Wednesday 9 March 2016

ಕನ್ನಡ, ಕನ್ನಡವಾಗಿದ್ದರೆ ಸಾಲದೇ........ ?

       ಕನ್ನಡ, ಕನ್ನಡವಾಗಿದ್ದರೆ ಸಾಲದೇ........ ?

     ಹಳಗನ್ನಡ, ನಡುಗನ್ನಡ, ಹೊಸಗನ್ನಡ ಎಂಬ ಪ್ರಕಾರಗಳನ್ನ ನಮ್ಮ ಮಾತೃ ಭಾಷೆ ಕನ್ನಡದಲ್ಲಿ ಕಾಣಬಹುದು. ಇದು ಕನ್ನಡ ಭಾಷೆ ನಡೆದು ಬಂದ ದಾರಿಯ ಬಗ್ಗೆ ತಿಳಿಸುತ್ತದೆ. ಅವುಗಳನ್ನ ನಾವುಗಳು ಇಂದಿಗೆ ಬಳಸುತ್ತಿದ್ದೇವೆಯೇ ಎಂಬುದು ನನ್ನ ಪ್ರಶ್ನೆ? ಕಾಲ ಬದಲಾದಂತೆ ಭಾಷೆಯು ಸಹ ತನ್ನಲ್ಲಿ ಹೊಸ ರೂಪವನ್ನು ಪಡೆದುಕೊಳ್ಳುತ್ತಾ ಸಾಗುತ್ತಿದೆ. ಕನ್ನಡ ಆರಂಭದಲ್ಲಿ ಬಳಸುತ್ತಿದ್ದ ಎಷ್ಟೋ ಪದಗಳು ಇಂದು ಬಳಕೆಯಲ್ಲಿ ಇಲ್ಲ, ಉದಾಹರಣೆಗೆ “ ರೇಫ, ಶಕಟ ರೇಫ ” ಮೊದಲಾದವುಗಳನ್ನು ಕಾಣಬಹುದು.
    ಇಂದಿನ ಪೀಳಿಗೆಗೆ ಬಂದರೆ ಯುವ ಜನಾಂಗದ ಭಾಷೆಯ ಬಳಕೆ ಸರಿ ಇಲ್ಲ ಹಾದಿ ಬೀದಿಯಲ್ಲಿ ಒದರುವ ಪದಗಳು ಹಾಡುಗಳಾಗುತ್ತಿವೆ ಎಂಬ ವಾದ ಹಿರಿಯರದ್ದು. ಇದು ಯಾಕಾಗಬಾರದು. ಒಂದು ವರದಿಯ ಪ್ರಕಾರ ಕನ್ನಡ ಭಾಷೆ ಅಳಿವಿನ ಅಂಚಿನಲ್ಲಿರುವ ಭಾಷೆಗಳಲ್ಲಿ 36 ಸ್ಥಾನದಲ್ಲಿದೆ ಅಂದರೆ ಇನ್ನು ಕೆಲವೇ ವರ್ಷಗಳಲ್ಲಿ ಇದು ಮರೆಯಾಗುತ್ತದೆ ಎಂದಾಯಿತು. ಇದನ್ನು ಉಳಿಸುವ ಪ್ರಯತ್ನ ಮಾಡಬೇಕಾಗಿದೆ ಹಾಗೆಂದ ಮಾತ್ರಕ್ಕೆ ಕನ್ನಡ ಭಾಷೆಯ ಈ ರೀತಿಯ ಬಳಕೆಯಿಂದ ಉಳಿಯುತ್ತದೆ ಎಂಬುದಲ್ಲ ಕೊನೆಯ ಪಕ್ಷ ಈ ರೀತಿಯಂದಾದರು ಕನ್ನಡ ಉಳಿದೀತೆಂಬ ಆಶಾಭಾವನೆ.
    ಹಿರಿಯರು ಹೇಳುತ್ತಿರುವುದು ಸತ್ಯ ಸಂಗತಿ. ಅವರ ಹಿರಿಯರು ಹೇಳಿದ ಮಾತುಗಳನ್ನು ಅವರು ಅನುಸರಿಸಿದ್ದಾರೆಯೇ ? ಇಂದಿಗೂ ಎಲ್ಲಿ ಕೇಳಿದರೂ ಕನ್ನಡ ಉಳಿಸಿ ಎಂಬ ಕೂಗು ಕೇಳುತ್ತದೆಯೇ ವಿನಃ ಕನ್ನಡವನ್ನು ಬೆಳೆಸಿ ಎಂಬುದನ್ನು ನಾನಂತೂ ಕೇಳಿಲ್ಲ ಎರಡಕ್ಕೂ ವ್ಯತ್ಯಾಸವಿದೆ. ಭಾಷೆಯ ಬೆಳವಣಿಗೆಯಾದಂತೆ ಅದು ಹೊಸ ರೂಪವನ್ನು ಪಡೆದುಕೊಳ್ಳುತ್ತದೆ. 
      ಇನ್ನು ಅಲ್ಪಪ್ರಾಣ, ಮಹಾಪ್ರಾಣ ಗೊತ್ತಿಲ್ಲ ಅನ್ನೂ ವಾದ ಇದಕ್ಕೆ ಕಾರಣ ಯಾರೂ? ನಮ್ಮ ಶಿಕ್ಷಕರು ಅವರು ಮಾಡುವ ಸಣ್ಣ ತಪ್ಪುಗಳು ಇಂದು ಇಲ್ಲಿ ಮಾತನಾಡುತ್ತಿವೆ. ಜನ ಹೊಸದನ್ನು ಬಯಸುವ ಕಾಲವಿದು ಆದ್ದರಿಂದ ಭಾಷೆ ಬಳಕೆ ಹೇಗಿರಬೇಕು, ಬರವಣಿಗೆ ಹೇಗಿರಬೇಕು, ಪದ ಬಳಕೆ ಹೇಗಿರ ಬೇಕು ಎಂದು ಅವರೇ ನಿರ್ಧಾರ ಮಾಡುತ್ತಾರೆ. 
    ಕನ್ನಡ ಒಂದೇಯಲ್ಲ ಅನೇಕ ಭಾಷೆಗಳು ಇಂತಹುದೇ ಸಮಸ್ಯಯನ್ನ ಎದುರಿಸುತ್ತಿವೆ. ಇಂದಿನ ಯುವ ಜನತೆ ನಮಗೆ ಏನು ಬೇಕು ಅದನ್ನು ಇಟ್ಟುಕೊಳ್ಳುತ್ತಾರೆ ಬೇಡವಾದದನ್ನು ಬಿಟ್ಟು ಬಿಡುತ್ತಾರೆ. ಭಾಷೆಯ ವಿಚಾರದಲ್ಲೂ ಹಾಗೆಯೇ ತಮಗೆ ಬೇಕಾದ ರೀತಿಯಲ್ಲಿ ಭಾಷೆಯನ್ನ ಉಳಿಸಿಕೊಂಡು ಬೆಳೆಸಲು ಹೊರಟಿದ್ದಾರೆ ಇದು ತಪ್ಪಲ್ಲ ಯಾವುದೇ ಒಂದು ವೆವಸ್ಥೆಗೆ ಕಚ್ಚಿಕೊಳ್ಳುವ ಮನೋಗುಣ ಇವರದಲ್ಲ. ಭಾಷೆ ಹೇಗೆ ಬೆಳೆದರೇನು ಕನ್ನಡ, ಕನ್ನಡವಾಗಿದ್ದರೆ ಸಾಲದೇ.





               ಮಂಜುನಾಥ ಹೆಚ್. ಆರ್


No comments:

Post a Comment