Friday 22 April 2016

ಸಾವಿನ ಕದ ತಟ್ಟಿದಾಗಿನ ಆ ಕ್ಷಣ


    ಡಿಗ್ರಿ ಅಂದ್ರೆ, ಅಲ್ಲಿ ಎಂಜಾಯ್ ಮೆಂಟ್ ಗೆ ಏನು ಬರ ಇರೊದಿಲ್ಲ, ಕಾಲೇಜ್ ಪ್ರೋಗ್ರಾಂ, ಸಿಂಪಲ್ ಸೆಮಿನಾರಸ್, ಕಲರ್ ಫೂಲ್ ಕ್ಲಾಸ್ ರೂಮ್, ಬೋರಿಂಗ್ ಟಿಚಿಂಗ್, ಬೇಕಾ ಬಿಟ್ಟಿ ವಾಕಿಂಕ್. ಇವೆಲ್ಲ ಒಂದು ಭಾಗ ಅಂತ ಅಂದು ಕೊಳ್ಳದವರು ಸ್ಟೂಡೆಂಟೆ ಅಲ್ಲಾ. ಅನ್ನೋ ರೇಂಜಿಗೆ ಥಿಂಕ್ ಮಾಡೋ ಜಾಯಮಾನ ನಮ್ಮದು. ಅದನ್ನ ಬಿಟ್ಟು ಕೊಡದ ಮನಸ್ಸು, ಏನನ್ನು ಬೇಕಾದರೂ ಮಾಡೂ ಹುಮ್ಮಸ್ಸು ಆಗ ಇಲ್ಲಾ ಅಂದ್ರೆ ಹೇಗೆ.
   ಹೀಗೆ ಒಂದಿನ ಕಾಲೇಜಿಗೆ ಮಾಸ್ ಬಂಕ್ ಹೊಡೆದು ಸಿನಿಮಾಗೆ ಹೊಗೋಣ ಅಂಥ ಪ್ಲಾನ್ ಮಾಡಿಕೊಂಡು, ಕಾಲೇಜಿನ ಕಾಂಪೌಂಡ್ ಹಾರಿದ್ವಿ. ನಮಗೇನು ಅದು ಬಂಕ್ ಆಗಿರ್ಲಿಲ್ಲ ಯಾಕೆಂದ್ರೆ, ಕಾಲೇಜಿಕೆ ಅಪರೂಪಕ್ಕೆ ಹೋಗುವವರಿಗೆ, ಕ್ಲಾಸ್ ಗೆ ಹೋದ್ರೂ ಒಂದೇ ಹೋಗದೇ ಇದ್ರು ಒಂದೇ. ಕಾಂಪೌಂಡ್ ಹಾರಿದ್ದಕ್ಕು ಕಾರಣ ಇದೆ. ಸೋಶಿಯಾಲಜಿ ಲೆಚ್ಚರರ್ ಸ್ವಲ್ಪ ಸ್ಟ್ರಿಟ್ ಕಾಲೇಜಿಗೆ ಬರದೆ ಹೊರಗೆ ಹೋಗ್ತಿದರೆ ಅಂತ ಗೊತ್ತಾದರಂತೂ ಮುಗಿಯಿತೂ ಕಥೆ. ಯಾವೂದೋ ಓಬಿರಾಯನ ಕಾಲದ ಕಥೆಯನ್ನು ರಿವೈಮಡ್ ಮಾಡಿ ನಮ್ ಕಾಲದಲ್ಲಿ ಹಾಗೆ ಓದಿದ್ವಿ, ಆಗ ಹೀಗೆ ಇರ್ಲಿಲ್ಲ. ತಮ್ಮ ಮಾತಿನ ಚಾಟಿಯನ್ನು ಬೀಸುತ್ತ ಇದ್ರು. ಇವರಿಗೆ ಎದುರು ಮಾತನಾಡಲು ಭಯ ಅಂತ ಅಲ್ಲಾ, ಯಾರ ಮೇಲು ಇಲ್ಲದ ಗೌರವ, ಅಭಿಮಾನ, ಪ್ರೀತಿ ಶಂಕರಪ್ಪ ಸರ್ ಅಂದರೆ, ತಂದೆಯ ವಯಸ್ಸಿನವರಾದ ಇವರನ್ನು ಕಂಡರೆ ಎಲ್ಲಾ ಸ್ಟೂಡೆಂಟ್ಸ್ಗೂ ಒಂದೇ ರೀತಿಯ ಗೌರವ.
    ಕಾಂಪೌಂಡ್ ಹಾರಿ ಸಾಲು ಸಾಲಾಗಿ ಗೋಡೆಯನ್ನು ಒರಗಿಕೊಂಡು ಮೋರಿಯನ್ನು ನೆಗೆದು, ರೋಡನ್ನು ದಾಟಿ ಸಿಟಿಯ ಒಳಗೆ ಹೊರಟ್ವಿ. ಯಾವ ಥಿಯೇಟರ್ ಗೆ ಹೋಗ್ಬೇಕು, ಯಾವ ಸಿನಿಮಾವನ್ನು ನೋಡ್ಬೇಕು ಒಬ್ಬರಿಗೂ ಐಡಿಯಾ ಇಲ್ಲಾ, ಒಬ್ಬೋಬ್ಬರು ಒಂದೊಂದು ಸಿನಿಮಾ ಹೆಸರನ್ನು ಬಾಯಿಂದ ಒಗೆದರು. ಒಬ್ಬ ತೆಲುಗು ಸಿನಿಮಾ ಎಂದರೆ, ಮತ್ತೊಬ್ಬ ಹಿಂದಿ ಎನ್ನುತ್ತಾನೆ, ಇನ್ನೊಬ್ಬ ತಮಿಳು ಎನ್ನುತ್ತಾನೆ. ನಾನು ದೃಡವಾಗಿ ಇವತ್ತು ಕನ್ನಡ ಸಿನಿಮಾ ನೋಡಲೇ ಬೇಕೆಂದು ಒತ್ತಾಯಿಸಿದ ಮೇಲೆ ಎಲ್ಲರು ಒಪ್ಪಿ ತುಮಕೂರಿನ ದೊಡ್ಡ ಥಿಯೇಟರ್ ‘ಮಾರುತಿ ಥಿಯೇಟರ್’ ಬಳಿಗೆ ಸುತ್ತಾಡಿಕೊಂಡು ಬಂದೆವು.
   ಜನ ಕಡಿಮೆ ಇದ್ದರು ಹಾಗೇ ಸುಲಭವಾಗಿ ಟಿಕೇಟ್ ಕೂಡ ಸಿಕ್ಕಿತು. ಒಳಗೆ ಹೋದೆವು. ಕೈಬೆರಳಿನಿಂದ ಎಲ್ಲರನ್ನು ಎಣಿಸಬಹುದಿತ್ತು, ಅಷ್ಟು ಜನ ನಮ್ಮ ಕನ್ನಡ ಸಿನಿಮಾವನ್ನ ಉದ್ದಾರ ಮಾಡಲು ಬಂದಿದ್ದರು. ನಮ್ಮ ಬಂದು ಭಾಂದವರು ನಮ್ಮ ಗೆಳೆಯರು ಸಿನಿಮಾ ಆರಭವಾಗಿ 10 ನಿಮಿಷವಾಗಿತ್ತು ಅಷ್ಟೇ ಅಷ್ಟರಲ್ಲೇ ನನ್ನನ್ನು ಬೈದುಕೊಳ್ಳುವುದಕ್ಕೆ ಸ್ಟ್ರಾಟ್ ಮಾಡಿದ್ರು. ಯಾಕೆಂದರೆ ಅವರ ಆಲೋಚನೆಗೆ ತಕ್ಕನಾಗಿ ಸಿನಿಮಾ ಇಲ್ಲದ್ದು ಎಲ್ಲರಿಗೂ ಬೇಜಾರು ತರಿಸಿತ್ತು.
  ಅಂಗೂ ಇಂಗೋ ಸಿನಿಮಾ ನೋಡಿ, ಆಚೆ ಬಂದರು ಅವರ ಹೊಗಳಿಕೆ (ಬೈಗುಳ) ಇನ್ನೂ ನಿಂತಿರಲಿಲ್ಲ. ಅದೇ ಆಲೋಚನೆಯಲ್ಲಿ ಸುಡು ಬಿಸಿಲನ್ನು ಲೆಕ್ಕಿಸದೇ ಹೈವೇ ಪಕ್ಕದಲ್ಲಿ ನಿದಾನವಾಗಿ ನಡೆದುಕೊಂಡು. ಹಿಂದಿನಿಂದ ಗೌರ್ನ್ ಮೆಂಟ್ ಬಸ್ಸೋಂದು ನಿಧಾನವಾಗಿ ನನ್ನ ಬೆನ್ನಿಗೆ ತಾಕಿತು. ನಿಧಾನವಾಗಿ ಹಿಂತಿರುಗಿ ನೋಡಿದ ತಕ್ಷಣ ಹೆದರಿ ಏನು ಮಾಡುತ್ತಿದ್ದೇನೆ, ಏನು ಮಾಡಬೇಕು ಎಂದು ತಿಳಿಯದೆ ಕರೆಂಟ್ ಹೊಡೆದ ಕಾಗೆಯ ಹಾಗೆ ಆಗಿತ್ತು ಆಗಿನ ಪರಿಸ್ಥಿತಿ. ಸ್ನೇತರೆಲ್ಲರು ಅವನ ಮೇಲೆ ಜೋರು ಮಾಡುತ್ತಿದ್ದರೆ. ನನಗೆ ಏನು ಮಾತನಾಡದೆ ಹೊರಗೆ ಬಂದಿದ್ದೆ ರೋಡ್ನಿಂದ. ಇಂತ ಅನುಭವ ಜೀವನದಲ್ಲಿ ಎಂದು ಮರಯುವುದಕ್ಕೆ ಸಾಧ್ಯ ಆಗಿಲ್ಲ. ಸಾವನ್ನು ಸಮೀಪಕ್ಕೆ ಬಂದು ಹೋಯಿತು.
ಮಂಜುನಾಥ ಹೆಚ್.ಆರ್.

Email : manjunathahr1991@gmail.com 

Monday 18 April 2016

ಕನ್ನಡದ ಮಕ್ಕಳಿಗೆ ಬೇಡವೇ ಜಂಗಲ್ ಕಥೆ.........


   ಡಬ್ಬಿಂಗ್ ವಿವಾದ ಒಂದಲ್ಲ ಒಂದು ತಿರುವು ಪಡೆದುಕೊಂಡು ಬುದಿ ಮುಚ್ಚಿದ ಕೆಂಡದಂತೆ ಆಗಿದೆ. ಪದೇ ಪದೇ ಅದು ಹೊಗೆಯಾಡುತ್ತಿದೆ ಎನ್ನುವುದಕ್ಕೆ ಇತ್ತಿಚೆಗೆ ತೆರೆ ಕಂಡ 'ದಿ ಜಂಗಲ್ ಬುಕ್' ಚಿತ್ರ ಸಾಕ್ಷಿಯಾಗುತ್ತಿದೆ. ಪ್ರಪಂಚದಾದ್ಯಂತ ಬಿಡುಗಡೆಯಾದ ಈ ಚಿತ್ರವನ್ನ ಇಂಗ್ಲಿಷ್ ಭಾಷೆಯಲ್ಲದೆ ಭಾರತದಲ್ಲಿ ನಮ್ಮ ಸೋದರ ಭಾಷೆ ತಮಿಳು, ತೆಲುಗಿನನ್ನೂ ತೆರೆ ಕಂಡು ಅಲ್ಲಿನ ಮಕ್ಕಳಿಗೆ ಇಂಗ್ಲೀಷ್ ಗೊತ್ತಿಲ್ಲದವರಿಗೆ ಅವರದೇ ಭಾಷೆಯಲ್ಲಿ ಚಿತ್ರ ತೋರಿಸಿದ್ದು ಆಯ್ತು. ಕನ್ನಡಕ್ಕೆ, ಕನ್ನಡದ ಮಕ್ಕಳಿಗೆ, ಕನ್ನಡ ಗೊತ್ತಿಲ್ಲದವರು ಪರ ಭಾಷೆಯಲ್ಲೇ ಸಿನಿಮಾ ನೋಡಬೇಕಾದ ದುಸ್ಥಿತಿ ಕನ್ನಡದ್ದು. ಇಷ್ಟೆಲ್ಲ ಮಾತನಾಡುವುದಕ್ಕೂ ಒಂದು ಕಾರಣವಿದೆ.
    ದಿ ಜಂಗಲ್ ಬುಕ್ ಚಿತ್ರದ ತಂತ್ರಜ್ಞಾನ, ನಟನೆ, 3ಡಿ ಎಫೆಕ್ಟ್ಸ್ ಬಗ್ಗೆ ತಿಳಿದುಕೊಳ್ಳುವ ಹಂಬಲದಿಂದ ತುಮಕೂರಿನಲ್ಲಿನ ಹತ್ತಿರದ ಥಿಯೇಟರ್ ಗೆ ಹೆಜ್ಜೆ ಹಾಕಿದ್ದೆವು. ನಮಗೇನು ಭಾಷೆಯ ಸಮಸ್ಯೆಯಾಗಲಿ, ಅಥವಾ ಇನ್ನಾವುದೇ ಸಮಸ್ಯ ಎದುರಾಗಲಿಲ್ಲ ಆದರೆ ನಮ್ಮ ಪಕ್ಕದ ಸೀಟ್ನಲ್ಲಿ ಕುಳಿತಿದ್ದ ಅಪ್ಪ-ಅಮ್ಮ ಒಂದು ಪುಟ್ಟ ಮಗುವಿನ ಕುಟುಂಬದ ಮಾತು ಕಥೆ ಎಲ್ಲಾ ಡಬ್ಬಿಂಗ್ ವಿವಾದಗಳನ್ನ ಕಣ್ಣ ಮುಂದೆ ತರಿಸಿಕೊಟ್ಟಿತು.
    ಅಪ್ಪ ಅಪ್ಪ ಆ ಹುಲಿ ಏನು ಹೇಳ್ತಿದೆ? ಅಪ್ಪ ಮೊಗ್ಲಿ ಏನ್ ಹೇಳ್ತಿದನೆ? ಅಪ್ಪ ಕರಡಿ ಏನು ಹೇಳ್ತು? ಇವಕ್ಕೆಲ್ಲ ಉತ್ತರವನ್ನ ಕನ್ನಡದಲ್ಲಿ ಆ ಮಗುವಿಗೆ ಅಪ್ಪ ವಿವರಿಸ್ತಾ ಇದ್ರು. ಅತ್ತಾ ನೋಡಲು ಆಗದೆ ಮಗಳಿನ ಮಾತಿಗೆ ಉತ್ತರಿಸಲಾಗದೆ ಅಪ್ಪಾ ಗೊಂದಲದಿಂದಲೇ ವಿವರಿಸ್ತಾ ಇದ್ರು. ಅವರ ಗೊಳನ್ನು ನೋಡಲಾಗದೆ ನಾವು ಆ ಮಗುವನ್ನು ಕರೆದು ತೊಡೆಯ ಮೇಲೆ ಕುರಿಸಿಕೊಂಡು ಮಗುವಿಗೆ ಕನ್ನಡದಲ್ಲಿ ಟ್ರಾನ್ಸ್ ಲೆಟ್ ಮಾಡಿದ್ವಿ.
   ಇಂತ ಪರಿಸ್ಥಿತಿ ಯಾರೊಬ್ಬರಿಗೆ ಬಂದಿದ ಸ್ಥಿತಿ ಅಲ್ಲಾ, ಇಂತಹ ಅನೇಕ ಉದಾಹರಣೆಗಳು ನಮ್ಮ ಕಣ್ಮುಂದೆಯೇ ಇವೆ. ನಮ್ಮಿಂದಾಗುವ ಸಿನಿಮಾಗಳ ಡಬ್ಬಿಂಗ್ ಮಾಡುವುದು ಬೇಡ ಕೊನೆಯ ಪಕ್ಷ ಇಂತಹ ಸಿನಿಮಾಗಳನ್ನಾದರು ಡಬ್ಬಿಂಗ್ ಮಾಡಿದರೆ. ಕನ್ನಡವೂ ಉಳಿಯುತ್ತದೆ, ಕನ್ನಡಿಗರು ಉಳಿಯುತ್ತಾರೆ, ಕನ್ನಡ ಸಿನಿಮಾಗಳಿಗೆ ಬೇಡಿಕೆಯ ಕಾಲವೂ ಬರುತ್ತೆ.
ಮಂಜುನಾಥ್ ಹೆಚ್.ಆರ್.

Email : manjunathahr1991@gmail.com

Saturday 9 April 2016

ಸ್ವೀಟ್ ಸೀನಿಯರ್ಸ್ ಕ್ಯೂಟ್ ಜ್ಯೂನಿಯರ್ಸ್....................


    ಅವಸರವಾಗಿ ಆಡಿಟೋರಿಯಂ ಫಿಕ್ಸ್ ಆಯ್ತು ಎಕ್ಸಾಂ ಹತ್ತಿರ ಇದೆ. ಇದೆಲ್ಲಾ ಬೇಡ ಸುಮ್ನೆ ಓದ್ಕೋ ಹೋಗಿ ಎಂದು ಡೈರೆಕ್ಟರ್ ಹೇಳಿಯಾಗಿತ್ತು. ಅದನ್ನ ಅಷ್ಟಕ್ಕೆ ಬಿಟ್ಟುಬಿಡುವ ಮನಸ್ಥಿತಿ ನಮ್ಮದಾಗಿರಲಿಲ್ಲದಿದ್ದರಿಂದ ನಮ್ಮ ಪ್ರಯತ್ನ ಮುಂದುವರೆದಿತ್ತು. ನಮ್ಮ ಫಿಕಲಾಟಕ್ಕೆ ಒಪ್ಪಿಗೆ ಸಿಕ್ಕಿದ್ದೇ ತಡ ನಮ್ಮ ಸೀನಿಯರ್ಸ್‍ಗೆ ಬಿಳ್ಕೊಡದಕ್ಕೆ ಅದ್ಧೂರಿ ತಯಾರಿಗಳು ಆರಂಭವಾದವು.
    ಇದು ನಡೆದದ್ದು ಸಮೂಹ ಸಂವಹನ ಸ್ನಾತಕೋತ್ತರ ಪದವಿಯನ್ನು ಮಡಬೇಕಾದ್ರೆ. ಅದನ್ನ ಮುಗಿಸಿ ಮೊನ್ನೆಯಷ್ಟೇ ಆಗಿದೆ. ತಯಾರಿಯ ಬಗ್ಗೆ ಅಲ್ಲಿ ನಡೆದ ಪ್ರತಿಯೊಂದು ಘಟನೆಗಳು ಮನಸ್ಸಿಗೆ ಖುಷಿಯನ್ನ ಕೊಡುತ್ತವೆ. 
   ಅಂದು ಪ್ರಥಮ ವರ್ಷದ ವಿಧ್ಯಾರ್ಥಿಗಳು ಅದರಲ್ಲೂ ಹುಡುಗರು ಪಂಚೆ ಬಿಳಿ ಅಂಗಿಯಿಂದ ಮಧುಮಗನಂತೆ ಕಾಣುತ್ತಿದ್ದರೆ. ಇತ್ತ ಹುಡುಗಿಯರು ನಾವೇನು ಹುಡುಗರಿಂತ ಕಮ್ಮಿ ಇಲ್ಲ ಅನ್ನೋ ರೀತಿ ರೆಡಿ ಆಗಿದ್ದರು. ಸಮಯ ಬೆಳಗ್ಗೆ 10 ಆಗಿತ್ತು ಗೆಸ್ಟ್ ಬರೋದಕ್ಕೆ ಇನ್ನ ಅರ್ಧಗಂಟೆ ಮಾತ್ರ ಬಾಕಿ ಉಳಿದ್ದು. ‘ಎಲ್ರಯ್ಯ ನಿಮ್ ಸೀನಿಯರ್ಸ್ ಒಬ್ಬರು ಕಾಣ್ತಿಲ್ಲ’ ಡೈರೆಕಟ್ಟರ್ ಮಾತಿಗೆ ನಮ್ಮಲ್ಲಿ ಉತ್ತರ ಇರಲಿಲ್ಲ. 
  ಎಲ್ಲರೂ ತಮ್ಮ ತಮ್ಮ ಮೊಬೈಲ್ ತೆಗೆದು ಎಲ್ಲರಿಗೂ ಕಾಲ್ ಮಾಡಿ ಬಿಳ್ಕೊಡುಗೆ ಸಮಾರಂಬಕ್ಕೆ ಬರುವುದಕ್ಕೆ ವಿನಂತಿಸಿಕೊಂಡಿದ್ದು. ಕಡೆಗೆ ಸಮಾರಂಭಕ್ಕೆ ಒಬ್ಬಬ್ಬರು ಒಂದು ರೀತಿಯಲ್ಲಿ ಅಂದರೆ ಕೆಲವರು ಖುಷಿಯಿಂದ ಬಂದರೆ ಮತ್ತೆ ಕೆಲವರು ಯಾಕಾದರೂ ಹೋಗುತ್ತೇವೋ ಅನ್ನೋ ಬೇಸರದಿಂದಲೇ ಬಂದಿದ್ದರು.
 ಗಂಡ ಹೆಡತಿ ಮಧ್ಯ ಕೂಸು ಬಡವಾಯಿತು ಅನ್ನೋಹಾಗೆ. ಉಪನ್ಯಾಸಕರು ಸೀನಿಯರ್ ವಿದ್ಯಾರ್ಥಿಗಳ ನಡುವೆ ಜೂನಿಯರ್ಸ್ ಸೊರಗಿ ಹೋಗಿದ್ದೆವು. ಸಮಾರಂಭದ ತುಂಬೆಲ್ಲಾ ಮಾತು ಕಥೆ, ಹರಟೆ, ಕಾರ್ಯಕ್ರಮದಲ್ಲಿ ಖುಷಿಗಳೆ ತುಂಬಿದ್ದವು. ನಮ್ಮ ಖುಷಿಗೆ ತಣ್ಣೀರೆರಚುವ ಸಂಗತಿ ಬಂದೊದಗುತ್ತದೆ ಎಂದು ಯಾರು ಉಹಿಸಿರಲಿಲ್ಲ. 
 

ವೇದಿಕೆಯ ಮೇಲೆ ಇಷ್ಟು ವರ್ಷದ ಸಿಹಿ, ಕಹಿ ಘಟನೆಗಳನ್ನ ಹಂಚಿಕೊಳ್ಳುವ ಎಲ್ಲಾ ಸೀನಿಯರ್ಸ್‍ಗೆ ಪೆಟ್ ನೇಮ್ ಇಟ್ಟು ಕರೆದದ್ದು. ಇದು ಅವರಿಗೆ ಇಷ್ಟವಾಗುತ್ತದೆ ಎಂದು ಎಲ್ಲರು ಭಾವಿಸಿದ್ದರು. ಅದು ತಲೆಕೆಳಗಾಗಿ ಹೋಗಿತ್ತು. ಮತ್ತೆ ಸಮಾಧಾನ ಮಾಡಿ ಎಲ್ಲರೂ ಕ್ಷಮೆ ಕೇಳೀದ್ದಾಯಿತು. ನಮ್ಮ ಅವರ ಸಂಬಂಧ ಗಟ್ಟಿ ಇದ್ದುದ್ದರಿಂದ ಅದು ಅವರ ಮನಸ್ಸಿನಲ್ಲಿ ಉಳಿದಿರಲಿಲ್ಲ.
ಅವರ ಜೊತೆ ಕಳೆದ ಒಂದೊಂದು ಕ್ಷಣವು ಸಿಹಿಯ ಕ್ಷಣಗಳಾಗಿದ್ದವು. ಒಂದು ವರ್ಷ ಕಳೆದ್ದು ಗೊತ್ತಾಗಲೇ ಇಲ್ಲ ಇಂದಿಗೂ ನಮ್ಮ ಸಂಬಂಧ ಹಾಗೇ ಇದೆ. ಸ್ವೀಟ್ ಸೀನಿಯರ್ಸ್ ಕ್ಯೂಟ್ ಜ್ಯೂನಿಯರ್ಸ್. 
ಮಂಜುನಾಥ್ ಹೆಚ್.ಆರ್. 
Email : manjunathahr1991@gmail.com

Thursday 7 April 2016

ಸುಳ್ಳೇ ಸತ್ಯ


     ಗಣೇಶ್ ಮುಂಜಾನೆ ಎದ್ದವನೇ, ಲೋ ಗಿರಿ ನೀನು ಮಾತಾಡೊಹಾಗಿದ್ರೆ ಆಚೆ ಹೋಗು ನನ್ನ ನಿದ್ರೆ ಹಾಳ್ಮಡ್ಬೇಡ ಹೋಗೋ ಆಚೆ ಎಂದು ರೇಗಿದನು. ಇವನ ಟಾರ್ಚರ್ ತಡೆಯೋಕೆ ಆಗದೆ ಗಣೇಶ್ ರೂಮಿನಿಂದ ಆಚೆ ಬಂದು ಮಾತನಾಡುತ್ತಿದ್ದನು. ಶಶಿ ರೂಮಿಗೆ ಬಂದು ಯಾಕೊ ಆಚೆ ಬಂದಿದ್ದಿಯಾ ಒಳಗೆ ಮಾತಾಡೋಕೆ ಆಗಲ್ವಾ? ಅಲ್ಲಿ ಗಿರಿ ಕಾಟ ಮಗಾ ನೆಮ್ಮದಿಯಾಗಿ ಮಾತಾಡೋಕು ಆಗಲ್ಲ ಎಂದು ಹೇಳಿ ಫೋನಿನಲ್ಲಿ ಮಾತು ಆರಂಭಿಸಿದನು.
   ಶಶಿ ಒಳಗೆ ಬಂದವನೆ ಯಾಕೊ ಬೆಳ-ಬೆಳಗ್ಗೆ ಅವನ ಮೇಲೆ ಕೂಗಾಡ್ತಿದಿಯಾ? ಇವನ್ದೇನು ಹೊಸದ ಬೆಳಗಾದ್ರೆ ಸಾಕು ಬೇಜಾನ್ ಕುಯ್ತಿರ್‍ತಾನೆ ಕೆಲಸಕ್ಕ ಬಾರದ ಮಾತಾಡ್ಕೊಂಡು. ಅದ್ ಯಾರ್ ಮಾತಾಡ್ತರೊ ಬೆಳ-ಬೆಳಗ್ಗೆ? ಇನ್ ಯಾರ್ ಮಾಡ್ತರೋ ಹುಡ್ಗೀರ್ ನಂಬರ್ ಕಲೆಕ್ಟ್ ಮಾಡ್ಕೊಂಡ್ ಬರ್ತನೆ ಬೇಜಾನ್ ಕುಯ್ತನೆ, ರಾತ್ರಿಯೆಲ್ಲ ನಿದ್ರೆ ಕೊಡಲ್ಲ. ಈ ಹುಡ್ಗೀರ್‍ಗೆ ಮಾಡೋಕೆ ಬೇರೆ ಕೆಲಸ ಇಲ್ವಾ? ಅವರೆಲ್ಲ ಅದೇ ರೂಟಲ್ಲಿ ಇರೋರು ಕಣೋ ಅವರ್ಗು ಮಾತಾಡೋಕೆ ಒಬ್ಬ ಬೇಕು ಮಾತಾಡ್ತರೆ.
   ಇವನೇನು ಸಾಮಾನ್ಯ ಅಂದ್ಕೂಡಿದ್ದಿಯಾ ಭಲೇ ಚಾಣಾಕ್ಷ, ಕಳ್ಳನ್ನ ನಂಬಿದ್ರು ಕುಳ್ಳನ್ನ ನಂಬಾರ್ದು ಅಂತಾರಲ್ಲ ಹಾಗೆ, ಸುಳ್ಳು ಹೇಳ್ತಾನೆ ಅಂದ್ರೆ! ಚಂದ್ರನ್ನ ತಂದು ಕೊಡ್ತಾನೆ, ಮಾತಲ್ಲೆ ಮನೆ ಕಟ್ತೆನೆ. ಈ ಹುಡ್ಗೀರು ಹೇಗೆ ನಂಬತ್ತರೆ ಇವನ್ನ ಮಾತನ್ನ?
    ಇಲ್ಲಿ ಕೇಳು ಒಂದಿನ ಬೆಳಗ್ಗೆ 5 ಗಂಟೆಗೆ ಒಂದು ಹುಡುಗಿ ಕಾಲ್ ಮಾಡಿ ಎಲ್ಲಿದಿಯಾ ಗಣಿ ಎಂದಳು. ಇಲ್ಲೆ ಮನೇಲಿ ಮಲಗಿದ್ದಿನಿ ಎಂದನು. ಸರಿ 6 ಗಂಟೆಗೆ ಹೊರಡು ಮೈಸೂರಿಗೆ ಹೋಗ್ಬರೋಣ ಎಂದಳು. ಸರಿ ಕಾರ್ ಬೇರೆ ಇಲ್ಲ ಅಷ್ಟು ದೂರ ಬೈಕಲ್ಲಿ ಹೋಗ್ಬರೋಕೆ ಆಗಲ್ಲ ಎಂದು ಕಥೆ ಹೇಳಿದ. ಸರಿ ನಾನ್ ಕಾರ್ ತರ್ತಿನಿ ಬೇಗ ಯುನಿವರ್ಸಿಟಿ ಹತ್ರ ಬಾ ಎಂದಳು. ಸರಿ ಎಂದು ಫೊನ್ ಕಟ್ ಮಾಡಿ ಇನ್ನೊಬ್ಬಳಿಗೆ ಫೋನ್ ಮಾಡಿ ನನ್ ಫ್ರಂಡ್‍ಗೆ ಆಕ್ಸಿಡೆಂಟ್ ಆಗಿದೆಕಣೆ  ದುಡ್ ಬೇಕು ಎಂದು ಹೇಳಿದನು ಸರಿ ಹಾಸ್ಟಲ್ ಹತ್ರ ಬಾ ಕೊಡ್ತಿನಿ ಎಂದಳು. ಇನ್ನೊಬ್ಬಳಿಗೆ ಮಿಸ್ಡ್ ಕಾಲ್ ಮಾಡ್ದ ಅವಳು ಕಾಲ್ ಮಾಡಿದ್ಲು ನಿನ್ನತ್ರ ಮಾತಾಡ್ಬೇಕು ಬ್ಯಾಲೆನ್ಸ್ ಕಾಲಿಯಾಗದೆ ಬೇಗ ಹಾಕ್ಸು ಎಂದನು ಸರಿ ಕಣೋ ಆಮೇಲ್ ಹಾಕಿಸ್ತಿನಿ ಎಂದಳು.
  ಇವನದೇನೊ ಒಂದ-ಎರಡ ದಿನಾ ಇದ್ದದ್ದೇ ಕಾಗೆ ಹಾರಿಸ್ತನೆ ಇರ್ತನೆ. ಇವನು ಹಾಕೊಳ್ಳೂ ಚಪ್ಪಲಿಯಿಂದ ತಲೆ ಬಾಚೊ ಬಾಚಣಿಗೆವರೆಗೂ ಎಲ್ಲಾ ಹುಡ್ಗೀರು ತೆಕ್ಕೊಟ್ಟಿರೊದು. ಹೇಗೂ ಇದೆಲ್ಲಾ? ಸುಳ್ಳು ಮಗಾ ಸುಳ್ಳು ನೋಡೋಕೆ ಸ್ವಲ್ಪ ಚೆನ್ನಾಗಿದನೆ ಅದನ್ನ ಈ ರೀತಿ ಎನ್ಕ್ಯಾಷ್ ಮಾಡ್ಕೊತಿದನೆ. ಸುಳ್ಳನ್ನೆ ನಿಜ ಅಂತ ನಂಬುತ್ತಿದ್ದಾರೆ. ಇವರಿಗೆ ಯಾವಾಗ ಬುದ್ಧಿ ಬರುತ್ತೊ?
ಮಂಜುನಾಥ ಹೆಚ್.ಆರ್
email : manjunathahr1991@gmail.com

ಮಾಡದ ತಪ್ಪಿಗೆ ಶಿಕ್ಷೆಯೇ ಈ ಪ್ರೀತಿ


   ಅವಳಿಗೆ ಹದಿನಾಲ್ಕಾರ ವಯಸ್ಸು ಅವನಿಗೆ ಹದಿನಾರರ ಹುಮ್ಮಸ್ಸು ಅವರಿಬ್ಬರ ನಡುವೆ ಪ್ರೀತಿ ಎಂಬ ಸುಳಿ ಗಾಳಿ ಸುಳಿದಾಗಿತ್ತು. ಅದು ಇಡೀ ಸ್ಕೂಲಿಗೆ. ಅಲ್ಲಾ ಅಲ್ಲಾ ಸ್ಕೂಲಿನ ಎಲ್ಲಾ ವಿದ್ಯಾರ್ಥಿಗಳ ನಾಲಿಗೆಯ ತುದಿ ಮೇಲೆ ಹರಿದಾಡುತ್ತಿತ್ತು. ಹೌದು ಅದು ಹೈಸ್ಕೂಲ್ ಪ್ರೀತಿ, ಅದರಲ್ಲಿ ಕಳಂಕವಿಲ್ಲ ಮೋಸವೆಂಬುದು ಗೊತ್ತಿಲ್ಲ. ಒಬ್ಬರನ್ನೊಬ್ಬರು ಬಿಟ್ಟರಲು ಆಗದ ಸ್ಥಿತಿ.
ಹೆಚ್ಚು ದಿನ ಅವರಿಬ್ಬರ ಪ್ರೀತಿಯನ್ನು ಮುಚ್ಚಿಡಲು ಆಗಲಿಲ್ಲ ಸ್ಕೂಲಿನ ಪ್ರಿನ್ಸಿಪಾಲ್‍ನಿಂದ ಅಟೆಂಡರ್‍ವರೆಗೂ ತಿಳಿದು ಆ ಹುಡುಗಿಗೆ ಮೇಡಮ್ಮಂದೀರು ತಮಗೆ ತಿಳಿದ ಮಟ್ಟಿಗೆ ಬುದ್ಧಿವಾದ ಹೇಳಿದ್ದು ಆಗಿತ್ತು. ಈ ಹುಡುಗನಿಗೆ ಮೇಷ್ಟ್ರು ಎನ್ನುವ ವ್ಯಕ್ತಿಗಳು ದಂಡದ ಪ್ರಯೋಗವನ್ನು ಮಾಡಿದ್ದು ಮುಗಿದಿತ್ತು. ಏಕೆಂದರೆ ಅವಳು 9ನೇ ತರಗತಿ ಇವನು 10ನೇ ತರಗತಿ ಆ ಸ್ಕೂಲಿನ ಎಲ್ಲಾ ವಿಷಯದಲ್ಲೂ ಮಿನುಗುವ ಎರಡು ದೃವ ತಾರೆಗಳು.
      ಇವರ ಈ ನಡವಳಿಕೆಯನ್ನು ಅವರ ಪೋಷಕರಿಗೆ ತಿಳಿಸಿ ಇವರನ್ನು ಬೇರೆ ಮಾಡುವ ಪ್ರಯತ್ನ ಕೂಡ ನಡೆದಿತ್ತು. ಅವಳನ್ನು ಬಿಟ್ಟಿರಲಾಗದ ಇವನ ಸ್ಥಿತಿ, ಅನುಭವಿಸಿದ ಯಾತನೆ ಅವನಿಗೆ ಮಾತ್ರ ಗೊತ್ತು. ಅವನನ್ನು ಮರೆಯಲಾಗದ ಯಾವ ಲಕ್ಷಣವು ಇವಳಲಲ್ಲಿ ಕಾಣದೇ ಇದ್ದಾಗಿ ಅವಳ ತಂದೆ ತಾಯಿಗೆ ಉಳಿದದ್ದು ಒಂದೇ ದಾರಿ ಅವಳ ಮದುವೆ. ಹಾದಿನಾರರ ಆ ಹುಡುಗಿಗೆ ವರ ನೋಡಿ ಮದುವೆ ನಿಶ್ಚಯ ತಯಾರಿ.
    ಮದುವೆಗೂ ಮುನ್ನ ಅವನ ಜೊತೆ ಒಮ್ಮೆ ಮಾತನಾಡಬೇಕೆಂದು ಸ್ಕೂಲಿನ ಬಳಿ ಓಡೋಡಿ ಬರುತ್ತಾಳೆ. ಅವನು ಸ್ಕೂಲಿನಿಂದ ಆಚೆ ಬರುವವರೆಗೂ ಅವನಿಗಾಗಿ ಕಾಯುತ್ತ ಆಚೆಗಿದ್ದ ಆಲದ ಮರದ ಬಳಿ ನಿಲ್ಲುತ್ತಾಳೆ. ಅವನ ಕಂಡೊಡನೆ ಅವಳಿಗಾದ ಆನಂದಕ್ಕೆ ಇವನಿಗಾದ ಆಶ್ಚರ್ಯಕ್ಕೆ ಪಾರವೇ ಇರಲಿಲ್ಲ. ಅವಳ ಮದುವೆಯ ವಿಚಾರವನ್ನು ಬಗೆ ಬಗೆಯಾಗಿ ಹೇಳಿ ಮನೆಬಿಟ್ಟು ಹೋಗುವ ನಿರ್ಧಾವನ್ನು ವ್ಯಕ್ತಪಡಿಸುತ್ತಾಳೆ. ಅದಕ್ಕೆ ನಾನು ಇನ್ನೂ ಓದ ಬೇಕು, ನಿನ್ನ ಚೆನ್ನಾಗಿ ನೋಡಿಕೊಳ್ಳಬೇಕು ಅಂದ್ರೆ ದುಡ್ಡು ಬೇಕಲ್ಲವ ಅದು ಅಲ್ಲದೆ ನಾವಿನ್ನು ಮೈನರ್ ಎಂದು ಅವಳನ್ನು ಸಮಾಧಾನಿಸುತ್ತಾನೆ. ಅದಕ್ಕೆ ತೃಪ್ತಳಾದ ಅವಳು ಮರು ಮಾತನಾಡದೆ ಅಲ್ಲಿಂದ ಓಡಿ ಬರುತ್ತಾಳೆ. ನೋಡು ನೋಡುತ್ತಿದ್ದಂತೆ ಅವಳ ಮದುವೆ ನಡೆದು ಹೋಗುತ್ತದೆ. ಯಾವುದೇ ಪ್ರತಿರೋಧವನ್ನು ತೋರಲಾಗದ ಪರಿಸ್ಥಿತಿ ಅವನದು.
    ಅದೇ ನೆನಪಿನಲ್ಲಿ ಅವನು ಮಾನಸಿಕವಾಗಿ ಕುಂದು ಹೋಗುತ್ತಾನೆ. ಇವನ ವೇದನೆಯನ್ನು ನೋಡಲಾದ ಇವನ ಅಪ್ಪ ಅಮ್ಮ ಇವನ್ನು ಆರ್ಮಿಗೆ ಹೋಗುವಂತೆ ಪ್ರೆರೇಪಿಸುತ್ತಾರೆ. ಅವರ ಆಸೆಯಂತೆ ಒಂದು ಪ್ರಯತ್ನವನ್ನು ಮಾಡಲಾಗಿ ಅವನ ಅದೃಷ್ಟವೆಂಬಂತೆ ಆಯ್ಕೆಯಾಗುತ್ತಾನೆ. ಮುಂದೆ ಓದದೆ ಎಲ್ಲವನ್ನು ಬಿಟ್ಟು ದೂರದ ಊರಿಗೆ ದೇಶ ಸೇವೆ ಮಾಡಲು ಹೊರಡುತ್ತಾನೆ.
   ಹತ್ತು ವರ್ಷಗಳ ನಂತರ ಅವನು ತನ್ನೂರಿಗೆ ಬಂದಾಗ ಆಕಸ್ಮಕವಾಗಿ ಅವಳನ್ನು ಕಾಣುತ್ತಾನೆ. ಅವಳ ಮುಖವು ಬಾಡಿಹೋಗಿ, ಹತಾಶೆಯಿಂದ ತುಂಬಿದ ನಿರಾಶೆಯ ಭಾವ ಹೊತ್ತ ಕರುಣಾಜನಕ ಸ್ಥಿತಿ ಅವಳದು ಕೈಯಲ್ಲೊಂದು ಮಗು, ಆ ಮಗುವಿನ ಸ್ಥಿತಿಯೇನು ಅವಳಿಗಿಂದ ಭಿನ್ನವಾಗಿಲ್ಲ. ಅವಳ ಕಣ್ಣಿನಿಂದ ಜಾರುತ್ತಿದದ್ದ ಹನಿಗಳೇ ಎಲ್ಲವನ್ನು ವಿವರಿಸುವಂತಿದ್ದವು. ಅವಳೇನು ಮಾತನಾಡದೆ ಮೂಕಳಾದವಳಂತೆ ಅವನನ್ನು ದಾಟಿ ಹೋದಳು.
   


ನಂತರ ತಿಳಿಯುತ್ತದೆ. ಅವನ ಗಂಡ ಕ್ಯಾಬ್ ಡ್ರೈವರ್, ಅವಳ ಪ್ರೀತಿಯ ಬಗ್ಗೆ ತಿಳಿದು ಪ್ರತಿ ಕ್ಷಣವು ಅವಳಿಗೆ ಚುಚ್ಚಿ ಮಾತನಾಡುತ್ತಿದ್ದನೆ. ಅವರಿಬ್ಬರ ನಡುವಿನ ಸಂಬಂಧ ಚೆನ್ನಾಗಿಲ್ಲ ಎಂದು. ಇದನ್ನು ತಿಳಿದ ಅವನು ಜರ್ಜರಿತನಾಗುತ್ತಾನೆ. ಮುಂದೆ ಏನು ಮಾಡಬೇಕೆಂದು ತಿಳಿಯದೆ ಕಳೆದು ಹೊದ ದಿನಗಳನ್ನು ನೆನೆಯುತ್ತಾ, ಅನು ಕ್ಷಣವು ಮಾಡದ ತಪ್ಪಿಗೆ ಶಿಕ್ಷೆಯನ್ನು ಅನುಭವಿಸುತ್ತಾ. ವಿಧಿಯ ಆಟಕ್ಕೆ ಶಪಿಸುತ್ತಾನೆ.
ಮಂಜುನಾಥ ಹೆಚ್.ಆರ್.
 email : manjunathahr1991@gmail.com