Monday 18 April 2016

ಕನ್ನಡದ ಮಕ್ಕಳಿಗೆ ಬೇಡವೇ ಜಂಗಲ್ ಕಥೆ.........


   ಡಬ್ಬಿಂಗ್ ವಿವಾದ ಒಂದಲ್ಲ ಒಂದು ತಿರುವು ಪಡೆದುಕೊಂಡು ಬುದಿ ಮುಚ್ಚಿದ ಕೆಂಡದಂತೆ ಆಗಿದೆ. ಪದೇ ಪದೇ ಅದು ಹೊಗೆಯಾಡುತ್ತಿದೆ ಎನ್ನುವುದಕ್ಕೆ ಇತ್ತಿಚೆಗೆ ತೆರೆ ಕಂಡ 'ದಿ ಜಂಗಲ್ ಬುಕ್' ಚಿತ್ರ ಸಾಕ್ಷಿಯಾಗುತ್ತಿದೆ. ಪ್ರಪಂಚದಾದ್ಯಂತ ಬಿಡುಗಡೆಯಾದ ಈ ಚಿತ್ರವನ್ನ ಇಂಗ್ಲಿಷ್ ಭಾಷೆಯಲ್ಲದೆ ಭಾರತದಲ್ಲಿ ನಮ್ಮ ಸೋದರ ಭಾಷೆ ತಮಿಳು, ತೆಲುಗಿನನ್ನೂ ತೆರೆ ಕಂಡು ಅಲ್ಲಿನ ಮಕ್ಕಳಿಗೆ ಇಂಗ್ಲೀಷ್ ಗೊತ್ತಿಲ್ಲದವರಿಗೆ ಅವರದೇ ಭಾಷೆಯಲ್ಲಿ ಚಿತ್ರ ತೋರಿಸಿದ್ದು ಆಯ್ತು. ಕನ್ನಡಕ್ಕೆ, ಕನ್ನಡದ ಮಕ್ಕಳಿಗೆ, ಕನ್ನಡ ಗೊತ್ತಿಲ್ಲದವರು ಪರ ಭಾಷೆಯಲ್ಲೇ ಸಿನಿಮಾ ನೋಡಬೇಕಾದ ದುಸ್ಥಿತಿ ಕನ್ನಡದ್ದು. ಇಷ್ಟೆಲ್ಲ ಮಾತನಾಡುವುದಕ್ಕೂ ಒಂದು ಕಾರಣವಿದೆ.
    ದಿ ಜಂಗಲ್ ಬುಕ್ ಚಿತ್ರದ ತಂತ್ರಜ್ಞಾನ, ನಟನೆ, 3ಡಿ ಎಫೆಕ್ಟ್ಸ್ ಬಗ್ಗೆ ತಿಳಿದುಕೊಳ್ಳುವ ಹಂಬಲದಿಂದ ತುಮಕೂರಿನಲ್ಲಿನ ಹತ್ತಿರದ ಥಿಯೇಟರ್ ಗೆ ಹೆಜ್ಜೆ ಹಾಕಿದ್ದೆವು. ನಮಗೇನು ಭಾಷೆಯ ಸಮಸ್ಯೆಯಾಗಲಿ, ಅಥವಾ ಇನ್ನಾವುದೇ ಸಮಸ್ಯ ಎದುರಾಗಲಿಲ್ಲ ಆದರೆ ನಮ್ಮ ಪಕ್ಕದ ಸೀಟ್ನಲ್ಲಿ ಕುಳಿತಿದ್ದ ಅಪ್ಪ-ಅಮ್ಮ ಒಂದು ಪುಟ್ಟ ಮಗುವಿನ ಕುಟುಂಬದ ಮಾತು ಕಥೆ ಎಲ್ಲಾ ಡಬ್ಬಿಂಗ್ ವಿವಾದಗಳನ್ನ ಕಣ್ಣ ಮುಂದೆ ತರಿಸಿಕೊಟ್ಟಿತು.
    ಅಪ್ಪ ಅಪ್ಪ ಆ ಹುಲಿ ಏನು ಹೇಳ್ತಿದೆ? ಅಪ್ಪ ಮೊಗ್ಲಿ ಏನ್ ಹೇಳ್ತಿದನೆ? ಅಪ್ಪ ಕರಡಿ ಏನು ಹೇಳ್ತು? ಇವಕ್ಕೆಲ್ಲ ಉತ್ತರವನ್ನ ಕನ್ನಡದಲ್ಲಿ ಆ ಮಗುವಿಗೆ ಅಪ್ಪ ವಿವರಿಸ್ತಾ ಇದ್ರು. ಅತ್ತಾ ನೋಡಲು ಆಗದೆ ಮಗಳಿನ ಮಾತಿಗೆ ಉತ್ತರಿಸಲಾಗದೆ ಅಪ್ಪಾ ಗೊಂದಲದಿಂದಲೇ ವಿವರಿಸ್ತಾ ಇದ್ರು. ಅವರ ಗೊಳನ್ನು ನೋಡಲಾಗದೆ ನಾವು ಆ ಮಗುವನ್ನು ಕರೆದು ತೊಡೆಯ ಮೇಲೆ ಕುರಿಸಿಕೊಂಡು ಮಗುವಿಗೆ ಕನ್ನಡದಲ್ಲಿ ಟ್ರಾನ್ಸ್ ಲೆಟ್ ಮಾಡಿದ್ವಿ.
   ಇಂತ ಪರಿಸ್ಥಿತಿ ಯಾರೊಬ್ಬರಿಗೆ ಬಂದಿದ ಸ್ಥಿತಿ ಅಲ್ಲಾ, ಇಂತಹ ಅನೇಕ ಉದಾಹರಣೆಗಳು ನಮ್ಮ ಕಣ್ಮುಂದೆಯೇ ಇವೆ. ನಮ್ಮಿಂದಾಗುವ ಸಿನಿಮಾಗಳ ಡಬ್ಬಿಂಗ್ ಮಾಡುವುದು ಬೇಡ ಕೊನೆಯ ಪಕ್ಷ ಇಂತಹ ಸಿನಿಮಾಗಳನ್ನಾದರು ಡಬ್ಬಿಂಗ್ ಮಾಡಿದರೆ. ಕನ್ನಡವೂ ಉಳಿಯುತ್ತದೆ, ಕನ್ನಡಿಗರು ಉಳಿಯುತ್ತಾರೆ, ಕನ್ನಡ ಸಿನಿಮಾಗಳಿಗೆ ಬೇಡಿಕೆಯ ಕಾಲವೂ ಬರುತ್ತೆ.
ಮಂಜುನಾಥ್ ಹೆಚ್.ಆರ್.

Email : manjunathahr1991@gmail.com

No comments:

Post a Comment