Sunday 20 March 2016

ಮುಂಜಾವಿನ ಕನಸು ಕಾಣಲು ಬಲು ಸೊಗಸು

ಮುಂಜಾವಿನ ಕನಸು ಕಾಣಲು ಬಲು ಸೊಗಸು

    ಮನೆಯೆಲ್ಲಾ ಹೂವಿನ ಅಲಂಕಾರ, ಎಲ್ಲಿ ನೋಡಿದರೂ ಸಭ್ರಮ ಸಡಗರ, ಗಿಜುಗುಡುವ ಜನರು, ಮೂಹರ್ತಕ್ಕೆ ಟೈಂ ಆಗುತ್ತೆ ಹೆಣ್ಣನ್ನ ಬೇಗ ರೆಡಿ ಮಾಡಿ ಅನ್ನೂ ಪುರೋಹಿತರು. ಆಗತಾನೆ ಎದ್ದು ಕಣ್ಣು ಉಜ್ಜುತ್ತಾ ರೂಮಿನಿಂದ ಬಂದ ನನ್ನ ಕಣ್ಣಿಗೆ ಕಾಣಿಸಿದ್ದು ಇಷ್ಟು. ಎನ್ ನಡಿತಿದೆ ನಮ್ಮನೇಲಿ ಎಂದು ಅರ್ಥವಾಗದಿದ್ದರು. ಅರ್ಥ ಮಾಡಿಕೊಳ್ಳಲು ಸುತ್ತಲೂ ಕಣ್ಣಾಡಿಸಿದೆ ನನ್ನ ಮದುವೆ ಎಂಬುದಂತೂ ಖಚಿತವಾಯಿತು. ನನ್ನ ಆಪ್ತ ಮಿತ್ರರೇನಾದರೂ ಬಂದಿದ್ದಾರೆಯೇನೂ ಎಂದು ನೋಡಿದರೆ ನವೀನ್ ಮತ್ತು ಲಕ್ಷಿನಾರಾಯಣ್ ಮಾತ್ರ ಬಂದಿದ್ದಾರೆ. ಮಂಜು, ರವಿ ಇಬ್ಬರು ಬಂದಿರಲಿಲ್ಲ ನನಗಂತೂ ರೇಗಿ ಹೋಯಿತು. ಅಮ್ಮ ಹೆಣ್ಣಿನ ಅಮ್ಮನ ಹತ್ತಿರ ಮಾತನಾಡುತ್ತಿದ್ದರು ಹತ್ತಿರ ಕರೆದು ಏನಮ್ಮ ನೀನು ನನಗೆ ಗೊತ್ತಿಲ್ಲದಂತೆ ಮದುವೆ ಫಿಕ್ಸ್ ಮಾಡಿದ್ದೀಯ ನನ್ ಫ್ರಂಡ್ಸ್ ಯಾರು ಬಂದಿಲ್ಲ ಎಂದು ಕೂಗಾಡುತ್ತಲೆ ಮದುವೆ ಚಪ್ಪರಕ್ಕೆ ಕಟ್ಟಿದ್ದ ಕಂಬಕ್ಕೆ ಕೋಪದಿಂದ ಹೊಡೆದೆ, ಪಕ್ಕದಲ್ಲಿದ್ದ ಚಂಬು ಪಕ್ಕಕ್ಕೆ ಬಡಿದು ಅದರಲ್ಲಿದ್ದ ನೀರು ಚೆಲ್ಲಿ ಮುಖಕ್ಕೆ ಹೊಡೆಯಿತು ತಟ್ಟನೆ ಮೇಲೆದ್ದೆ ಕಣ್ಣು ಬಿಟ್ಟು ನೋಡಿದರೆ ಯಾವ ಮದುವೆಯು ಇಲ್ಲ ಸಂಭ್ರಮ ಮೊದಲೇ ಇಲ್ಲಾ.
      ಅಂದು ರಾತ್ರಿ ಅಮ್ಮ ಕಾಲು ನೋವು ನನಗೆ ಕೆಲಸ ಮಾಡೋಕೆ ಆಗಲ್ಲ ಬೇಗ ಮದುವೆ ಮಾಡ್ಕೋ ಎಂದು ರೇಗಿ ಹೇಳಿದರು. ನಾನು ಬೇರೆ ಯಾವುದೂ ಬೇಜಾರಿನಲ್ಲಿದ್ದೆ ನಿಧಾನವಾಗಿ ಹೇಳಿದೆ ಈಗಲೇ ಬೇಡ ಬೇಕಾದ್ರೆ ಮನೆಕೆಲಸಕ್ಕೆ ಆಳು ಗೊತ್ತು ಮಾಡು. ಇಲ್ಲ ಅಂದ್ರೆ ನಾನೇ ಬೇಕಾದ್ರೆ ನಿನಗೆ ಸಹಾಯ ಮಾಡ್ತಿನಿ ಎಂದು ಹೇಳಿದೆ. ಅದೆಗೇ ಆಗುತ್ತೆ ನಿನ್ ಮದುವೆ ಆಗಬೇಕು ಅಷ್ಟೆ ಎಂದು ಒತ್ತಡ ಮಾಡಿ ಕುಳಿತರು. ನನಗಂತೂ ಭಯಂಕರ ಕೋಪ ಬಂದು ಉಟ ಮಾಡೋ ತಟ್ಟೆ ತೆಗೆದು ಜೋರಾಗಿ ಎರಚಾಡಿ, ಕೂಗಾಡಿ ರಾದ್ದಾಂತ ನಡೆದು ಉಟವನ್ನು ಮಾಡದೇ ನನ್ನ ರೂಮಿನಲ್ಲಿ ಬಂದು ಮಲಗಿದೆ.
  ನನಗಂತೂ ಈಗಲೇ ಮದುವೆ ಆಗಿ ಏನ್ ಮಾಡಬೇಕಿದೆ, ನಾನು ಜೀವನದಲ್ಲಿ ಒಂದು ಸಾಧನೆ ಮಾಡಬೇಕು ಅಂದುಕೊಂಡಿರೋನು ಇವರಾರು ನನ್ನ ಅರ್ಥನೇ ಮಾಡ್ಕೂತಿಲ್ಲವಲ್ಲ. ನನ್ನ ಕಾಲ ಮೇಲೆ ನಾನು ನಿತುಕೊಳ್ಳ ಬೇಕು. ನೂರು ಜನರಲ್ಲಿ ಒಬ್ಬನಲ್ಲ ನೂರು ಜನರಲ್ಲಿ ಮೊದಲನೆಯವನಾಗಿ ಬದುಕ ಬೇಕು ಎಂಬುದೇ ನನ್ನ ಆಸೆ. ಎಂದು ಯೋಚಿಸುತ್ತಿರುವಾಗಲೇ ಇಷ್ಟೆಲ್ಲ ನಡೆದು ಹೋಯಿತು. 
   

ಒಂದು ಕಡೆ ಖುಷಿ ನನ್ನ ಮದುವೆ ಸಂಭ್ರಮವನ್ನ ನೋಡಿದೆನಲ್ಲ ಎಂದು ಮತ್ತೊಂದು ಕಡೆ ಬೇಜಾರು ಆ ಮದುವೆ ಹೆಣ್ಣನ್ನ ನೋಡಲಿಲ್ಲವಲ್ಲ ಎಂದು ಇರಲಿ ಬಿಡು ಕನಸಿಗೆ ಬಂದವಳು ಕೈ ಹಿಡಿಯದೆ ಹೋಗ್ತಾಳ ಸಿಕ್ತಾಳೆ ಬಿಡು ಅಂತಾ ಹೇಳ್ತಿದೆ ನನ್ನ ಪುಟ್ಟ ಹೃದಯ.

ಮಂಜುನಾಥ ಹೆಚ್.ಆರ್.
mail : manjunathahr1991@gmail.com


No comments:

Post a Comment