Thursday 12 May 2016

ಕೋಪ


   ಕೆಲವರಿಗೆ ತಮ್ಮ ಬಗ್ಗೆ ತಿಳಿದುಕೊಳ್ಳುವ ಕುತುಹಲ ಮತ್ತೆ ಕೆಲವರಿಗೆ ಅದರಿಂದಾಗುವ ಪ್ರಯೋಜನವೇನಿಲ್ಲ ಎಂಬ ಜಂಬದ  ಮಾತು. ಇವರೆಡರ ಮಧ್ಯೆ ತಮ್ಮ ಬಗ್ಗೆ ಬೇರೆಯವರ ಅಭಿಪ್ರಾಯ ತಿಳಿದುಕೊಳ್ಳುವ ತವಕ ಕುತೂಹಲ. ಇದರ ಪಟ್ಟಿಗೆ ಸೇರಿದವನು ಮೋಹನ್. ತುಂಬಾ ನೀಟ್, ಕಬ್ಬು ಕತ್ತರಿಸಿದಂತೆ ಮಾತು, ಈ ಕೆಲಸ ಹೀಗೆ ಆಗಬೇಕಂದರೆ ಅದು ಆ ಕ್ಷಣದಲ್ಲೇ ಆಗಬೇಕು. ಸ್ವಲ್ಪ ಲೇಟಾಯಿತೆಂದರೆ ಅವನ ಮುಖದಲ್ಲಿ ಆಗುವಂತ ಬದಲಾವಣೆ ಉಹೆ ಮಾಡುವುದಕ್ಕೂ ಆಗುವುದಿಲ್ಲ. ಮೂಗಿನ ತುದಿಯ ಮೇಲಿರುವ ಕೋಪ.
  ಹುಡುಗರ ಅಡ್ಡ ಸೋಮಾರಿ ಕಟ್ಟೆಯ ಮೇಲೆ ಕುಳಿತು ಮಾತನಾಡುವಾಗ ಆ ದಿನ ಮೋಹನ್ ಖುಷಿಯಾಗಿ ಇದ್ದ, ಇದೇ ಸಮಯ ಒಳ್ಳೆಯದೆಂದು ಜೀವಾ, ಮಗಾ ನಿನಗೊಂದು ಮಾತು ಹೇಳ್ತಿನಿ  ಬೇಜಾರು ಮಾಡ್ಕೊಬೇಡ, ನಿನ್ನತ್ರ ಎಂತ ಬೇಜಾರು ಹೇಳು ಮಗಾ, ಮೊದಲು ನಿನ್ನ ಕೋಪನ ಕಡಿಮೆ ಮಾಡ್ಕೊ, ಮೋಹನನಿಗೆ ಫುಲ್ ಶಾಕ್, ಏನಪ್ಪ ಇವನು ನನ್ನ ಬಗ್ಗೆ ಈ ರೀತಿ ಹೇಳತಿದನಲ್ಲ. ಯಾಕೆಂದ್ರೆ ಜೀವಾ ಇಂದು ನೆನ್ನೆ ಫ್ರಂಡ್ ಆದವನಲ್ಲ ಬಾಲ್ಯದಿಂದಲೇ ಒಟ್ಟಿಗೆ ಆಡಿ ಬೆಳೆದವರು. ನಾನೆಂದು ಇವನಿಂದ ಇಂತ ಮಾತನ್ನು ಬಯಸಿರಲಿಲ್ಲ ಅನ್ನೊ ಸಾಲು ಮನದೊಳಗೆ ಗಿರಕಿ ಹೊಡೆಯುತ್ತಿತ್ತು.
ಅದಕ್ಕೂ ಒಂದು ಕಾರಣ ಇದೆ. ಇದುವರೆಗೂ ಮೋಹನನ ಹತ್ತಿರದಿಂದ ಬಲ್ಲವರು, ಅವನ ಗೆಳೆತನವನ್ನು ಮಾಡಿದವರು ಮೋಹನ್ ಒಬ್ಬ ಇನೊಸೆಂಟ್, ಸೈಲೆಂಟ್, ಕೊಪನೇ ಮಾಡ್ಕೊಳದಿಲ್ಲ ಇವನ ಹಾಗೆ ನಮಗೆ ಇರೋದಕ್ಕೆ ಆಗಲ್ಲವಲ್ಲ ಅನ್ನೋ ಮಾತುಗಳೆ ಕೇಳುತ್ತಿದ್ದ ಇನನಿಗೆ ಇದೊಂದು ಹೊಸದು ಅನ್ನಿಸಿಬಿಟ್ಟಿತ್ತು.
   ಮುಂಗೋಪವನ್ನು ಕಡಿಮೆ ಮಾಡಿಕೊಳ್ಳೋ ಅನ್ನು ಮಾತು ಕೇಳಿ ಮೋಹನ್ ಗೆ ಅರಗಿಸಿಕೊಳ್ಳುವುದಕ್ಕೆ ಆಗಲಿಲ್ಲ, ನಿಧಾನವಾಗಿ ಯೋಚನೆ ಮಾಡಿದ, ಹಿಂದೆ ಕೆಲವರು ಅವನ ಗುಣದ ಬಗ್ಗೆ ಹೇಳಿದ್ದೆಲ್ಲ ನೆನಪಾಯಿತು. ಇರಬಹುದೇನೋ ಎನ್ನುವ ನಿದ್ರಾರಕ್ಕೆ ಬಂದ.
   ಅದು ಅವನ ಕುಟುಂಬದಿಂದ ಬಂದ ಬಳುವಳಿ, ಅಮ್ಮ ತುಂಬಾ ಸ್ಟ್ರಿಟ್, ಮನೆಯಲ್ಲಾಗಲಿ ಹೊರಗೆಯಾಗಲಿ, ನಿಟಾಗಿ ಇರ್ಬೇಕು ಅನ್ನೋದು ಅವರ ವಾದ, ಇದಕ್ಕೆ ಅಪ್ಪಾ ಏನು ಕಡಿಮೆ ಅಲ್ಲ ಶಿಸ್ತಿನಲ್ಲಿ ಅವರು ಒಂದು ಹೆಜ್ಜೆ ಮುಂದೇನೆ ಇರ್ತಾರೆ. ಆದ್ರೆ ಒಂದು ಅಮ್ಮನಿಗೆ ಕೋಪ ಜಾಸ್ತಿ, ಅಪ್ಪನಿಗೆ ತಾಳ್ಮೆ ಜಾಸ್ತಿ, ಇದರಿಂದಾಗಿ ಮೋಹನ್ ಬೇಗ ಕೋಪನು ಬರುತ್ತೆ ಅಷ್ಟೇ ಬೇಗ ತಾಳ್ಮೆನೂ ತಗೊತಾನೆ. ತಾಳ್ಮೆಗಿಂತ ಮುಂಗೋಪ ಇವನನ್ನ ಬಿಟ್ಟಿರಲಾರದೇನೋ ಅನ್ನಿಸಿ ಬಿಡುತ್ತೆ.
  ಮುಂಗೋಪದಿಂದಾಗಿ ಬಹಳ ತೊಂದರೆಗಳಿಗೆ ಒಳಗಾಗಿದ್ದ, ತುಂಬಾ ಆತ್ಮೀಯರನ್ನು ಕಳೆದುಕೊಂಡಿದ್ದಾ. ಜೀವಾನ ಮಾತನ್ನು ಸಮಾದಾನದಿಂದ ಕೇಳಿದ ಮೋಹನ್ ತನ್ನ ಬಗ್ಗೆ ಬೇರೆಯವರಲ್ಲಿ ಇರುವ ಅಭಿಪ್ರಾಯವನ್ನ ಪಡೆದುಕೊಂಡ. ಒಂದು ವೇಳೆ ಆಗ ಕೋಪ ಮಾಡಿಕೊಂಡಿದ್ದರೆ. ಜೀವನ ಬದಲಾಗುತ್ತಿರಲಿಲ್ಲ. ಜೀವವೇ ಬದಲಾಗುತ್ತಿತ್ತು.
  ಕೋಪ ಎಲ್ಲರಿಗೂ ಬರುತ್ತೆ ಅದನ್ನ ತಾಳ್ಮೆಗೆ ತೆಗೆದುಕೊಂಡು ನಡೆದರೆ ಜೀವನ ಸುಂದರ, ಸ್ವಲ್ಪ ಹೆಚ್ಚಾದರೆ ನರಕದ ದರುಶನ, ನಮಗೆ ಮಾತ್ರವೇ ಕೋಪ ಬರುವುದು ಎಂದು ಮಾತನಾಡುವವರು ಇದ್ದಾರೆ. ಅದು ಅವರ ದಡ್ಡತನ, ಕೋಪ ಬಂದರೆ ಒಬ್ಬರಿಗಿಂತ ಮತ್ತೊಬ್ಬರು ಹೆಚ್ಚೇ ಇರುತ್ತಾರೆ.
ಮಂಜುನಾಥ್ ಹೆಚ್.ಆರ್.
Gmail : manjunathahr1991@gmail.com

No comments:

Post a Comment