Monday 22 February 2016

ಮರೆಯಾಗು ನೀ ಓ ನೆನಪೆ..........!


ಮರೆಯಾಗು ನೀ ನೆನಪೆ..........!
 ಅಮ್ಮ ಊಟಕ್ಕೆ ಕರೆದಾಗ ಸಮಯ ರಾತ್ರಿ 9 ಗಂಟೆ ನಿದ್ರೆ ಏನು ಬಂದಿರಲಿಲ್ಲ. ನಿದ್ರೆ ಮಾಡುವುದಕ್ಕೆ ಅವಕಾಶವೇ ಇರಲಿಲ್ಲ. ತಟ್ಟೆ ಮುಂದೆ ಕುಳಿತಾಗಲೂ ನೆನಪು ನೀರಿನ ಅಲೆಯತ್ತೆ ಒಂದರ ಮೇಲೊಂದರಂತೆ ತೇಲಿ ಬರುತ್ತಿತ್ತು. ಅನ್ನದ ಅಗುಳಿನಲ್ಲಿ ಬಿಸಿ ಉಸಿರನ್ನು ಹೆಕ್ಕಿ ತರುತ್ತಿತ್ತು. ಮೇಲೆದ್ದವನೆ ನನಗೆ ಊಟ ಬೇಡ ಎಂದು ಹೋಗಿ ಮಲಗಿದೆ. ಅಮ್ಮ ಬೈದುಕೊಳ್ಳುತ್ತಾ. ಯಾವಾಗಲೂ ಇವನದು ಇದೇ ಆಯ್ತು ಎಂದು ಗೊಣಗುತ್ತಾ ತಟ್ಟೆಯನ್ನು ಎತ್ತಿಕೊಂಡು ಅಡುಗೆ ಮನೆಯಲ್ಲಿ ಇಟ್ಟ ಸದ್ದು ನನಗೆ ಕೆಳಿಸಲೇ ಇಲ್ಲ.
 ಮುಸ್ಸಂಜೆ ಅಮ್ಮ ಸಂತೆಗೆ ಹೋಗಿ ಬರೋಣವೆಂದು ನಮ್ಮೂರಿನಿಂದ 2 ಕಿ.ಮೀ ನಡೆದು ಸಾಗುವ ದಾರಿಯಲ್ಲಿ ಕರೆದುಕೊಂಡು ಹೋದರು. ನನಗೂ ಸಂತೆಯಲ್ಲಿ ತಿನ್ನುವುದಕ್ಕೆ ಏನನ್ನಾದರೂ ಅಮ್ಮ ಕೊಡಿಸಿಯಾಳು ಎಂಬ ದೃಡವಾದ ನಂಬಿಕೆಯಿಂದ ಅವಳ ಕೈ ನಾನಿಡಿದಿದ್ದೆನೋ ಅಥವಾ ಅವಳೇ ನನ್ನ ಕೈ ಹಿಡಿದಿದ್ದಳೊ ಒಟ್ಟಿನಲ್ಲಿ ನಮ್ಮ ದಾರಿ ಅತ್ತ ಕಡೆ ಸಾಗಿತ್ತು.
 ಒಂದು ವಾರಕ್ಕಾಗುವಷ್ಟು ತರಕಾರಿಯನ್ನು ತನ್ನ ಬಲಗೈಯೊಂದರಲ್ಲೇ ಬಂದಿಸಿ. ಮತ್ತೊಂದರಲ್ಲಿ ನನ್ನ ಕೈಗಳನ್ನು ಹಿಡಿದು ಇಳಿ ಸಂಜೆಯಲ್ಲಿ ಮನೆಯ ಕಡೆ ಹೆಜ್ಜೆ ಹಾಕುತ್ತಿದ್ದೆವು. ಎದುರಿನಿಂದ ದೂಳನ್ನೆಬ್ಬಿಸುತ್ತಾ ಮೋಟಾರು ಗಾಡಿಯೊಂದು ನಮ್ಮ ಕಡೆಗೆ ಬರುತ್ತಿರುವುದು ಅದರ ಒರಟು ಶಬ್ದದಿಂದಲೇ ಗೊತ್ತಾಗುತ್ತಿತ್ತು. ಅದನ್ನು ನೋಡಲಾಗದೆ ಅಮ್ಮನ ಹಿಂದೆ ಹೆದರಿ ಬಚ್ಚಿಟ್ಟುಕೊಂಡಿದ್ದೆ. ಬಂದ ಬಂದವನೆ ಕತ್ತಲೆಯನ್ನು ಸೀಳಿಕೊಂಡು ಯಮದೂತನಂತೆ ನಿಂತಿದ್ದ ರಸ್ತೆ ಬದಿಯ ಆಲದ ಮರಕ್ಕೆ ಡಿಕ್ಕಿ ಹೊಡೆದು ಕೆಳಕ್ಕೆ ಬಿದ್ದರು.
 ಅವರು ಹೋಗುವುದನ್ನೆ ನೋಡುತ್ತಿದ್ದ ನಾನು ಹೆದರಿ ಒಂದು ಕ್ಷಣ ಹಾಗೆಯೇ ನಿಂತಿದ್ದೆ. ಅಮ್ಮ ಜೋರಾಗಿ ಎಳೆದಳು ಬಾ ಹೋಗೋಣ ಎಂದು. ನಾನು ಅವರಿಗೆ ಎನಾಗಿದೆಯೋ ಎನೋ ನೋಡೋಣ ಎನಾದರೂ ಸಹಾಯ ಬೇಕೆಂದರೆ ಮಾಡೋಣವೆಂದು ಮನಸ್ಸಿನಲ್ಲಿ ಬಂದ ಮಾತನ್ನು ಹೊರಗೆ ಬಿಟ್ಟೆ. ಅಮ್ಮನಿಂದ ಇದಕ್ಕೆ ನಕಾರಾತ್ಮ ಉತ್ತರ ಬಂತು. ಇದೆಲ್ಲ ನಮಗೆ ಬೇಡ ಪೋಲಿಸು, ಕೇಸು ಅಂದ್ರೆ ಮತ್ತೆ ಕೊರ್ಟು ಕಚೇರಿ ಅಂತ ಅಲಿತಾ ಇರ್ಬೇಕಾಗುತ್ತೆ ಅಂತ ಹೆದರ್ಸಿ ನನ್ನನ್ನು ಅಲ್ಲಿಂದ ಕರೆದುಕೊಂಡು ಹೋದಳು.
 ಅಮ್ಮ ನಾನು ಮಲಗಿದ್ದಲ್ಲಿಗೆ ಹಾಲನ್ನು ತಂದು ಊಟ ಅಂತು ಮಾಡಿಲ್ಲ ಹಾಲಾದ್ರು ಕುಡಿ ಎಂದು ಅಲ್ಲಿಂದ ಹೋದರು. ಅಲ್ಲಿನ ನೆನಪುಗಳು ಮಾತ್ರ ಪದೇ ಪದೇ ಕನಸುಗಳಾಗಿ ಕಣ್ಣ ಮುಂದೆ ಕಾಡುತ್ತಿವೆ. ನಾನು ಅವರಿಗೆ ಸಹಾಯ ಮಾಡಿದ್ದರೆ. ಅವರು ಬದುಕುತಿದ್ದರೆನೋ. ನಾನು ಅಲ್ಲಿಂದ ಬಂದು ತಪ್ಪು ಮಾಡಿದಿನೆನೊ ಎಂಬ ಅಸಮಾದಾನದ ಹೊಗೆಯಾಡುತ್ತಲೆ ಇದೆ. ಇದು ನಡೆದು ಇಂದಿಗೆ 16 ವರ್ಷಗಳು ಕಳೆದಿವೆ. ನೆನಪುಗಳಿಗೆ ವರ್ಷದ ಅಂತರ ತಿಳಿದಿಲ್ಲ. ಮನದಲ್ಲಿ ಕಹಿ ಘಟನೆ ಅಳಿಸಿಲ್ಲ.

ಮಂಜುನಾಥ ಹೆಚ್. ಆರ್.
Email : manjunathahr1991@gmail.com


No comments:

Post a Comment