ಐಡಿಯಾ ಕೊಡ್ರೊ. ಆಯ್ತು ಆಯ್ತು ಕೊಡ್ತಿವಿ, ನೀನು ಹೀಗೆ ಟಾರ್ಚರ್ ಕೊಡ್ತಿದ್ರೆ ನಾವ್ ಹೊರಟೊಗ್ತಿವಿ ಅಷ್ಟೆ. ಒಳ್ಳೆ ಫ್ರೆಂಡ್ಸ್ ಸಹವಾಸ ಆಯ್ತಲ್ಲ, ಆಯ್ತು ಬಿಡ್ರೊ ಮಾತಾಡಲ್ಲ ನಿಮಗೆ ಯಾವಾಗ ಹೇಳಬೇಕು ಅನ್ನಿಸುತ್ತದೆಯೊ ಆಗಲೇ ಹೇಳಿ ಎಂದು ಒಲ್ಲದ ಮನಸ್ಸಿನಿಂದ ಹೇಳಿದ.
    ಮಹೇಶ್, ಮನು ಕುಡಿಯಲು ಆರಂಭಿಸಿದರು ಮೋಹನ್ ನೀನು ಕುಡಿಯೋ ಬೇಡ ಕಣೋ ನೀವು ಕುಡಿಯಿರಿ, ಹೋ ನಿಮ್ಮ ಹುಡುಗಿ ಬೇಜಾರ್ ಮಾಡಿಕೊಳ್ಳುತ್ತಾರೆ ಅಂತನಾ ನಾವ್ಯಾರು ಹೇಳಲ್ಲಪ್ಪ ಕುಡಿಯೋ, ಮೋಹನನ ಮುಖ ಕೆಂಪಾಗಿದ್ದನ್ನು ಕಂಡು ಮನು ಆಯ್ತು ಬಿಡಪ್ಪ ಅದಕ್ಕೆ ಯಾಕೆ ಮುಖ ಊದಿಸ್ಕೊಳ್ತಿಯ. ಚೆನ್ನಾಗಿ ಕುಡಿದು ಮೋಹನ್ ನಾವೀಗ ಎಲ್ಲಿದಿವಿ ಎಂದನು ಮಹೇಶ, ಹಾ! ಎಂದು ರಾಗ ಎಳೆದ ಮೋಹನ್ ಹರಿಶ್ಚಂದ್ರ ಘಾಟಲ್ಲಿ, ಮಗನೇ ಈಗ ನನಗೆ ಲೆಟರ್ ಬರೆಯೋಕೆ ಐಡಿಯಾ ಕೊಡದೆ ಇದ್ರೆ ನಾವು ಎಲ್ಲಿದಿವಿ ಅಂತ ಹೇಳಲ,,,, ಕಳೀಸ್ತಿನಿ?
     ಮಹೇಶ ಇವನ ಕಾಟ ತಡೆಯೋಕೆ ಆಗ್ತಿಲ್ಲ ಇವನಿಗೆ ನೀನೆ ಒಂದು ಐಡಿಯಾ ಕೊಡೊ ಎಂದನು ಮನು. ಲೋ ಮನು ನಾನು ಯಾವ ಎಕ್ಸ್ಸ್‍ಪೀರಿಯನ್ಸ್ ಹ್ಯಾಂಡೊ, ಲವ್ ಬಗ್ಗೆ ನನಗೇನೊ ಗೊತ್ತು ? ನೀನೆ ಹೇಳೊ ಮನು, ನಾನೇನು ನಾಲ್ಕೈದು ಹುಡುಗಿಯರನ್ನ ಲವ್ ಮಾಡಿದಿನಾ? ನನಗೆ ಅದರ ಬಗ್ಗೆ ಏನು ಗೊತ್ತಿಲ್ಲ ನೀನೆ ಹೇಳೋ ಎಂದು ಒಬ್ಬರನೊಬ್ಬರು ವಾದ ಮಾಡುತ್ತಿದ್ದರು. ನಿಲ್ಲಿಸ್ರೋ ನಿಮ್ಮ ಗಲಾಟೆನ ನಾನೇನೊ ನೀವುಗಳು ದೊಡ್ಡ ಮೇಧಾವಿಗಳು ಅಂತ ಕರ್ಕೋಂಡು ಬಂದೆನಲ್ಲ ನನ್ನ ಸವೆದು ಹೋದ ಪಾದರಕ್ಷೆಯನ್ನ ತೆಗೆದುಕೊಂಡು ಮುಟ್ಟಿ ನೋಡ್ಕೊಳೊ ಹಾಗೆ ಹೊಡ್ಕೊಬೇಕು.
     ಹಾಗಲ್ಲ ಮೋಹನ, ಸರಿ ನೀನು ಬರೆಯೋಕೆ ಸ್ಟಾರ್ಟ್ ಮಾಡು ಎಂಬ ಮಹೇಶನ ಮಾತಿಗೆ ಸಮಾಧಾನವಾಗಿ ಮೋಹನ ಪೆನ್ನು ಹಿಡಿದು ಮಹೇಶನ ಮಾತಿಗಾಗಿ ಕಾಯುತ್ತ ಕುಳಿತ. ನನ್ನ ಪ್ರೀತಿ ಜ್ಯೋತಿ, ಲೋ ನಾವೇನ್ ಲವ್ ಲೆಟರ್ ಬರಿತಿದಿವ ಇಲ್ಲ ಲೀವ್ ಲೆಟರ್ ಬರಿತಿದಿವ ಇಲ್ಲ ಅಪ್ಪ, ಅಮ್ಮನಿಗೆ ಪತ್ರ ಬರಿತಿದಿವ ನನ್ನ ಪ್ರೀತಿಯ ಜ್ಯೋತಿ ಅಂತೆ ಎಂದು ಮಹೇಶನ ಮೇಲೆ ಮನು ರೇಗಿದನು. ಮೈ ಡಿಯರ್ ಸ್ವಿಟ್ ಗರ್ಲ್, ಹೋ ಇವನು ಹೇಳ್ದ ನೋಡಪ್ಪ ಯಾಕೆ ಹಾಟ್ ಗರ್ಲ ಅಲ್ವ, ಇವನೇನು ದೊಡ್ಡ ಮೇಧಾವಿತರ ಎಲ್ಲ ಗೊತ್ತು ಅನ್ನೊ ಹಾಗೆ ಮಾತಾಡ್ತಾನೆ ಸಾಕು ಮಾಡಪ್ಪ ನಿನ್ನ ಸ್ವಿಟ್, ಹಾಟ್ ಎಂದು ಮಹೇಶ ಮನುವಿನ ಬಾಯಿ ಮುಚ್ಚಿಸಿದ. ಹಾಗೇ ನಿಧಾನವಾಗಿ ಅವರಿಬ್ಬರು ನಿದ್ರೆಗೆ ಜಾರಿದರು.
      ಇವರಿಬ್ಬರನ್ನು  ನೆಚ್ಚಿಕೊಂಡರೆ ನನ್ನ ಪ್ರೀತಿಗೆ ಎಳ್ಳು ನೀರೆ ಎಂದು ತಾನೇ ತನಗೆ ತೋಚಿದ ಹಾಗೇ ಬರೆಯಲು ಆರಂಭಿಸಿದ ಎಂಟು ಹಾಳೆಗಳು ಹರಿದು ಒಂಬತ್ತನೆ ಪತ್ರ ಬರೆಯುವುದರೊಳಗೆ ನಿದ್ರೆಗೆ ಜಾರಿದ್ದ. ಮುಂಜಾನೆ ಯಾರೊ ಎಚ್ಚರಿಸಿದಂತಾಗಿ ಎದ್ದು ಕುಳಿತು ತನ್ನ ಪ್ರೀತಿ ತುಂಬಿದ ಭಾವನೆಗಳನ್ನ ಬಿಳಿ ಹಾಳೆಯ ಮೇಲೆ ಕಪ್ಪು ಅಕ್ಷರಗಳನ್ನ ಮೂಡಿಸಲು ಪ್ರಾರಂಭಿಸಿದ್ದ. ಜ್ಯೋತಿಯನ್ನ ಚಿಕ್ಕವಯಸ್ಸಿನಲ್ಲಿ ಕಂಡದ್ದು, ಕೇಳಿದ್ದು, ಅವಳ ಜೊತೆ ಕಳೆದ ಒಂದೊಂದು ಕ್ಷಣದ ಅನುಭವ ಎಲ್ಲವನ್ನು ಸೇರಿಸಿ ಒಂದು ಪ್ರೇಮ ಪತ್ರವನ್ನು ಬರೆದನು. ಅದು ಎಂತ ಹುಡುಗಿಯಾದರು ಅದನ್ನೊಮ್ಮೆ ಒದಿದರೆ ಸಾಕು ನನಗೆ ಇಂತಹ ಲವ್ವರ್ ಇದ್ದಿದ್ದರೆ ಎಂದು ಒಂದರೆಕ್ಷಣ ಅನ್ನಿಸಿಬಿಡಬೇಕು ಹಾಗಿತ್ತು.
  ಯಾರೋ ಹೇಳಿದ ಮಾತುಗಳು ಮತ್ಯಾರೋ ಬರೆದುಕೊಟ್ಟ ಲೆಟರ್ ನಿಂದ ತಮ್ಮ ಪ್ರೀತಿಯನ್ನ ಗೆಲ್ಲಲು ಸಾಧ್ಯಾವಾಗುವುದು ಕೆಲವು ಸಲ ಮಾತ್ರ ಆದರೆ ಅವನ/ಅವಳ ಮೇಲೆ ನಿಜವಾದ ಪ್ರೀತಿ ಎಂಬುದಿದ್ದರೆ ಅದೇ ಅವನ/ಅವಳ ಕುರಿತು ಪ್ರೇಮ ಪತ್ರವನ್ನು ಬರೆಯಲು ಪ್ರೇರೇಪಿಸುತ್ತದೆ, ಪ್ರೀತಿಯನ್ನು ಪಡೆಯುವ ದಾರಿಯನ್ನು ತೋರಿಸುತ್ತದೆ. 
ಮಂಜುನಾಥ ಹೆಚ್.ಆರ್.
ಮೊ : 8747001391
e-mail : manjunathahr1991@gmail.com

Saturday 27 February 2016

ಹಳೆ ಕಥೆ ಹೊಸ ವ್ಯೆಥೆ

                   ಮುಂಗಾರಿನ ಮಳೆ ತಂದ ಮರೆಯಲಾಗದ ನೆನೆಪು .....

      ಆಫೀಸಿನಿಂದ ಹೊರಡುವ ವೇಳೆಗೆ ಸಮಯ 5 ಗಂಟೆಯಾಗಿತ್ತು ಆಚೆ ಬಂದು ನೋಡಿದರೆ ಬೈಕ್ ಪಂಚರ್ ಯಾವುದಾದರು ಆಟೋ ಸಿಗಬಹುದೆಂದು ರೋಡ್ ಕಡೆ ನೋಡಿದರೆ ಒಂದು ಸಣ್ಣ ಬೈಸಿಕಲ್ ಕೂಡ ಕಾಣಿಸಲಿಲ್ಲ. ಮನೆ ಇರುವುದು ಇನ್ನೆಷ್ಟು ದೂರ 2 ಕಿ.ಮೀ ನಡೆದೇ ಹೋಗೊಣ ಎಂದು ಕಾಲಿಗೆ ಬಲವನ್ನು ತುಂಬಿ ಬೈಕ್ ಆಫೀಸ್‍ನಲ್ಲೆ ಬಿಟ್ಟು ಮನೆಕಡೆ ಹೆಜ್ಜೆ ಹಾಕಿದೆ.
    ರವಿ ಮಾಮನು ಹಗಲಿಗೆ ವಿದಾಯವನ್ನು ಹೇಳಿ ಹೊರಡುವ ಸಮಯ. ನಿಧಾನವಾಗಿ ಕಪ್ಪನೆಯ ಮೋಡ ಭೂಮಿಯನ್ನು ಆವರಿಸುತ್ತಿತ್ತು. ನಡೆದದ್ದು ಕೇವಲ ಅರ್ಧ ಕಿ.ಮೀ ಅಷ್ಟರಲ್ಲಿ ವರುಣನ ಆಗಮನ ಈ ಧರೆಯ ಮೇಲೆ ಈ ನನ್ನ ಧರೆ ( ಮೈ ) ಮೇಲೆ ಆಯಿತು. ಪಕ್ಕದ ಬಸ್ ಸ್ಟಾಪ್ ಬಳಿ ನಿಂತು ಹೊರಡೊಣವೆಂದು ಆಶ್ರಯ ಪಡೆದೆ. ಮಳೆ ಹನಿಯು ಜೋರಾಗಿ ಬಡಿದು ನಂತರ ಸಣ್ಣ ಹನಿಗಳು ಬೀಳಲು ಪ್ರಾರಂಭಿಸಿದ್ದವು. ಬಸ್ ಸ್ಟಾಪ್‍ನಲ್ಲಿ ಒಬ್ಬನೆ ನಿಂತು ಸಾಕಾಗಿ ಹೋಗಿತ್ತು ಮೊಬೈಲ್ ತೆಗೆದು ನೋಡಿದರೆ ಸ್ವಿಚ್ ಆಫ್ ಬೇರೆ. ಒಂದು ಸಾರಿ ಮೋಡವನ್ನು ದಿಟ್ಟಿಸಿ ನೋಡಿ ರಸ್ತೆಯ ಕಡೆ ಮುಖ ಮಾಡಿದೆ. ಅಲ್ಲಿ ಹೈಸ್ಕೂಲು ವಯಸ್ಸಿನ ಮಕ್ಕಳು ರೈನ್ ಕೋಟ್ ಹಾಕಿಕೊಂಡು ಬರುತ್ತಿರುವುದು ಮತ್ತು ಅವರ ಹಿಂದೆ ಒಬ್ಬ ಹುಡುಗ ಒಬ್ಬಳು ಹುಡುಗಿ ಕೊಡೆ (ಛತ್ರಿ) ಹಿಡಿದು ತಮಾಷೆಯಲ್ಲಿ ಮಾತನಾಡುತ್ತ ಹೆಜ್ಜೆಯನ್ನಾಕುತ್ತಿರುವುದು ಕಣ್ಣಿಗೆ ಬಿತ್ತು. ಅಲ್ಲಿಗೆ ನನ್ನ ಪ್ಲಾಷ್‍ಬ್ಯಾಕ್ ಒಪನ್ ಆಯ್ತು.
     ನಮ್ಮೂರಿನಿಂದ ಹೈಸ್ಕೂಲಿಗೆ ಹೋಗಬೇಕೆಂದರೆ 2 ಕಿ.ಮೀ ಇರುವ ಪಕ್ಕದ ಊರಿಗೆ ಹೋಗಬೇಕು. ಪ್ರತಿ ದಿನದ ನಮ್ಮ ಸವಾರಿ ನಟರಾಜ ಸರ್ವಿಸ್‍ನಲ್ಲೇ ಸಾಗುತ್ತಿತ್ತು. ಅದು ಮಳೆಗಾಲ ಬೇರೆ ಜೋರು ಮಳೆ ಶುರುವಾಗುವುದರಲ್ಲಿತ್ತು. ಸಂಜೆ ಶಾಲೆ ಬಿಟ್ಟಾಗ ಇನ್ನೇನು ಮಳೆ ಬೀಳುವುದರಲ್ಲಿತ್ತು ಅಷ್ಟರಲ್ಲಿ ಮನೆ ಸೇರಿಬಿಡೋಣವೆಂದು ನಡಿಗೆ ಜೋರುಮಾಡಿದೆ.
  ಊಹೆಯಂತೆ ಅಂತೂ ಇಂತೂ ಮಳೆ ಬಂದೇ ಬಿಟ್ಟಿತು ಆಸರೆ ಪಡೆಯಲು ಪಕ್ಕದಲ್ಲಿ ಯಾವುದಾದರು ಮನೆ-ಮಠ ಕಾಣುವುದೇನೋ ಎಂದು ನೋಡಿದರೆ ನನ್ನ ದುರಾದೃಷ್ಟಕ್ಕೆ ಯಾವುದು ಕಾಣಲಿಲ್ಲ ಕೊನೆಗೆ ಪಕ್ಕದಲ್ಲಿದ್ದ ಮರದ ಕೆಳಗೆ ನೆರವನ್ನು ಪಡೆದೆ, ಅದೋ ಮಳೆ ಹನಿ ಜೋರು ಮಳೆಯಿಂದ ಮೈ ನೆನಸಿದರೆ ಮರದ ಹನಿ ನಿಧಾನವಾಗಿ ನನ್ನನ್ನು ಒದ್ದೆ ಮಾಡುತ್ತಿತ್ತು. ಕರ್ಮ ಎಂದು ಜೋರು ಮಳೆಯನ್ನ ನೋಡುತ್ತಿರುವಾಗ ದೂರದಲ್ಲಿ ಮಳೆಯ ಶಬ್ದಕ್ಕೆ ಹಿಮ್ಮೇಳವನ್ನು ಹಾಕುತ್ತಿರುವಂತೆ ಗೆಜ್ಜೆ ಸಪ್ಪಳ ಕೇಳಿಸಿತು. ಯಾರಿರಬಹುದೆಂದು ದಿಟ್ಟಿಸಿ ನೋಡಿದೆ ಕಪ್ಪನೆಯ ಮೋಡದಿಂದ ಜಾರಿ ಭೂಮಿಗೆ ಬೀಳುವ ಮಳೆ ಹನಿಗಳನ್ನು ಸೀಳಿಕೊಂಡು ಕಡು ಕಪ್ಪನೆಯ ಕೊಡೆ (ಛತ್ರಿ) ಹಿಡಿದು ಬರುತ್ತಿರುವÀ ಹುಡುಗಿಯೊಬ್ಬಳು ಕಾಣಿಸಿದಳು. ಯಾರಿರಬಹುದೆಂದು ಕುತೂಹಲದಿಂದ ನೋಡುತ್ತ್ತಿರುವಾಗ ಹತ್ತಿರ ಸಮೀಪಿಸುತ್ತಿದ್ದಂತೆ ಮುಂದೆ ಬಾಗಿದ ಕೊಡೆಯನ್ನು ನಿಧಾನವಾಗಿ ಮೇಲಕ್ಕೆ ಎತ್ತಿದರು ಮುಖ ನೋಡಿ ಅರೆ ಕ್ಷಣ ಬೆಚ್ಚಿ ಬಿದ್ದೆ ಯಾಕೆಂದರೆ ಆಕೆ ಬೇರೆ ಯಾರು ಅಲ್ಲ ನಮ್ಮ ಶಾಲೆಯ ನಂಬರ್ ಒನ್ ಸ್ಟೂಡೆಂಟ್ ಎಂದು ಹೆಸರು ಪಡೆದಿರುವ ಅಂಬಿಕಾ. ಅವಳ ಜೊತೆ ನಾನೇನು ಜಗಳವಾಡಿರಲಿಲ್ಲ ಆದರೆ ನನಗೆ ಅವಳ ಕಂಡರೆ ಆಗುತ್ತಿರಲಿಲ್ಲ.
    ನಾನು ಮಳೆಯಲ್ಲಿ ನೆನೆಯುವುದನ್ನು ಕಂಡು ಹೇಯ್ ಬಾರೋ ಎಂದು ಕರೆದಳು. ನಮಗೆ ಸ್ವಲ್ಪ ಧಿಮಾಕು ಹುಡುಗಿಯರನ್ನ ಮಾತನಾಡಿಸಬೇಕಂದ್ರೆ ಆಗಲ್ಲ ಅಂತದರಲ್ಲಿ ನಾನು ಇವಳ ಜೊತೆ ಹೋಗುವುದ? ಊರಿನ ಜನ ನೋಡಿದ್ರೆ ಏನ್ ತಿಳ್ಕೊತಾರೆ ಎಂದು ಇಲ್ಲ ನೀನು ಹೋಗು ಎಂದೆ. ಹೇಯ್ ಮಳೆ ಬೇರೆ ಬಿಡೊಹಾಗೆ ಹಾಣಲ್ಲ, ಕತ್ತಲು ಬೇರೆ ಆಗ್ತಿದೆ ಬೇಗ ಬಾರೋ ಎಂದು ರೇಗಿದಳು. ಇವಳದೊಂದು ಕಾಟ ಆಯ್ತಲ್ಲಪ್ಪ, ಮಳೆ ಬಿಟ್ರೆ ಆಯ್ತು ಬಿಡದಿದ್ರೆ ಆಯ್ತು ಸರಿ ಎಂದು ಅವಳ ಜೊತೆ ಹೆಜ್ಜೆ ಹಾಕಿದೆ.
ಎಲ್ಲಿ ನಿನ್ನ ಡಬ್ಬ ಫ್ರೆsÀ್ರಂಡ್ಸ್ ಕಾಣಿಸ್ತಿಲ್ಲ ಎಂದು ನನ್ನ ರೇಗಿಸಿದಳು, ನಿನ್ನ ಡಬ್ಬ ಫ್ರೆsರಂಡ್ಸ್ ಬಂದಿಲ್ಲವಲ್ಲ ಅದಕ್ಕೆ ಅವರು ಬಂದಿಲ್ಲ ಎಂದೆ ಹೀಗೆ ಮಾತುಗಳ ಸರಮಾಲೆ ಮುಂದು ವರೆಯುತ್ತಿತ್ತು ಒಂದು ಸಲ ಅವಳ ಕಣ್ಣುಗಳನ್ನೊಮ್ಮೆ ನೋಡಿದೆ ಮೊದಲಿನ ಅಂಬಿಕಳಿಗೂ ಅಂದು ನಾನು ನೋಡಿದ ಅಂಬಿಕಾಳಿಗೂ ತುಂಬಾ ವ್ಯತ್ಯಾಸ ಇತ್ತು. ಒಂದೆರಡು ಸಾರಿ ಅವಳ ಕಣ್ಣುಗಳನ್ನು ನೋಡಿದೆ ಅವಳು ನನ್ನ ಮುಖವನ್ನು ನೋಡಿದಳು ಅವಳ ನೋಟವನ್ನು ಎದುರಿಸಲಾಗದೆ ತಲೆ ತಗ್ಗಿಸಿ ನಡೆದೆ. ದಾರಿಯುದ್ದಕ್ಕೂ ಹರಟೆ, ತಮಾಷೆಯ ಮಾತುಗಳು ಬ್ರೇಕ್ ಇಲ್ಲದ ಬಸ್ಸಿನ ಹಾಗೆ ಸಾಗುತ್ತಿದ್ದವು.
    ಅಷ್ಟರಲ್ಲಿ ಮನೆ ಬಂದೇ ಬಿಟ್ಟಿತ್ತು ಅವಳನ್ನು ಅವಳ ಮನೆ ಹತ್ತಿರ ಬಿಟ್ಟು ನನ್ನ ಮನೆ ಕಡೆ ಹೆಜ್ಜೆ ಹಾಕಿದೆ ಮಳೆಯಲ್ಲಿ ಹಾಗೆ ಹೋಗ ಬೇಡ ಎಂದು ಅವಳು ಹಿಡಿದಿದ್ದ ಕೊಡೆಯನ್ನು ನನಗೆ ಕೊಟ್ಟು ಕಳಿಸಿದ್ದಳು ಅದರಲ್ಲಿ ಅವಳು ಹಾಕಿದ್ದ ಬಟ್ಟೆಯ ತುಣುಕೊಂದು ಸಿಕ್ಕಿ ಹಾಕಿಕೊಂಡಿತ್ತು. ಅದನ್ನು ನಾನು ಗಮನಿಸಿದ್ದು ಮಲಗುವ ಮನ್ನ ಆ ಕೊಡೆಯನ್ನ ಎತ್ತಿ ಹಿಡುವಾಗ. ಹೀಗೆ ಆರಂಭವಾದ ಮುಂಗಾರಿನ ಮಧುರ ಗಳಿಗೆಯ ನೆನಪು ಕೊನೆಗೆ ಹೋಗಿ ತಲುಪಿದ್ದು ಪ್ರೀತಿ ನಿವೇದನೆಯವರೆಗೆ ಅವಳಿಂದ ಬಂದ ಉತ್ತರ ಒಂದೆ, ಸಾರೀ ನಿನ್ನ ಮೇಲೆ ಆ ತರ ಯಾವುದೇ ಭಾವನೆಗಳಿಲ್ಲ, ಚೆನ್ನಾಗಿ ಓದಿ ಒಳ್ಳೆ ಕೆಲಸ ಹಿಡಿದು ಮುಂದೆ ಬಾ ನಿನಗೆ ನನಗಿಂತ ಒಳ್ಳೆ ಹುಡುಗಿ ಸಿಗ್ತಾಳೆ ಎಂದು. ಎಲ್ಲಾ ಹುಡುಗಿಯರು ಹೇಳುವ ಡೈಲಾಗ್ ಅನ್ನೆ ಇವಳು ಹೇಳ್ತಿದಳೆ, ಇವಳು ಹೇಳಿದ್ರೆ ನಾವು ಜೀವನದಲ್ಲಿ ಮುಂದೆ ಬರೋದು ಇಲ್ಲ ಅಂದ್ರೆ ಮುಂದೆ ಬರೋಕೆ ಆಗಲ್ಲ ಎಂದು ಮನಸ್ಸಿನಲ್ಲಿ ಗೊಣಗುತ್ತ ಅವಳಿಂದ ದೂರ ಇರಲು ಆರಂಭಿಸಿದೆ. ಆ ಘಟನೆ ನಡೆದು ಇಂದಿಗೆ 6 ವರ್ಷ ಇದು ನೆನ್ನೆ ಮೊನ್ನೆ ನಡೆದ ಹಾಗಿದೆ. ಈಗ ನನ್ನ ಮುಂದೆ ಇರುವುದು ಆ ನೆನಪು ಮಾತ್ರ.
   ಅಷ್ಟರಲ್ಲಿ ಮಳೆನಿಂತು ಕಪ್ಪು ರಸ್ತೆಯ ಮೇಲೆ ನೀರು ಹರಿಯಲು ಆರಂಭಿಸಿತ್ತು. ಮತ್ತೆ ಮಳೆ ಬರುವ ಎಲ್ಲ ಲಕ್ಷಣಗಳು ಎದ್ದು ಕಾಣಿಸುತ್ತಿತ್ತು ನಡೆದುಕೊಂಡು ಹೊದರೆ ಮತ್ತೆ ಅಂಬಿಕಾ ಬಂದು ಕೊಡೆ ಹಿಡಿಯುವುದಿಲ್ಲ ಎಂದು ಆಟೋ ಹಿಡಿದು ಮನೆಕಡೆ ನಡೆದೆ.
ಹಿಂಡಿಸಿಗೆರೆ ಮಂಜುನಾಥ ಹೆಚ್.ಆರ್.
E-mail : manjunathahr1991@gmail.com

Tuesday 23 February 2016

ನೆವರ್ ಎಂಡಿಂಗ್ ಲವ್ ಸ್ಟೋರಿ
   
   ಪ್ರೇಮಿಗಳಿಗೆ ಸಾವುಂಟು ಆದರೆ ಪ್ರೀತಿಗಲ್ಲ, ಯುಗಗಳು ಉರುಳಿ ಹೋದ್ರು, ಕಾಲಗಳು ಕಳೆದು ಹೋದ್ರು ಪ್ರೀತಿ ಬದಲಾಗಿಲ್ಲ, ಪ್ರೀತಿ ಪ್ರೀತಿಯಾಗೇ ಉಳಿದಿದೆ ಅಂತ ಅಳಿಯದ ಪ್ರೀತಿಯ ಕಥೆ ನೆವರ್ ಎಂಡಿಂಗ್ ಲವ್ ಸ್ಟೋರಿ
ಅವಳು ಬ್ರಾಹ್ಮಣರ ಮನೆ ಹುಡುಗಿ ನಾಗಾಂಬಿಕ, ಮುದ್ದು ಮುದ್ದಾಗಿ ಎಲ್ಲರ ಜೊತೆ ಮಾತಾಡ್ಕೊಂಡು ಓಡಾಡ್ತಿದ್ರೆ ನೋಡಿದವರ ದೃಷ್ಟಿ ಖಂಡಿತ ತಾಗ್ತಿತ್ತು. ಇಡೀ ಕಾಲೇಜಿಗೇ ಅವಳೊಂತರಾ ಚೆಲುವಾಂತ ರಾಜಕುಮಾರಿ, ಅವನ ಕಣ್ಣಿಗೂ ಬಿದ್ದೇ ಬಿಟ್ಲು, ಅವನೋ ನೋಡಿದವನೇ ಸುಸ್ತು ! ಇವಳೇ ನನ್ನ ಹೆಂಡತಿ ಅಂತ ಡಿಸೈಡ್ ಮಾಡ್ಬಿಟ್ಟ ! ಕಣ್ ಕಣ್ಣ ಸಲಿಗೆ ಅವರಿಬ್ಬರ ಮಧ್ಯೆ ಶುರುವಾಯ್ತು. ಅಂದಹಾಗೆ ಅವನು ಕ್ರೈಶ್ಚಿಯನ್ ಎರಿಯಾದ ಹುಡುಗ ಸ್ಯಾಮ್ ಸನ್. ಒಂದೇ ಊರು, ಒಂದೇ ಕಾಲೇಜು, ಒಂದೇ ಕ್ಲಾಸು, ಆದ್ರೆ ಜಾತಿ ಬೇರೆ ಬೇರೆ.. ಪ್ರೀತಿಗೆ ಜಾತಿ ಎಲ್ಲಿದೆ..? ಶುರುವಾಯ್ತು ಸ್ಯಾಮ್ ಸನ್ - ಅಂಬಿಕಾ ಪ್ರೇಮ್ ಕಹಾನಿ..!
ಅದು ಬೆಟ್ಟಗುಡ್ಡಗಳಿಂದ ಕೂಡಿದ, ನದಿ ಕಣಿವೆಯ, ಸುಂದರ ಕಾನನದ  ಒಂದು ಸಣ್ಣ ಊರು ಹೊರಕೇರಿ ಎಲ್ಲಾ ಮತ ಧಮ್ರದವರು ಅಣ್ಣ-ತಮ್ಮ, ಅಕ್ಕ-ತಂಗಿಯರ ತರ ಇರೋ ಊರದು. ಇವರಿಬ್ಬರ ಲವ್ ಸ್ಟೋರಿ ಆರಂಭವಾಗೋದು ಇದೇ ಊರಲ್ಲಿ.. ಕ್ಲಾಸ್ ರೂಮಲ್ಲಿ, ಲ್ಯಾಬ್ ನಲ್ಲಿ, ಲೈಬ್ರರಿಯಲ್ಲಿ, ಕಾಲೇಜು ಪಾರ್ಕಲ್ಲಿ, ಬಸ್ ಸ್ಟ್ಯಾಂಡಲ್ಲಿ, ಹೀಗೆ ಅವರ ಲವ್ ನಾವಿಕನಿಲ್ಲದ ದೋಣಿಯಂತೆ ಸಾಗುತ್ತಿತ್ತು.
     ಕಾಲೇಜು ದಿನಗಳು ಮುಗೀತು, ಕಾಮರ್ಸ್ ಓದ್ತಾ ಇದ್ದ ಸ್ಯಾಮ್ ಸನ್ ಗೆ ಬಿಸಿನೆಸ್ ಮನ್ ಆಗೋ ಆಸೆ. ಆದ್ರೆ ಅದಕ್ಕೆ ಡಿಗ್ರಿ ಮಾಡ್ಬೇಕಲ್ಲ. ಅಷ್ಟರೊಳಗೆ ಅಂಬಿಕಾಗೆ ಮದುವೆ ಮಾಡಿದ್ರೆ ಕಷ್ಟ ಅಂತ ಬಿಸಿನೆಸ್ ಮನ್ ಆಸೆ ಬಿಟ್ಟು ಡಿ.ಎಡ್ ಮಾಡ್ದ..! ಡಿ.ಎಡ್ ಮುಗೀತಿದ್ದ ಹಾಗೇ ಪಿಯುಸಿ ಮೇಲೆ ಅವನಿಗೆ ಪೊಲೀಸ್ ಕೆಲಸವೂ ಸಿಕ್ತು.. ! ಅವಳೂ ಬೇರೆ ಕಡೆ ಡಿ.ಎಡ್ ಮುಗಿಸಿ ಮನೆಗೆ ವಾಪಸ್ ಬಂದ್ಲು! ಸ್ಯಾಮ್ ಪೊಲೀಸ್ ಟ್ರೈನಿಂಗ್ ಹೊರಡೋಕೆ ಮುಂಚೆ ಪಕ್ಕದ ಊರಿನ ಬೆಟ್ಟದ ಆಂಜನೇಯ ದೇವಸ್ಥಾನಕ್ಕೆ ಕರ್ಕೊಂಡ್ ಹೋಗಿ, ನಂಗೆ ತಾಳಿ ಕಟ್ಟು ಅಂತ ಅರಿಶಿನ ಕೊಂಬು ಕಟ್ಟಿಸ್ಕೊಂಡು ಬರ್ತಾಳೆ ಅಂಬಿಕಾ.. !
ಅದಾದ ಮೇಲೆ ಸ್ಯಾಮ್ ಟ್ರೈನಿಂಗ್ ಪಿರಿಯಡ್ ನಲ್ಲಿದ್ದ. ಅವಳು ಒಂದು ದಿನ ಫೋನ್ ಮಾಡಿದ್ಲು.. `ಲೋ ಸ್ಯಾಮ್  ನೀನು ಪೊಲೀಸ್ ಆದ್ರೆ ಮನೆಗೆ ತುಂಬಾ ಲೇಟಾಗಿ ಬರ್ತೀಯ, ನಂಗೆ ಮದುವೆಯಾದ ಮೇಲೆ ರಾತ್ರಿ ಒಬ್ಬಳೇ ಮನೇಲಿರೋಕೆ ಭಯ ಆಗುತ್ತೆ. ಪೊಲೀಸ್ ಕೆಲಸ ಬಿಟ್ಟುಬಿಡುಅಂದ್ಲು ! ಅಷ್ಟೆ.. ಮರು ಮಾತಾಡದೇ ಓಕೆ ಹೇಳಿ ಕೈಯಲ್ಲಿದ್ದ ಪೊಲೀಸ್ ಕೆಲಸ ಬಿಟ್ಟು ಬಂದೇ ಬಿಟ್ಟ ಸ್ಯಾಮ್ ! ವಾಪಸ್ ಬಂದು ತನ್ನೂರಿನಲ್ಲೇ  ಡಿ.ಎಡ್ ಆಧಾರದ ಮೇಲೆ ಸ್ಕೂಲ್ ಟೀಚರ್ ಆಗಿ ಕೆಲಸಕ್ಕೆ ಸೇರ್ಕೊಂಡ. ಟೈಮಲ್ಲಿ ಅಂಬಿಕಾ ಮನೆಯಲ್ಲಿ ಇವರಿಬ್ಬರ ಪ್ರೇಮ ಪುರಾಣ ಗೊತ್ತಾಗಿತ್ತು. ಯಾವಾಗ ಸ್ಯಾಮ್ ಮತ್ತು ಅಂಬಿಕಾ ಲವ್ ಮಾಡ್ತಿದಾರೆ ಅಂತ ಗೊತ್ತಾಯ್ತೊ, ಅವತ್ತಿಂದ ಅಂಬಿಕಾ ಎಲ್ಲಿದ್ದಾಳೆ ಅಂತಾನೆ ಗೊತ್ತಾಗಲಿಲ್ಲ, ಎಲ್ಲೇ ಹುಡುಕಿದ್ರು ಅರ್ಚನಾ ಇಲ್ಲ, ಅವಳಪ್ಪನಿಗೆ ವಿಚಾರಿಸಿದ್ರೆ ಗೊತ್ತಿಲ್ಲ ಅನ್ನೋ ಉತ್ತರ. ಸ್ಯಾಮ್ ತನ್ನ ಸ್ನೇಹಿತರನ್ನು ಬಿಟ್ಟು ಬೇಹುಗಾರಿಕೆ ಮಾಡಿದ್ರೂ ನೋ ಯೂಸ್, ಅರ್ಚನಾ ಇಲ್ಲ, ಇಲ್ಲ, ಇಲ್ಲ.
       ಸ್ಯಾಮ್ ಹುಚ್ಚನಾಗಿಹೋಗ್ತಾನೆ, ಊಟ ತಿಂಡಿ ಬಿಟ್ಟು ಅವಳನ್ನ ಹುಡುಕ್ತಾನೆ, ಅವರಪ್ಪನ್ನ ಕೈಕಾಲು ಹಿಡೀತಾನೆ.. ಆದ್ರೆ ಎಲ್ಲೂ ಅರ್ಚನಾ ಸುಳಿವು ಸಿಗೋದೇ ಇಲ್ಲ. ಆದ್ರೆ ಅವತ್ತು ರಾತ್ರಿ ಮರೆಯಲ್ಲಿ ನಿಂತು ಅವರಪ್ಪನ ಹಿಂದೆ ಬೀಳ್ತಾನೆ.. ರಾತ್ರಿ 12 ಗಂಟೆಗೆ ಅವರಪ್ಪ ಮನೆಯಿಂದ ಹೊರಡ್ತಾನೆ.

ಅವರಿಗೆ ಗೊತ್ತಾಗದ ಹಾಗೆ ಸ್ಯಾಮ್ ಅವನ ಸ್ನೇಹಿತನ ಜೊತೆ ಫಾಲೋ ಮಾಡ್ತಾನೆ. ನಾಲ್ಕೈದು ಬೀದಿ ದಾಟಿದ ಮೇಲೆ ಬೀದಿದೀಪವೂ ಇಲ್ಲದ ಬೀದಿಯ ಕೊನೆಯ ಮನೆಗೆ ಅವರಪ್ಪ ಹೋಗ್ತಾನೆ.. ಅವರಪ್ಪ ಬಂದು ಹೋಗುವ ತನಕ ಕಾದು ಕೂತು, ಅವರು ಹೋದ ತಕ್ಷಣ ಮನೆಯ ಕಿಟಕಿಯಲ್ಲಿ ನೋಡಿದ್ರೆ ಅವಳು ಕಣ್ಣೀರು ಹಾಕ್ಕೊಂಡು ಕೂತಿದ್ದಾಳೆ. ಅವಳ ಕೈಗೆ ಹಗ್ಗ ಬಿಗಿದಿಟ್ಟಿದ್ದಾರೆ.. ಅದರ ಇನ್ನೊಂದು ತುದಿ ಅಂಬಿಕಾಳ ಅಮ್ಮನ ಕೈಗೆ ಕಟ್ಟಿದ್ದಾರೆ.. `ನನ್ನ ಬಿಡಮ್ಮ, ನಾನ್ ಸ್ಯಾಮ್ ಜೊತೆ ಚೆನ್ನಾಗಿರ್ತೀನಿ ಅಂತ ಗೋಗರೀತಾ ಇರೋ ಅಂಬಿಕಾಳನ್ನ ನೋಡಿ ಸ್ಯಾಮ್ ಕರುಳು ಕಿತ್ತು ಬರುತ್ತೆ..! ಆದ್ರೆ ಏನೂ ಮಾಡೋ ಪರಿಸ್ಥಿತಿಯಲ್ಲಿರೋದಿಲ್ಲ ಅವನು. ಆದ್ರೆ ಅವಳು ಜೀವಂತವಾಗಿದ್ದಾಳೆ ಅಂತ ಗೊತ್ತಾಗಿ ಸಣ್ಣ ನಿಟ್ಟುಸಿರು ಬಿಟ್ಟು ಅಲ್ಲಿಂದ ಹೊರಡ್ತಾನೆ. ಕಡೆ ಅಂಬಿಕಾ ಊಟ ನೀರು ಬಿಟ್ಟು ಹಠ ಮಾಡ್ತಾಳೆ.
       ವಿಧಿ ಇಲ್ಲದೇ ಅವಳಪ್ಪನೇ ಅವರ ಮೊಬೈಲ್ ನಿಂದ ಕಾಲ್ ಮಾಡಿಸಿ ಅವನ ಜೊತೆ ಮಾತಾಡಿಸ್ತಾರೆ. ಊಟ ಮಾಡೋಕ್ ಹೇಳಪ್ಪ, ನೀರೂ ಕುಡ್ದಿಲ್ಲ ನನ್ನ ಮಗಳು ಅಂತ ಗೋಗರೆದು,  ನೀನು ಬ್ರಾಹ್ಮಣನಾಗಿದ್ರೆ ಈಗ್ಲೇ ಮದುವೆ ಮಾಡಿಸಿಬಿಡ್ತಿದ್ದೆ, ನಿಂಗೆ ನನ್ನ ಮಗಳನ್ನು ಕೊಟ್ಟು ನಾವು ಊರಲ್ಲಿ ತಲೆ ಎತ್ತಿಕೊಂಡು ತಿರುಗೋಕಾಗಲ್ಲ.. ಪ್ಲೀಸ್ ನನ್ನ ಮಗಳನ್ನು ಮರೆತುಬಿಡುಅಂತ ಬೇಡ್ತಾರೆ..  ಅಷ್ಟು ಪ್ರೀತಿಸೋ ಹುಡುಗೀನ ಸ್ಯಾಮ್ ಸನ್ ಬಿಟ್ಟುಬಿಡೋ ಯೋಚನೇನೂ ಮಾಡಲ್ಲ. ಶಾಹಿದ್ ಊರ ಮುಖಂಡರನ್ನೆಲ್ಲಾ ಕರೆಸಿ ಪಂಚಾಯ್ತಿ ಮಾಡಿಸ್ತಾನೆ.. ಊರಿನ ಧಾಮ್ರಿಕ ಮುಖಂಡರ ಎದುರು ಜೋರುಜೋರು ಚರ್ಚೆ ನಡೆಯುತ್ತೆ. ಅವಳು ಎಲ್ಲರ ಎದುರಲ್ಲೇ ಕೂಗಿ ಹೇಳ್ತಾಳೆ.. ನಂಗೆ ಸ್ಯಾಮ್ ಬೇಕು.. ನಾನು ಮದ್ವೆ ಅಂತಾದ್ರೆ ಅವನನ್ನೇ  ಅಂತ. ಅಲ್ಲೇ ಅವರಪ್ಪ ಅವಳ ಕೆನ್ನೆಗೆ ಬಾರಿಸಿ, ನನ್ನ ಮಗಳು ನನ್ನಿಷ್ಟ ಅಂತ ಹೇಳಿ ಎಳೆದುಕೊಂಡು ಹೋಗ್ತಾರೆ. ಊರ ಮುಖಂಡರಿಗೂ ಏನು ಮಾಡ್ಬೇಕು ಅಂತ ಗೊತ್ತಾಗದೇ ಕೈಚೆಲ್ಲಿ ಬಿಡ್ತಾರೆ. ಕಡೆ ಸ್ಯಾಮ್ ಸನ್ ಅಪ್ಪ ಅಮ್ಮನಿಗೆ ಮಗ ಏನಾಗಿಬಿಡ್ತಾನೋ ಅನ್ನೋ ಚಿಂತೆ ಶುರುವಾಗುತ್ತೆ.. ಸ್ಯಾಮ್ ಅವಳ ಮನೆಯ ಎದುರಿಗೆ ತನ್ನ ರಾತ್ರಿಗಳನ್ನು ಕಳೆಯೋಕೆ ಶುರು ಮಾಡ್ತಾನೆ. ಅವಳು ಮನೆಯ ಒಳಗಿಂದ ಸ್ಯಾಮ್ ಸ್ಯಾಮ್ ಅಂತ ಕೂಗ್ತಾ ಕಣ್ಣೀರಿಟ್ರೆ, ಕಡೆ ಸ್ಯಾಮ್ ಗೆ ಅಮ್ಮು, ಅಮ್ಮು ಅಂತ ಬಿಕ್ಕಿಬಿಕ್ಕಿ ಅಳೋದು ಬಿಟ್ಟು ಬೇರೆ ದಾರಿಯೇ ತೋಚೋದಿಲ್ಲ.
       ಹೀಗೆ ಸ್ವಲ್ಪ ದಿನ ಕಳೆಯುತ್ತೆ.. ಆದ್ರೆ ಅಂಬಿಕಾಳ ಧ್ವನಿ ಸ್ಯಾಮ್ ಕಿವಿಗೆ ಬೀಳೋದೇ ಇಲ್ಲ. ಇವನು ಅಮ್ಮು ಅಮ್ಮು ಅಂತ ಎಷ್ಟೇ ಕೂಗಿದ್ರೂ ಅವಳ ಕಡೆಯಿಂದ ಯಾವ ಉತ್ತರವೂ ಬರೋದಿಲ್ಲ. ಸ್ಯಾಮ್ ಗೆ ಭಯ ಶುರುವಾಗುತ್ತೆ. ಇನ್ನು ಸುಮ್ಮನಿದ್ರೆ ಆಗಲ್ಲ ಅಂತ ಡಿಸೈಡ್ ಮಾಡ್ಕೊಂಡು, ಅವನ ಸ್ನೇಹಿತರ ಸಹಾಯದಿಂದ ಅವರ ಮನೆಯ ಬಗಿಲು ಮುರಿದು ಒಳಗೆ ನುಗ್ಗೇ ಬಿಡ್ತಾನೆ..! ಅವಳು ಅಲ್ಲೆಲ್ಲೂ ಕಾಣೋದಿಲ್ಲ.. ಅವರಪ್ಪ ತುಂಬಾ ಕೂಲಾಗಿ ಹೇಳ್ತಾರೆ, ಬಾಗಿಲು ಮುರ್ಕೊಂಡು ಒಳಗೆ ಬಂದ್ಯಲ್ಲಾ, ಅವಳು ಬಂದ್ರೆ ಕರ್ಕೊಂಡು ಹೋಗು. ಸ್ಯಾಮ್ ಸಂತೋಷಕ್ಕೆ ಪಾರವೇ ಇಲ್ಲ, ಅವಳ ಜೊತೆಗೆ ಮದುವೆಯ ಕನಸು ಕಾಣೋಕೆ ಶುರು ಮಾಡ್ಬಿಟ್ಟ. ಅಷ್ಟರಲ್ಲಿ ಮನೆಯ ಒಳಗಿಂದ ಹೊರಬಂದ ಅಂಬಿಕಾ ಓಡಿ ಬಂದು ಸ್ಯಾಮ್ ಕಾಲು ಹಿಡೀತಾಳೆ. ದಯವಿಟ್ಟು ನನ್ನ ಕ್ಷಮಿಸಿಬಿಡು, ನಂಗೆ ನಮ್ಮಪ್ಪ ಅಮ್ಮ ಮುಖ್ಯ. ನಿನ್ನ ಮದ್ವೆ ಆದ್ರೆ ಅವರು ಸತ್ತೇ ಹೋಗ್ತಾರೆ, ಪ್ಲೀಸ್ ನನ್ನ ಮರೆತುಬಿಡು..!’
    ಸ್ಯಾಮ್ ಜೀವಂತ ಶವವಾಗಿಬಿಟ್ಟ.. ಏನ್ ಹೇಳ್ಬೇಕೋ ಗೊತ್ತಾಗಲಿಲ್ಲ.. ಯಾರ ಸಲುವಾಗಿ ಊಟ-ನೀರು-ನಿದ್ದೆ ಬಿಟ್ಟು ಒದ್ದಾಡಿದ್ನೋ, ಅವಳೇ ಕಾಲು ಹಿಡಿದು ಮರೆತುಬಿಡು ಅಂದ್ರೆ ಹೇಗಾಗಬೇಡ.. ಒಂದೇ ಒಂದು ಮಾತಾಡದೇ ಅವಳ ಕೈಯಿಂದ ತನ್ನ ಕಾಲು ಬಿಡಿಸಿಕೊಂಡ ಕೆನ್ನೆಯ ಮೇಲೆ ಜಾರುತ್ತಿದ್ದ ಕಣ್ಣೀರು ಒರೆಸಿಕೊಂಡು ಅಲ್ಲಿಂದ ಹೊರನಡೆದ.

ಮತ್ಯಾವತ್ತೂ ಅವಳ ಮನೆಯ ಕಡೆ ನೋಡಲೂ ಇಲ್ಲ. ಊಟ ಬಿಟ್ಟ, ಅವಳಿಗೋಸ್ಕರ ಸಿಕ್ಕಿದ್ದ ಕೆಲಸ ಬಿಟ್ಟ, ಉದ್ದುದ್ದ ಗಡ್ಡ ಬಿಟ್ಟ.. ಊರಲ್ಲೆಲ್ಲಾ ದೇವ್ ದಾಸ್ ಅಂತ ರೇಗಿಸೋಕೆ ಶುರುಮಾಡಿದ್ರು. ಯಾವತ್ತೂ ಡ್ರಿಂಕ್ಸ್ ಮಾಡದವನು ಕಂಠಪೂರ್ತಿ ಕುಡಿದು ರೋಡಲ್ಲಿ ಬೀಳೋಕೆ ಶುರು ಮಾಡ್ದ. ಅವನಪ್ಪ ಅಮ್ಮನಿಗೆ ಕಣ್ಣೀರಷ್ಟೇ ಸ್ವಂತ. ಪ್ರೀತಿಯ ಹಿಂದೆಬಿದ್ದು ಮಗನ ಜೀವನ ಹೀಗೆ ಸರ್ವನಾಶವಾಗ್ತಿದ್ರೆ ಅವರಾದ್ರೂ ಹೇಗೆ ಸಹಿಸಬೇಕು..?
      ಇದನ್ನೆಲ್ಲ ನೋಡಿಕೊಂಡು ಇರೋಕೆ ಅಂಬಿಕಳಿಗೆ ಮನಸ್ಸಾಗಲಿಲ್ಲ, ಆದದ್ದು ಆಗಲಿ ಎಂದು ಮನೆಯ ಬಾಗಿಲನ್ನು ಧಾಟಿದಳು, ಇತ್ತ ಸ್ಯಾಮ್ ಸ್ನೇಹಿತರು ಸೇರಿ ದೂರದ ಉರಲ್ಲಿ ಮುದುವೆ ಮಾಡಿಸಿ ಅಲ್ಲಿಂದ ಬೇರೆ ಕಡೆ ಅವರನ್ನು ಕಳಿಸ್ತಾರೆ. ವಿಷಯ ತಿಳಿದ ಅಂಬಿಕಾಳ ಅಪ್ಪ ಅಮ್ಮ ಪೋಲಿಸರ ಮೊರೆ ಹೋಗ್ತಾರೆ. ವಿಷಯ ಗೊತ್ತಾದ ಪೋಲಿಸರು ಸ್ಯಾಮ್ ಸ್ನೇಹಿತರನ್ನ ಎಳೆದು ತಂದು ಚೆನ್ನಾಗಿ ಹೊಡಿತಾರೆ ಬಡಿತಾರೆ ಯಾರಿಂದಲೂ ಸಣ್ಣ ಸುಳಿವು ಸಿಗೊದಿಲ್ಲ. ಕೊನೆಗೆ ಅವಳ ಹಣೆ ಬರಹ ಇದ್ದಂಗೆ ಆಗುತ್ತೆ ಅಂತ ಕಂಪ್ಲೇಟ್ ವಾಪಸ್ ತಗೊತಾರೆ ಅಂಬಿಕಾಳ ಅಪ್ಪಾ.
    ಇದಾದ 5 ವರುಷಕ್ಕೆ ಅಂಬಿಕಾ ಮತ್ತು ಸ್ಯಾಮ್ ಸನ್ ಮತ್ತು ಅವರಿಗೆ ಹುಟ್ಟಿದ ಮಗುವಿನೊಂದಿಗೆ ತನ್ನೂರಿಗೆ ಬರ್ತಾರೆ. ಊರಿನವರ, ಸ್ನೇಹಿತರ ಆನಂದಕ್ಕೆ ಪಾರವೇ ಇರಲಿಲ್ಲ ಅಂದು ಧಮ್ರ, ಬೇದ ಬಾವ ಮರೆತು ಅವರನ್ನ ಬರ ಮಾಡಿಕೊಳ್ತಾರೆ. ಪ್ರೀತಿಯ ಮುಂದೆ ಧಮ್ರ, ಸಂಪ್ರದಾಯ, ಗೊಡ್ಡು ಆಚರಣೆಗೆ ತಲೆ ಬಾಗಿತ್ತು.


ಮಂಜುನಾಥ್ ಹೆಚ್.ಆರ್.
Emai : manjunathahr1991@gmail.com