Tuesday 24 May 2016

ಪ್ರಾದೇಶಿಕ ಭಾಷೆಗೆ ಪರ್ವಕಾಲ

   ನಮ್ಮೂರಿನ ತಾಲೂಕು ಕೇಂದ್ರದಿಂದ ಹಿಡಿದು ಜಿಲ್ಲಾ ಕೇಂದ್ರಗಳಲ್ಲಿ ಕನ್ನಡ ಭಾಷೆಯ ಘೋಷಣೆಗಳು ಸಾಮಾನ್ಯ ಯಾಕೆಂದರೆ ಅದು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ್ದು, ರೈಲ್ವೇ ಇಲಾಖೆ ಕೇಂದ್ರ ಸರ್ಕಾರದ ಆಡಳಿತಕ್ಕೆ ಸಂಬಂಧಿಸಿದ್ದರೂ ಅಲ್ಲಿ ಹಿಂದಿ, ಇಂಗ್ಲೀಷ್ ಭಾಷೆಯ ಜೊತೆಗೆ ಸ್ಥಳೀಯ ಭಾಷೆಗಳಿಗೋ ಮಣೆ ಹಾಕಿದ್ದರೂ. ಆದರೆ ಈಗ ಸ್ಥಳೀಯರೆಲ್ಲರು ಸಂತಸ ಪಡುವಂತಹ ವಿಚಾರ, ಸ್ಥಳೀಯ ಭಾಷೆಗಳಲ್ಲಿ ವಿಮಾನ ಯಾನದ ಮಾಹಿತಿ ನೀಡುವ ಕುರಿತು ಚಿಂತನೆ ನಡೆಯುತ್ತಿದೆ. ಇದು ಎಲ್ಲಾ ಪ್ರಾದೇಶಿಕ ಭಾಷಿಗರು ಹೆಮ್ಮೆ ಪಡುವಂತೆ ಮಾಡಿದೆ. 
   ಎಷ್ಟೋ ಬಾರಿ ವಿಮಾನ ನಿಲ್ದಾಣಗಳಲ್ಲಿ ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಘೋಷಣೆಗಳನ್ನು ಕಿವಿಕೊಟ್ಟು ಆಲಿಸುವಾಗ, ಸ್ಥಳೀಯ ಭಾಷೆಯಲ್ಲಿ ಇರಬಾರದೇ ಎಂದು ಎಷ್ಟೋ ಜನಕ್ಕೆ ಅನ್ನಿಸಿದೆ. ಹೌದು ಆ ನಿಮ್ಮ ಮನದ ಮಾತು ತಲುಪಬೇಕಾದವರಿಗೆ ತಲುಪಿದೆ. ಭಾರತದ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಸಂಬಂಧಿಸಿದ ಘೋಷಣೆಗಳು ಪ್ರದೇಶಿಕ ಭಾಷೆಯಲ್ಲಿ ಕೂಡ ಇರಬೇಕೆಂದು ಕಡ್ಡಾಯಗೊಳಿಸಿವ ಸಾಧ್ಯತೆ ಇದೆ.
   ಸಾಮಾನ್ಯ ಜನರ ದೀರ್ಘ ಕಾಲದ ಬೇಡಿಕೆಯಿಂದಾಗಿ ದೇಶದ ನಾನಾ ಕಡೆಗಳಲ್ಲಿ ಹಲವಾರು ಸಣ್ಣ ಪುಟ್ಟ ವಿಮಾನ ನಿಲ್ದಾಣಗಳನ್ನು ಅಭಿವೃದ್ದಿಪಡಿಸುವುದಕ್ಕೆ ಹಾಗೂ ವೈಮಾನಿಕ ಸಂಪರ್ಕ ಹೆಚ್ಚಿಸಲು ಸರ್ಕಾರ ಯತ್ನಿಸುತ್ತಿದೆ. ವಿಮಾನ ಹಾರಾಟ ಮಾಡುವ ಸಮಯ ಮತ್ತು ಅದಕ್ಕೆ ಸಂಬಂಧಿಸಿದ ಘೋಷಣೆಗಳನ್ನು ನಿಲ್ದಾಣದಲ್ಲಿ  ಸ್ಥಳೀಯ ಭಾಷೆಯಲ್ಲೂ ನೀಡಬೇಕು ಎಂಬ ಬೇಡಿಕೆ ಹಿಂದಿನಿಂದಲೇ ಇತ್ತು. ಈ ಸಂಬಂಧ ನಾಗರೀಕ ವಿಮಾನ ಯಾನ ಸಚಿವಾಲಯ ಕ್ರಮ ತೆಗೆದುಕೊಳ್ಳುವ ನಿರೀಕ್ಷೆ ಇದೆ. 
    ಸದ್ಯದಲ್ಲಿ ಉತ್ತರ ಭಾರತದಲ್ಲಿರುವ ಏರ್‍ಫೋರ್ಟ್‍ಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್‍ನಲ್ಲಿ ಘೋಷಣೆಗಳನ್ನು ಮಾಡುತ್ತಾರೆ. ದಕ್ಷಿಣ ಭಾರತದ ಕೆಲ ಏರ್‍ಪೋರ್ಟ್‍ಗಳಲ್ಲಿ ಹಿಂದಿ-ಇಂಗ್ಲಿಷ್ ಜೊತೆಗೆ ಸ್ಥಳೀಯ ಭಾಷೆ ಉಪಯೋಗಿಸಲಾಗುತ್ತಿದೆ. ಆದರೆ ಸ್ಥಳೀಯ ಭಾಷೆಯ ಘೋಷಣೆ ಕಡ್ಡಾಯವಾಗು ಸಂದರ್ಭ ಇದೀಗ ಒದಗಿ ಬಂದಿದೆ. ಭಾರತದಲ್ಲಿ 65 ವಿಮಾನ ನಿಲ್ದಾಣಗಳಲ್ಲಿ ದೇಶಿಯ ಮಾರ್ಗದ ವಿಮಾನಗಳು ಹಾರಾಟ ನಡೆಸುತ್ತಿವೆ. ಸ್ಥಳೀಯ ಭಾಷೆಯಲ್ಲಿ ಘೋಷಣೆ ಬೇಕೆಂದು ಅನೇಕ ಪ್ರಯಾಣಿಕರು ನಾಗರೀಕ ವಿಮಾನ ಇಲಾಖೆಗೆ ಒತ್ತಾಯಿಸಿದ್ದರು.
   ಕಳೆದ ಜನವರಿ-ಏಪ್ರಿಲ್‍ನಲ್ಲಿ ದೇಶಿಯ ಏರ್ ಲೈನ್ ವಲಯದಲ್ಲಿ 23.29 ಪರ್ಸೆಂಟ್ ಬೆಳವಣಿಗೆ ದಾಖಲಾಗಿತ್ತು. ಸಣ್ಣ ಪುಟ್ಟ ಪಟ್ಟಣಗಳಿಂದಲೂ ವಿಮಾನದಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚುತ್ತಿದೆ. ಆದ್ದರಿಂದ ಸ್ಥಳೀಯ ಭಾಷೆಯನ್ನು ಬಳಸುವುದು ಅನಿವಾರ್ಯವಾಗುತ್ತಿದೆ. ಭಾರತದಲ್ಲಿ 400 ಮೀಟರ್‍ನಿಂದ 1 ಕಿ.ಮೀ ತನಕದ ರನ್ ವೇ ಇರುವ ವಿಮಾನ ನಿಲ್ದಾಣಗಳಿವೆ. ಇವುಗಳು ಭಾಗಶಃ ಸಕ್ರಿಯವಾಗಿವೆ. ಇವುಗಳ ಪೈಕಿ 10 ಏರ್ ಪೋರ್ಟ್‍ಗಳಿಗೆ ಪ್ರಸಕ್ತ ಸಾಲಿನಲ್ಲಿ ಕಾಯಕಲ್ಪ ನೀಡಲು ನಿರ್ಧರಿಸಿದ್ದಾರೆ. 
    ಅಂತೂ ಇಂತು ಪ್ರಾದೇಶಿಕ ಭಾಷೆಗಳಿಗೆ ಒಂದೊಳ್ಳೆ ಕಾಲ ಬಂದಿದೆ. ಅಳಿವಿನ ಅಂಚಿಗೆ ಸೇರುತ್ತಿದ್ದ ಭಾಷೆಗಳು ದೊಡ್ಡವರ ಅಂಗಳದಲ್ಲಿ ಬೆಳಗಲಿವೆ. ಇನ್ನೂ ಮುಂದೆಯಾದರು ಪ್ರಾದೇಶಿಕ ಭಾಷೆಯನ್ನ ಉಳಿಸುವತ್ತ ಸರ್ಕಾರಗಳು ಗಮನ ಹರಿಸಲಿ. ಇದು ಕನ್ನಡ ಭಾಷೆಗೆ ಎಷ್ಟರ ಮಟ್ಟಿಗೆ ಅನುಕೂಲವಾದಿತು ಎಂಬುದು ಪ್ರಶ್ನೆ ಯಾದರೆ, ಇಲ್ಲಿಯಾದರೂ ಉಳಿಯಲಿ ಅನ್ನುವುದು ನಮ್ಮವರ ಆಶಯ.


ಮಂಜುನಾಥ ಹೆಚ್.ಆರ್
email : manjunathahr1991@gmail.com

No comments:

Post a Comment