Thursday 7 April 2016

ಮಾಡದ ತಪ್ಪಿಗೆ ಶಿಕ್ಷೆಯೇ ಈ ಪ್ರೀತಿ


   ಅವಳಿಗೆ ಹದಿನಾಲ್ಕಾರ ವಯಸ್ಸು ಅವನಿಗೆ ಹದಿನಾರರ ಹುಮ್ಮಸ್ಸು ಅವರಿಬ್ಬರ ನಡುವೆ ಪ್ರೀತಿ ಎಂಬ ಸುಳಿ ಗಾಳಿ ಸುಳಿದಾಗಿತ್ತು. ಅದು ಇಡೀ ಸ್ಕೂಲಿಗೆ. ಅಲ್ಲಾ ಅಲ್ಲಾ ಸ್ಕೂಲಿನ ಎಲ್ಲಾ ವಿದ್ಯಾರ್ಥಿಗಳ ನಾಲಿಗೆಯ ತುದಿ ಮೇಲೆ ಹರಿದಾಡುತ್ತಿತ್ತು. ಹೌದು ಅದು ಹೈಸ್ಕೂಲ್ ಪ್ರೀತಿ, ಅದರಲ್ಲಿ ಕಳಂಕವಿಲ್ಲ ಮೋಸವೆಂಬುದು ಗೊತ್ತಿಲ್ಲ. ಒಬ್ಬರನ್ನೊಬ್ಬರು ಬಿಟ್ಟರಲು ಆಗದ ಸ್ಥಿತಿ.
ಹೆಚ್ಚು ದಿನ ಅವರಿಬ್ಬರ ಪ್ರೀತಿಯನ್ನು ಮುಚ್ಚಿಡಲು ಆಗಲಿಲ್ಲ ಸ್ಕೂಲಿನ ಪ್ರಿನ್ಸಿಪಾಲ್‍ನಿಂದ ಅಟೆಂಡರ್‍ವರೆಗೂ ತಿಳಿದು ಆ ಹುಡುಗಿಗೆ ಮೇಡಮ್ಮಂದೀರು ತಮಗೆ ತಿಳಿದ ಮಟ್ಟಿಗೆ ಬುದ್ಧಿವಾದ ಹೇಳಿದ್ದು ಆಗಿತ್ತು. ಈ ಹುಡುಗನಿಗೆ ಮೇಷ್ಟ್ರು ಎನ್ನುವ ವ್ಯಕ್ತಿಗಳು ದಂಡದ ಪ್ರಯೋಗವನ್ನು ಮಾಡಿದ್ದು ಮುಗಿದಿತ್ತು. ಏಕೆಂದರೆ ಅವಳು 9ನೇ ತರಗತಿ ಇವನು 10ನೇ ತರಗತಿ ಆ ಸ್ಕೂಲಿನ ಎಲ್ಲಾ ವಿಷಯದಲ್ಲೂ ಮಿನುಗುವ ಎರಡು ದೃವ ತಾರೆಗಳು.
      ಇವರ ಈ ನಡವಳಿಕೆಯನ್ನು ಅವರ ಪೋಷಕರಿಗೆ ತಿಳಿಸಿ ಇವರನ್ನು ಬೇರೆ ಮಾಡುವ ಪ್ರಯತ್ನ ಕೂಡ ನಡೆದಿತ್ತು. ಅವಳನ್ನು ಬಿಟ್ಟಿರಲಾಗದ ಇವನ ಸ್ಥಿತಿ, ಅನುಭವಿಸಿದ ಯಾತನೆ ಅವನಿಗೆ ಮಾತ್ರ ಗೊತ್ತು. ಅವನನ್ನು ಮರೆಯಲಾಗದ ಯಾವ ಲಕ್ಷಣವು ಇವಳಲಲ್ಲಿ ಕಾಣದೇ ಇದ್ದಾಗಿ ಅವಳ ತಂದೆ ತಾಯಿಗೆ ಉಳಿದದ್ದು ಒಂದೇ ದಾರಿ ಅವಳ ಮದುವೆ. ಹಾದಿನಾರರ ಆ ಹುಡುಗಿಗೆ ವರ ನೋಡಿ ಮದುವೆ ನಿಶ್ಚಯ ತಯಾರಿ.
    ಮದುವೆಗೂ ಮುನ್ನ ಅವನ ಜೊತೆ ಒಮ್ಮೆ ಮಾತನಾಡಬೇಕೆಂದು ಸ್ಕೂಲಿನ ಬಳಿ ಓಡೋಡಿ ಬರುತ್ತಾಳೆ. ಅವನು ಸ್ಕೂಲಿನಿಂದ ಆಚೆ ಬರುವವರೆಗೂ ಅವನಿಗಾಗಿ ಕಾಯುತ್ತ ಆಚೆಗಿದ್ದ ಆಲದ ಮರದ ಬಳಿ ನಿಲ್ಲುತ್ತಾಳೆ. ಅವನ ಕಂಡೊಡನೆ ಅವಳಿಗಾದ ಆನಂದಕ್ಕೆ ಇವನಿಗಾದ ಆಶ್ಚರ್ಯಕ್ಕೆ ಪಾರವೇ ಇರಲಿಲ್ಲ. ಅವಳ ಮದುವೆಯ ವಿಚಾರವನ್ನು ಬಗೆ ಬಗೆಯಾಗಿ ಹೇಳಿ ಮನೆಬಿಟ್ಟು ಹೋಗುವ ನಿರ್ಧಾವನ್ನು ವ್ಯಕ್ತಪಡಿಸುತ್ತಾಳೆ. ಅದಕ್ಕೆ ನಾನು ಇನ್ನೂ ಓದ ಬೇಕು, ನಿನ್ನ ಚೆನ್ನಾಗಿ ನೋಡಿಕೊಳ್ಳಬೇಕು ಅಂದ್ರೆ ದುಡ್ಡು ಬೇಕಲ್ಲವ ಅದು ಅಲ್ಲದೆ ನಾವಿನ್ನು ಮೈನರ್ ಎಂದು ಅವಳನ್ನು ಸಮಾಧಾನಿಸುತ್ತಾನೆ. ಅದಕ್ಕೆ ತೃಪ್ತಳಾದ ಅವಳು ಮರು ಮಾತನಾಡದೆ ಅಲ್ಲಿಂದ ಓಡಿ ಬರುತ್ತಾಳೆ. ನೋಡು ನೋಡುತ್ತಿದ್ದಂತೆ ಅವಳ ಮದುವೆ ನಡೆದು ಹೋಗುತ್ತದೆ. ಯಾವುದೇ ಪ್ರತಿರೋಧವನ್ನು ತೋರಲಾಗದ ಪರಿಸ್ಥಿತಿ ಅವನದು.
    ಅದೇ ನೆನಪಿನಲ್ಲಿ ಅವನು ಮಾನಸಿಕವಾಗಿ ಕುಂದು ಹೋಗುತ್ತಾನೆ. ಇವನ ವೇದನೆಯನ್ನು ನೋಡಲಾದ ಇವನ ಅಪ್ಪ ಅಮ್ಮ ಇವನ್ನು ಆರ್ಮಿಗೆ ಹೋಗುವಂತೆ ಪ್ರೆರೇಪಿಸುತ್ತಾರೆ. ಅವರ ಆಸೆಯಂತೆ ಒಂದು ಪ್ರಯತ್ನವನ್ನು ಮಾಡಲಾಗಿ ಅವನ ಅದೃಷ್ಟವೆಂಬಂತೆ ಆಯ್ಕೆಯಾಗುತ್ತಾನೆ. ಮುಂದೆ ಓದದೆ ಎಲ್ಲವನ್ನು ಬಿಟ್ಟು ದೂರದ ಊರಿಗೆ ದೇಶ ಸೇವೆ ಮಾಡಲು ಹೊರಡುತ್ತಾನೆ.
   ಹತ್ತು ವರ್ಷಗಳ ನಂತರ ಅವನು ತನ್ನೂರಿಗೆ ಬಂದಾಗ ಆಕಸ್ಮಕವಾಗಿ ಅವಳನ್ನು ಕಾಣುತ್ತಾನೆ. ಅವಳ ಮುಖವು ಬಾಡಿಹೋಗಿ, ಹತಾಶೆಯಿಂದ ತುಂಬಿದ ನಿರಾಶೆಯ ಭಾವ ಹೊತ್ತ ಕರುಣಾಜನಕ ಸ್ಥಿತಿ ಅವಳದು ಕೈಯಲ್ಲೊಂದು ಮಗು, ಆ ಮಗುವಿನ ಸ್ಥಿತಿಯೇನು ಅವಳಿಗಿಂದ ಭಿನ್ನವಾಗಿಲ್ಲ. ಅವಳ ಕಣ್ಣಿನಿಂದ ಜಾರುತ್ತಿದದ್ದ ಹನಿಗಳೇ ಎಲ್ಲವನ್ನು ವಿವರಿಸುವಂತಿದ್ದವು. ಅವಳೇನು ಮಾತನಾಡದೆ ಮೂಕಳಾದವಳಂತೆ ಅವನನ್ನು ದಾಟಿ ಹೋದಳು.
   


ನಂತರ ತಿಳಿಯುತ್ತದೆ. ಅವನ ಗಂಡ ಕ್ಯಾಬ್ ಡ್ರೈವರ್, ಅವಳ ಪ್ರೀತಿಯ ಬಗ್ಗೆ ತಿಳಿದು ಪ್ರತಿ ಕ್ಷಣವು ಅವಳಿಗೆ ಚುಚ್ಚಿ ಮಾತನಾಡುತ್ತಿದ್ದನೆ. ಅವರಿಬ್ಬರ ನಡುವಿನ ಸಂಬಂಧ ಚೆನ್ನಾಗಿಲ್ಲ ಎಂದು. ಇದನ್ನು ತಿಳಿದ ಅವನು ಜರ್ಜರಿತನಾಗುತ್ತಾನೆ. ಮುಂದೆ ಏನು ಮಾಡಬೇಕೆಂದು ತಿಳಿಯದೆ ಕಳೆದು ಹೊದ ದಿನಗಳನ್ನು ನೆನೆಯುತ್ತಾ, ಅನು ಕ್ಷಣವು ಮಾಡದ ತಪ್ಪಿಗೆ ಶಿಕ್ಷೆಯನ್ನು ಅನುಭವಿಸುತ್ತಾ. ವಿಧಿಯ ಆಟಕ್ಕೆ ಶಪಿಸುತ್ತಾನೆ.
ಮಂಜುನಾಥ ಹೆಚ್.ಆರ್.
 email : manjunathahr1991@gmail.com


  

No comments:

Post a Comment