Thursday 3 March 2016

ಅದ್ದೂರಿ ಮದುವೆ ಏಕೆ .......... ?

ಅದ್ದೂರಿ ಮದುವೆಗೆ ಆರ್ಶಿವಾದವೇ ಶ್ರೀರಕ್ಷೆ ...........

      ನಾನೇನು ವಿವಾಹಿತನಲ್ಲ ಇನ್ನು ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಅಣಿಯಾಗಿರುವವನು. ಮದುವೆಯ ಬಗ್ಗೆ ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿರುವವನು. ಕೆಲವರಿಗೆ ಮದುವೆ ಪ್ರತಿಷ್ಟೆಯಾಗಿರುತ್ತದೆ, ಕೆಲವರಿಗೆ ಅದು ಸಾಮಾನ್ಯ ಸಮಾರಂಭ, ಮತ್ತೆ ಕೆಲವರಿಗೆ ಅದು ದೈವ ಸಂಕಲ್ಪ. ಅದು ಏನೇ ಇದ್ದರು ಮದುವೆ ಮದುವೆಯೇ.
    ಪ್ರತಿಯೊಬ್ಬರು ತಮ್ಮ ಮದುವೆ ಹಾಗೆ ನಡೆಯಬೇಕು, ಹೀಗೆ ನಡೆಯಬೇಕು, ಅವರು ಬರಬೇಕು, ಇವರು ಬರಬೇಕು ಎಂದು ತಮ್ಮದೇ ಆದ ಕನಸನ್ನು ಕಟ್ಟಿಕೊಂಡಿರುತ್ತಾರೆ. ಅದರಲ್ಲಿ ಸರಳ ವಿವಾಹವನ್ನು ಅಪೇಕ್ಷೆ ಪಡುವವರಿಗಿಂತ ಅದ್ದೂರಿ ಮದುವೆಯನ್ನು ಇಷ್ಟ ಪಡುವವರೆ ಹೆಚ್ಚು. ಅದು ಅವರ ಜೀವನದ ಮೊದಲ ಮತ್ತು ಕೊನೆಯ ಮದುವೆ ( ಕೆಲವರಿಗೆ ) ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಡುವ ದಿನ ಜೀವನದಲ್ಲಿ ಎಲ್ಲರು ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬುದು ಅವರ ಆಸೆ.
    ಯಾವುದೇ ಧರ್ಮವಿರಲಿ ಅದಕ್ಕೆ ಅದರದೇ ಆದ ರೂಢಿ ಸಂಪ್ರದಾಯಗಳು ಇರುತ್ತವೆ. ಅದು ಆ ಧರ್ಮಿಯರ ನಂಬಿಕೆಯು ಕೂಡ ಆಗಿರುತ್ತದೆ. ಹಿರಿಯರ ಆರ್ಶಿವಾದ ಕಿರಿಯರ ಹಾರೈಕೆಯ ಮೇಲೆ ನಂಬಿಕೆ ಇರುವುದರಿಂದ ಮದುವೆಗೆ ನೂರಾರು - ಸಾವಿರಾರು ಜನರು ಬರಬೇಕು ನಮ್ಮನ್ನು ಹಾರೈಸಬೇಕು ನಮಗೆ ಆಶೀರ್ವಾದವನ್ನು ನೀಡಬೇಕು ನಮಗೆ ಅವರ ನಗು ಮುಖದ ಹಾರೈಕೆಯೇ ನಮಗೆ ಕೋಟ್ಯಾನು ಕೋಟಿ ದೇವತೆಗಳ ಆಶೀರ್ವಾದವಾಗಿರುತ್ತದೆ.
     ನಾವು ಕಷ್ಟಪಟ್ಟು ದುಡಿಯುವುದು ನಾವು ಚೆನ್ನಾಗಿರಬೇಕು ಜೀವನದಲ್ಲಿ ಆಗುವ ಒಮ್ಮೆ ಮದುವೆಗೆ ಹೆಚ್ಚು ಹಣವನ್ನು ಖರ್ಚು ಮಾಡಿ ಬಂಧು-ಬಾಂಧÀವರನ್ನು ಕರೆದು ಅವರ ಸಮ್ಮುಖದಲ್ಲಿ ಸುಖಮಯ ದಾಂಪತ್ಯಕ್ಕೆ ಕಾಲಿಡಲು ಖುಷಿ ಎನಿಸುತ್ತದೆ. ಅದು ಅರೇಂಜ್ ಮ್ಯಾರೇಜ್ ಇರಲಿ ಲವ್ ಮ್ಯಾರೇಜ್ ಮದುವೆ ಸಾಧÀ್ಯವಾದ ಮಟ್ಟಿಗೆ ಅದ್ದೂರಿಯಾಗಿರಲಿ.

ಮಂಜುನಾಥ ಹೆಚ್.ಆರ್.

e-mail : manjunathahr1991@gmail.com


No comments:

Post a Comment