Monday 29 February 2016

ಮದುವೆ ಎಂಬ ಮೂರಕ್ಷರ .......!

 ಕೆಲವರು ಹುಡುಗರಿಗೆ ಮದುವೆ ಅಂದ್ರೆ ಖುಷಿ ಈ ಬ್ರಹ್ಮಚರ್ಯ ಜೀವನಕ್ಕೆ ವಿದಾಯ ಹೇಳಿ ಧಾಂಪತ್ಯ ಜೀವನಕ್ಕೆ ಯಾವಾಗ ಕಾಲಿಡುತ್ತೇವೋ ಎಂದು ಅನ್ನಿಸಿಬಿಟ್ಟಿರುತ್ತದೆ. ಹೆಂಡತಿ ಮಕ್ಕಳು  ಆ ಸಂಸಾರದ ಸುಖವನ್ನು ಅನುಭವಿಸಲು ಹಾತೊರೆಯತ್ತಿರುತ್ತಾರೆ. ಮತ್ತೆ ಕೆಲವರು ಮದುವೆಗೂ ಮುನ್ನ ಜೀವನದಲ್ಲಿ ಏನಾದರೂ ಸಾಧನೆ ಮಾಡಿ ಸಾಕಷ್ಟು ಹಣವನ್ನು ಸಂಪಾದನೆ ಮಾಡಿಕೊಂಡು ನಂತರ ಮದುವೆ ಮಾಡಿಕೊಳ್ಳೋಣವೆಂದುಕೊಂಡಿರುತ್ತಾರೆ. ಹೀಗೆ ಒಬ್ಬೂಬ್ಬರದು ಒಂದೂಂದು ರೀತಿಯ ಕನಸುಗಳಿರುತ್ತವೆ ಮದುವೆಯ ಬಗ್ಗೆ ಭಯ ಇರುವುದಿಲ ಆದರೆ ಕೆಲವರಿಗೆ ಮದುವೆ ಎಂದರೆ ಭಯ ಶುರುವಾಗುತ್ತೆ.
       ಶ್ರೀನಿವಾಸನನ್ನು ನೋಡಿ ದೇವರಾಜ ಬಿದ್ದು ಬಿದ್ದು ನಗುತ್ತಿದ್ದನು ಯಾಕೆಂದು ಅರ್ಥವಾಗದ ನಮಗೆ ಅವನ ನಗು ನೋಡಿ ತಡೆಯಲಾಗದೆ ನಾವು ನಗುತ್ತಿದ್ದವು ಶ್ರೀನಿವಾಸ  ಯಾಕ್ರೊ ಹೀಗೆ ನಗ್ತಿದಿರಾ,? ಅದೇನು ಹೇಳ್ರೋ ನಾನು ನಗ್ತಿನಿ ಎಂದು ಹೇಳಿದ. ದೇವರಾಜ ಮಾತು ಆರಂಭಿಸಿ ಏನಪ್ಪ ನಿನಗೆ ಧೈರ್ಯ ಜಾಸ್ತಿನ, ತಾಳಿ ಕಟ್ಟಬೇಕಾದ್ರೆ ನಿನ್ನ ಕೈ ನಡುಗೊದಿಲ್ಲವ, ನಿನ್ನ ಮದುವೆ ದಿನ ತಾಳಿ ಕಟ್ಟಬೇಕಾದ್ರೆ ನಡುಗಿಸುತ್ತಿದ್ದುದು ನಮ್ಮ ಕೈ ಎಂದು ಗೇಲಿ ಮಾಡಿ ನಗು ಜೋರು ಮಾಡಿದನು. ಶ್ರೀನಿವಾಸ ಮದುವೆಗೆ ಮುನ್ನ ಅನೇಕ ಮದುವೆಗಳಲ್ಲಿ ವರ ವಧುವಿಗೆ ತಾಳಿಯನ್ನು ಕಟ್ಟ ಬೇಕಾದರೆ ವರನ ಕೈ ನಡುಗುವುದು ಸಹಜ ಆದರೆ ಒಣ ಪ್ರತಿಷ್ಟೆಗೆ ಶ್ರೀನಿವಾಸ ಇದನ್ನು ಹೇಳೀದ್ದ ಕೊನೆಗೆ ಎಲ್ಲರ ಅಪಹಾಸ್ಯಕ್ಕೆ ಒಳಗಾಗಿ ಅರೆಕ್ಷಣ ಮಂಕಾಗಿದ್ದನು.
ಇದು ಶ್ರೀನಿವಾಸನದು ಇನ್ನು ಲಕ್ಷಿ ನಾರಾಯಣನನ್ನು ನೆನಸಿಕೊಂಡರೆ ಸಾಕು ಮಧ್ಯ ರಾತ್ರಿ ಕನಸಿನಲ್ಲೂ ನಗು ಬಾರದೆ ಇರಲಾರದು. 
     ಮಗ ಮದುವೆ ವಯಸ್ಸಿಗೆ ಬಂದಿದ್ದಾನೆ ಆತನಿಗೆ ಮೊದಲು ಒಂದು ಮದುವೆ ಮಾಡಬೇಕು ಇವನ ಇಬ್ಬರು ತಮ್ಮಂದಿರು ಇನ್ನೆರಡು ವರ್ಷದಲ್ಲಿ ಮದುವೆಗೆ ಬಂದುಬಿಡುತ್ತಾರೆ. ಎಂದು ಮನೆಯಲ್ಲಿ ಮದುವೆಯ ವಿಚಾರದ ಪ್ರಸ್ತಾಪ ಮಾಡಿದರು ಇದಾದ ಒಂದು ದಿನದಲ್ಲಿ ಪಾಪ ಲಕ್ಷಿ ನಾರಾಯಣ ಚಳಿ ಜ್ವರ ಬಂದು ಹಾಸಿಗೆ ಹಿಡಿದನು. ಇದುವರೆಗೂ ಮನೆಯವರಿಗೂ ಗೊತ್ತಿಲ್ಲ ಇತನಿಗೆ ಯಾಕೆ ಚಳಿ ಜ್ವರ ಬಂದಿದ್ದು ಅಂತ. ಇದನ್ನು ಕೇಳಿ ನಾವೆಲ್ಲರು ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದರೆ ನಮ್ಮ ಕಷ್ಟ ನಮಗೆ ನಿಮಗೇನು ನಗು ಬರುತ್ತೆ ಬಿಡ್ರೊ ಲೋ ಎಂದು ಬೇಜಾರಿನಿಂದ ನುಡಿದನು.
    ನಮ್ಮ ಪುಟ್ಟ ರಾಜುವಿನದು ಮತ್ತೊಂದು ತೆರನಾದುದು ಮನೆಗೆ ಹಿರಿಯನಾದ್ದರಿಂದ ಮನೆಯಲ್ಲಿ ಮದುವೆ ಶುಭ ಕಾರ್ಯ ನಡೆದು ಸುಮಾರು ವರ್ಷಗಳು ಕಳೆದಿದ್ದವು. ಸಹಜವಾಗಿ  ನನ್ನ ಮದುವೆಯೇ ಎಂದು ನಂಬು ಸ್ಥಿತಿಯಲ್ಲಿರಲಿಲ್ಲ ಮನೆಯಲ್ಲಿ ಸಹಜವಾಗಿ ಹಿರಿಯರು ಹೆಣ್ಣು ನೋಡಲು ಆರಂಬಿಸಿದರು ಈತ ಮನೆ ಬಿಟ್ಟು ತೋಟ ಸೇರಿದ. ಯಾಕೋ ಮನೆ ಬಿಟ್ಟು ತೋಟ ಸೇರಿದಿಯ ಎಂದು ಕೇಳಿದರೆ ಮದುವೆ ಎಂದ ಹೌದು ಕಣೊ ನಿನಗೆ ಮದುವೆ ಮಾಡ್ತಿರೋದು ಅದಕ್ಕೆ ನಾನು ಮನೆ ಬಿಟ್ಟು ತೋಟದ ಮನೆಯಲ್ಲಿ ಇದ್ದಿನಿ ಎಂದ ಅಲ್ಲ ಕಣೊ ಮದುವೆ ಅಂದ್ರೆ ಎಲ್ಲರೂ ಖುಷಿ ಪಡ್ತಾರೆ, ನೀನ್ ನೊಡಿದ್ರೆ ಭಯ ಆಗುತ್ತೆ ಅಂತ ಹೇಳ್ತಿದಿಯಲ್ಲ ಮರಾಯ ಎಂದು ಅವನನ್ನು ಮನೆಗೆ ಕರೆ ತಂದಿದಾಯ್ತು.
   ರೇಣುಕಯ್ಯ ಒಲ್ಲದ ಮನಸ್ಸಿನಿಂದ ಮದುವೆಗೆ ಒಪ್ಪಿ ಮದುವೆ ನಡೆದ ಒಂದು ದಿನದಲ್ಲಿ ನಮ್ಮ ಬಳಿ ಬಂದು ಕಣ್ಣೀರಾಕಿದ್ದು ಉಂಟು. ಅದು ಸಂತೋಷಕ್ಕೊ ಅಥವಾ ದುಃಖಕ್ಕೊ ತಿಳಿಯದು ಆದರೆ ಈ ಬ್ಯಾಚುಲರ್ ಲೈಫ್ ಮತ್ತೆ ಬಾರದು ಅದು ಬರಿ ನೆನಪು ಮಾತ್ರ. 
ಮಂಜುನಾಥ ಹೆಚ್.ಆರ್.

E – mail : manjunathahr1991@gmail.com

No comments:

Post a Comment