Monday 22 February 2016

ಸ್ವೀಟ್ ಸೀನಿಯರ್ಸ್ ಕ್ಯೂಟ್ ಜ್ಯೂನಿಯರ್ಸ್

ಸ್ವೀಟ್ ಸೀನಿಯರ್ಸ್ ಕ್ಯೂಟ್ ಜ್ಯೂನಿಯರ್ಸ್
ಅವಸರವಾಗಿ ಆಡಿಟೋರಿಯಂ ಫಿಕ್ಸ್ ಆಯ್ತು ಎಕ್ಸಾಂ ಹತ್ತಿರ ಇದೆ. ಇದೆಲ್ಲಾ ಬೇಡ ಸುಮ್ನೆ ಓದ್ಕೋ ಹೋಗಿ ಎಂದು ಡೈರೆಕ್ಟರ್ ಹೇಳಿಯಾಗಿತ್ತು. ಅದನ್ನ ಅಷ್ಟಕ್ಕೆ ಬಿಟ್ಟುಬಿಡುವ ಮನಸ್ಥಿತಿ ನಮ್ಮದಾಗಿರಲಿಲ್ಲದಿದ್ದರಿಂದ ನಮ್ಮ ಪ್ರಯತ್ನ ಮುಂದುವರೆದಿತ್ತು. ನಮ್ಮ ಫಿಕಲಾಟಕ್ಕೆ ಒಪ್ಪಿಗೆ ಸಿಕ್ಕಿದ್ದೇ ತಡ ನಮ್ಮ ಸೀನಿಯರ್ಸ್ಗೆ ಬಿಳ್ಕೊಡದಕ್ಕೆ ಅದ್ಧೂರಿ ತಯಾರಿಗಳು ಆರಂಭವಾದವು.
ಇದು ನಡೆದದ್ದು ಸಮೂಹ ಸಂವಹನ ಸ್ನಾತಕೋತ್ತರ ಪದವಿಯನ್ನು ಮಡಬೇಕಾದ್ರೆ. ಅದನ್ನ ಮುಗಿಸಿ ಮೊನ್ನೆಯಷ್ಟೇ ಆಗಿದೆ. ತಯಾರಿಯ ಬಗ್ಗೆ ಅಲ್ಲಿ ನಡೆದ ಪ್ರತಿಯೊಂದು ಘಟನೆಗಳು ಮನಸ್ಸಿಗೆ ಖುಷಿಯನ್ನ ಕೊಡುತ್ತವೆ.
ಅಂದು ಪ್ರಥಮ ವರ್ಷದ ವಿಧ್ಯಾರ್ಥಿಗಳು ಅದರಲ್ಲೂ ಹುಡುಗರು ಪಂಚೆ ಬಿಳಿ ಅಂಗಿಯಿಂದ ಮಧುಮಗನಂತೆ ಕಾಣುತ್ತಿದ್ದರೆ. ಇತ್ತ ಹುಡುಗಿಯರು ನಾವೇನು ಹುಡುಗರಿಂತ ಕಮ್ಮಿ ಇಲ್ಲ ಅನ್ನೋ ರೀತಿ ರೆಡಿ ಆಗಿದ್ದರು. ಸಮಯ ಬೆಳಗ್ಗೆ 10 ಆಗಿತ್ತು ಗೆಸ್ಟ್ ಬರೋದಕ್ಕೆ ಇನ್ನ ಅರ್ಧಗಂಟೆ ಮಾತ್ರ ಬಾಕಿ ಉಳಿದ್ದು. ‘ಎಲ್ರಯ್ಯ ನಿಮ್ ಸೀನಿಯರ್ಸ್ ಒಬ್ಬರು ಕಾಣ್ತಿಲ್ಲ ಡೈರೆಕಟ್ಟರ್ ಮಾತಿಗೆ ನಮ್ಮಲ್ಲಿ ಉತ್ತರ ಇರಲಿಲ್ಲ.
ಎಲ್ಲರೂ ತಮ್ಮ ತಮ್ಮ ಮೊಬೈಲ್ ತೆಗೆದು ಎಲ್ಲರಿಗೂ ಕಾಲ್ ಮಾಡಿ ಬಿಳ್ಕೊಡುಗೆ ಸಮಾರಂಬಕ್ಕೆ ಬರುವುದಕ್ಕೆ ವಿನಂತಿಸಿಕೊಂಡಿದ್ದು. ಕಡೆಗೆ ಸಮಾರಂಭಕ್ಕೆ ಒಬ್ಬಬ್ಬರು ಒಂದು ರೀತಿಯಲ್ಲಿ ಅಂದರೆ ಕೆಲವರು ಖುಷಿಯಿಂದ ಬಂದರೆ ಮತ್ತೆ ಕೆಲವರು ಯಾಕಾದರೂ ಹೋಗುತ್ತೇವೋ ಅನ್ನೋ ಬೇಸರದಿಂದಲೇ ಬಂದಿದ್ದರು.
ಗಂಡ ಹೆಡತಿ ಮಧ್ಯ ಕೂಸು ಬಡವಾಯಿತು ಅನ್ನೋಹಾಗೆ. ಉಪನ್ಯಾಸಕರು ಸೀನಿಯರ್ ವಿದ್ಯಾರ್ಥಿಗಳ ನಡುವೆ ಜೂನಿಯರ್ಸ್ ಸೊರಗಿ ಹೋಗಿದ್ದೆವು. ಸಮಾರಂಭದ ತುಂಬೆಲ್ಲಾ ಮಾತು ಕಥೆ, ಹರಟೆ, ಕಾರ್ಯಕ್ರಮದಲ್ಲಿ ಖುಷಿಗಳೆ ತುಂಬಿದ್ದವು. ನಮ್ಮ ಖುಷಿಗೆ ತಣ್ಣೀರೆರಚುವ ಸಂಗತಿ ಬಂದೊದಗುತ್ತದೆ ಎಂದು ಯಾರು ಉಹಿಸಿರಲಿಲ್ಲ.
ವೇದಿಕೆಯ ಮೇಲೆ ಇಷ್ಟು ವರ್ಷದ ಸಿಹಿ, ಕಹಿ ಘಟನೆಗಳನ್ನ ಹಂಚಿಕೊಳ್ಳುವ ಎಲ್ಲಾ ಸೀನಿಯರ್ಸ್ಗೆ ಪೆಟ್ ನೇಮ್ ಇಟ್ಟು ಕರೆದದ್ದು. ಇದು ಅವರಿಗೆ ಇಷ್ಟವಾಗುತ್ತದೆ ಎಂದು ಎಲ್ಲರು ಭಾವಿಸಿದ್ದರು. ಅದು ತಲೆಕೆಳಗಾಗಿ ಹೋಗಿತ್ತು. ಮತ್ತೆ ಸಮಾಧಾನ ಮಾಡಿ ಎಲ್ಲರೂ ಕ್ಷಮೆ ಕೇಳೀದ್ದಾಯಿತು. ನಮ್ಮ ಅವರ ಸಂಬಂಧ ಗಟ್ಟಿ ಇದ್ದುದ್ದರಿಂದ ಅದು ಅವರ ಮನಸ್ಸಿನಲ್ಲಿ ಉಳಿದಿರಲಿಲ್ಲ.
ಅವರ ಜೊತೆ ಕಳೆದ ಒಂದೊಂದು ಕ್ಷಣವು ಸಿಹಿಯ ಕ್ಷಣಗಳಾಗಿದ್ದವು. ಒಂದು ವರ್ಷ ಕಳೆದ್ದು ಗೊತ್ತಾಗಲೇ ಇಲ್ಲ ಇಂದಿಗೂ ನಮ್ಮ ಸಂಬಂಧ ಹಾಗೇ ಇದೆ. ಸ್ವೀಟ್ ಸೀನಿಯರ್ಸ್ ಕ್ಯೂಟ್ ಜ್ಯೂನಿಯರ್ಸ್.
ಮಂಜುನಾಥ್ ಹೆಚ್.ಆರ್.
Email : manjunathahr1991@gmail.com


No comments:

Post a Comment