Sunday 1 May 2016

ಅದೇ ಹದಿನೆಂಟನೇ ಪಾಠ - ಪ್ರೀತಿಯ ಕಾಟ


    ಕೆಲವು ಸಲ ಇಷ್ಟ ಪಟ್ಟು ಬರೆಯುವುದಕ್ಕಿಂತ ಕಷ್ಟ ಪಟ್ಟು ಬರೆಯಬೇಕಾಗುತ್ತೆ ಯಾಕೆ ಅಂತ ಗೊತ್ತಿಲ್ಲದೆ, ಯಾರಿಗೆ ಅಂತ ಹೇಳದೆ, ಕೈ ಹಿಡಿದ ಲೇಖನಿ ಒಂದೇ ಆಧಾರವಾಗಿ ನಿಂತಿರುತ್ತೆ. ಬಿಳಿಯ ಸ್ವಚ್ಚಂದ ಹಾಳೆಯ ಮೇಲೆ ಕಪ್ಪು ಮಸಿಯ ಆಲಿಂಗನ ಆಗುವಲ್ಲಿ. ಮನದೊಳಗೆ ಮುಚ್ಚಿಟ್ಟ ಮನದ ಭಾವನೆಯ ಗೂಡು ನಿಧಾನವಾಗಿ ತೆರೆದುಕೊಳ್ಳುತ್ತೆ. ಇದನ್ನು ಬರೆಯುವುದಕ್ಕೆ ಇಷ್ಟು ದಿನ ಬೇಕಾಯಿತಲ್ಲ ಅನ್ನುವುದು ಒಂದು ಕಡೆ, ಇಷ್ಟು ದಿನವಾದರು ಯಾಕೆ ಬರೆಯಲಿಲ್ಲ ಅನ್ನುವುದು ಮತ್ತೊಂದು ಕಡೆ. ಈಗಲಾದರೂ ಬರೆಯುತ್ತಿದ್ದೇನಲ್ಲ ಅನ್ನುವುದು ಒಳಗೊಳಗೆ ಸಂತೋಷದ ಖುಷಿಯ ಕಡೆಗೆ. ಪ್ರೀತಿಯ ಮೂಲೆಗೆ.
  ತಲೆಗೆ ಅರಳೆಣ್ಣೆ ಮೆತ್ತಿಕೊಂಡು, ಪಟ್ಟೆ ಪಟ್ಟೆ ಅಂಗಿ ತೊಟ್ಟ, ದೊಗಲೆಯ ಪ್ಯಾಂಟ್ ಸೇರಿಸಿಕೊಡು, ಸವೆಯಲು ಇನ್ನೇನು ಇಲ್ಲದ ಹಾವಾಯ್ ಚಪ್ಪಲಿಯ ಕಾಲಿಗೆ ಸಿಕ್ಕಿಸಿ ಓಡಾಡುತ್ತಿದ್ದವನಿಗೆ, ಆಕಸ್ಮಿಕವಾಗಿ ಪಿಯುಸಿ ಪಾಸ್ ಮಾಡಿಕೊಂಡು, ಫ್ಯಾಷನ್ ತನ್ನ ಉಸಿರಾಗಿಸಿಕೊಂಡು ತಿರುಗಾಡುವ ಕಾಂಕ್ಟ್ರಿ್ ನಗರಕ್ಕೆ ಕಾಲಿಟ್ಟರೆ ಹೇಗೆ ಆಗಬೇಡ. ಅಲ್ಲಿ ಏನು ಮಾಡಬೇಕು ಎಂದು ತೋಚದೆ. ಕಾಲೇಜಿನ ಮರ ಒರಗಿ ನಿಂತ್ತಿದ್ದೆ.
  ಅವಸರ ಅವಸರವಾಗಿ ಗುಳಿ ಕೆನ್ನೆಯ ಹುಡಿಗಿಯೊಬ್ಬಳು ಹತ್ತಿರ ಬಂದು ಕೆಮಿಸ್ಟ್ರಿ ಲ್ಯಾಬ್ ಯಾವ ಕಡೆ ಎಂದು ಹೇಳಿ, ಅವಳ ಮುಖವನ್ನೇ ನೋಡುತ್ತಿದ್ದ. ನನ್ನ ಮುಖವನ್ನು ನೋಡಿ. ಅವಳೇ ಮಾತನಾಡಿಕೊಳ್ಳುತ್ತಾ ಥ್ಯಾಂಕ್ಸ್ ಹೇಳಿ ಹೋದಳು. ಹಳ್ಳಿಯಲ್ಲಿ ದೆವ್ವ ಬಂದವರು ಬಿಡುವ ಹಾಗೆ ಕೂದಲು, ಅವರಪ್ಪ ಚಿಕ್ಕ ವಯಸ್ಸಿನವಳಾಗಿದ್ದಾಗ ತಂದಿದ್ದ ಟೀ ಶಟ್ರ್, ಹರಿದ ಬಟ್ಟೆ ಹಾಕುವ ಬಡವರಂತೆ ಹರಿದ ಜೀನ್ಸ್ ಪ್ಯಾಂಟ್ ಎಲ್ಲಾ ಹೊಸತರಲ್ಲಿ ಹೊಸತು.
  ಮರುದಿನ ಹತ್ತಿರ ಬಂದು ಅವಳೇ ಮಾತನಾಡಿಸುವಾಗ, ಗಂಟಲಿನಲ್ಲಿ ನೀರು ಹಿಂಗಿ ಹೋಗಿದ್ದು ಅವಳಿಂದಾಗಿಯೇ, ಅವಳ ಮಿಂಚಿನ ಕಣ್ಣಿನಿಂದಾಗಿಯೇ, ಬಯಸಿ ಬಂದ ಅವಳ ಸ್ನೇಹ ಬೇಡ ಎನ್ನಲು ಮನಸ್ಸಾಗದೇ ಅವಳನ್ನೇ ಹಿಂಬಾಲಿಸಿತ್ತು. ಅವಳ ನೋಡುತ್ತಾ ಬದಲಾಗಿದ್ದು, ನಾನು ನನ್ನ ಜೀವನ ಶೈಲಿ. ಬರು ಬರುತ್ತಾ ಬಿಟ್ಟಿರಲಾರದ ಸಂಬಂಧ. ಏನೆಂದು ಹೇಳಬೇಕು ಅವಳ ಚಂದ.
 ಸಾಲು ಸಾಲು ಮರ ಸುತ್ತುವ ಹಂಬಲ, ಕೆಳಬೇಕೆ ಅವಳ ಅನುಮತಿ, ತಿರಸ್ಕರಿಸಿದರೆ ಏನು ಮಾಡುವುದು, ಕಳೆದುಕೊಳ್ಳುವುದಕ್ಕಿಂತ. ಅವಳ ನೆನಪಿನಲ್ಲಿ ಕೊನೆಯವರೆಗೂ ಇರಲೇ. ಕೊನೆಯವರೆಗೂ ನನ್ನ ಮನದ ಒಡತಿ ಬರುವವರೆಗೂ.
ಮಂಜುನಾಥ್ ಹೆಚ್.ಆರ್.
Email : manjunathahr1991@gmil.com





No comments:

Post a Comment