Thursday 7 April 2016

ಸುಳ್ಳೇ ಸತ್ಯ


     ಗಣೇಶ್ ಮುಂಜಾನೆ ಎದ್ದವನೇ, ಲೋ ಗಿರಿ ನೀನು ಮಾತಾಡೊಹಾಗಿದ್ರೆ ಆಚೆ ಹೋಗು ನನ್ನ ನಿದ್ರೆ ಹಾಳ್ಮಡ್ಬೇಡ ಹೋಗೋ ಆಚೆ ಎಂದು ರೇಗಿದನು. ಇವನ ಟಾರ್ಚರ್ ತಡೆಯೋಕೆ ಆಗದೆ ಗಣೇಶ್ ರೂಮಿನಿಂದ ಆಚೆ ಬಂದು ಮಾತನಾಡುತ್ತಿದ್ದನು. ಶಶಿ ರೂಮಿಗೆ ಬಂದು ಯಾಕೊ ಆಚೆ ಬಂದಿದ್ದಿಯಾ ಒಳಗೆ ಮಾತಾಡೋಕೆ ಆಗಲ್ವಾ? ಅಲ್ಲಿ ಗಿರಿ ಕಾಟ ಮಗಾ ನೆಮ್ಮದಿಯಾಗಿ ಮಾತಾಡೋಕು ಆಗಲ್ಲ ಎಂದು ಹೇಳಿ ಫೋನಿನಲ್ಲಿ ಮಾತು ಆರಂಭಿಸಿದನು.
   ಶಶಿ ಒಳಗೆ ಬಂದವನೆ ಯಾಕೊ ಬೆಳ-ಬೆಳಗ್ಗೆ ಅವನ ಮೇಲೆ ಕೂಗಾಡ್ತಿದಿಯಾ? ಇವನ್ದೇನು ಹೊಸದ ಬೆಳಗಾದ್ರೆ ಸಾಕು ಬೇಜಾನ್ ಕುಯ್ತಿರ್‍ತಾನೆ ಕೆಲಸಕ್ಕ ಬಾರದ ಮಾತಾಡ್ಕೊಂಡು. ಅದ್ ಯಾರ್ ಮಾತಾಡ್ತರೊ ಬೆಳ-ಬೆಳಗ್ಗೆ? ಇನ್ ಯಾರ್ ಮಾಡ್ತರೋ ಹುಡ್ಗೀರ್ ನಂಬರ್ ಕಲೆಕ್ಟ್ ಮಾಡ್ಕೊಂಡ್ ಬರ್ತನೆ ಬೇಜಾನ್ ಕುಯ್ತನೆ, ರಾತ್ರಿಯೆಲ್ಲ ನಿದ್ರೆ ಕೊಡಲ್ಲ. ಈ ಹುಡ್ಗೀರ್‍ಗೆ ಮಾಡೋಕೆ ಬೇರೆ ಕೆಲಸ ಇಲ್ವಾ? ಅವರೆಲ್ಲ ಅದೇ ರೂಟಲ್ಲಿ ಇರೋರು ಕಣೋ ಅವರ್ಗು ಮಾತಾಡೋಕೆ ಒಬ್ಬ ಬೇಕು ಮಾತಾಡ್ತರೆ.
   ಇವನೇನು ಸಾಮಾನ್ಯ ಅಂದ್ಕೂಡಿದ್ದಿಯಾ ಭಲೇ ಚಾಣಾಕ್ಷ, ಕಳ್ಳನ್ನ ನಂಬಿದ್ರು ಕುಳ್ಳನ್ನ ನಂಬಾರ್ದು ಅಂತಾರಲ್ಲ ಹಾಗೆ, ಸುಳ್ಳು ಹೇಳ್ತಾನೆ ಅಂದ್ರೆ! ಚಂದ್ರನ್ನ ತಂದು ಕೊಡ್ತಾನೆ, ಮಾತಲ್ಲೆ ಮನೆ ಕಟ್ತೆನೆ. ಈ ಹುಡ್ಗೀರು ಹೇಗೆ ನಂಬತ್ತರೆ ಇವನ್ನ ಮಾತನ್ನ?
    ಇಲ್ಲಿ ಕೇಳು ಒಂದಿನ ಬೆಳಗ್ಗೆ 5 ಗಂಟೆಗೆ ಒಂದು ಹುಡುಗಿ ಕಾಲ್ ಮಾಡಿ ಎಲ್ಲಿದಿಯಾ ಗಣಿ ಎಂದಳು. ಇಲ್ಲೆ ಮನೇಲಿ ಮಲಗಿದ್ದಿನಿ ಎಂದನು. ಸರಿ 6 ಗಂಟೆಗೆ ಹೊರಡು ಮೈಸೂರಿಗೆ ಹೋಗ್ಬರೋಣ ಎಂದಳು. ಸರಿ ಕಾರ್ ಬೇರೆ ಇಲ್ಲ ಅಷ್ಟು ದೂರ ಬೈಕಲ್ಲಿ ಹೋಗ್ಬರೋಕೆ ಆಗಲ್ಲ ಎಂದು ಕಥೆ ಹೇಳಿದ. ಸರಿ ನಾನ್ ಕಾರ್ ತರ್ತಿನಿ ಬೇಗ ಯುನಿವರ್ಸಿಟಿ ಹತ್ರ ಬಾ ಎಂದಳು. ಸರಿ ಎಂದು ಫೊನ್ ಕಟ್ ಮಾಡಿ ಇನ್ನೊಬ್ಬಳಿಗೆ ಫೋನ್ ಮಾಡಿ ನನ್ ಫ್ರಂಡ್‍ಗೆ ಆಕ್ಸಿಡೆಂಟ್ ಆಗಿದೆಕಣೆ  ದುಡ್ ಬೇಕು ಎಂದು ಹೇಳಿದನು ಸರಿ ಹಾಸ್ಟಲ್ ಹತ್ರ ಬಾ ಕೊಡ್ತಿನಿ ಎಂದಳು. ಇನ್ನೊಬ್ಬಳಿಗೆ ಮಿಸ್ಡ್ ಕಾಲ್ ಮಾಡ್ದ ಅವಳು ಕಾಲ್ ಮಾಡಿದ್ಲು ನಿನ್ನತ್ರ ಮಾತಾಡ್ಬೇಕು ಬ್ಯಾಲೆನ್ಸ್ ಕಾಲಿಯಾಗದೆ ಬೇಗ ಹಾಕ್ಸು ಎಂದನು ಸರಿ ಕಣೋ ಆಮೇಲ್ ಹಾಕಿಸ್ತಿನಿ ಎಂದಳು.
  ಇವನದೇನೊ ಒಂದ-ಎರಡ ದಿನಾ ಇದ್ದದ್ದೇ ಕಾಗೆ ಹಾರಿಸ್ತನೆ ಇರ್ತನೆ. ಇವನು ಹಾಕೊಳ್ಳೂ ಚಪ್ಪಲಿಯಿಂದ ತಲೆ ಬಾಚೊ ಬಾಚಣಿಗೆವರೆಗೂ ಎಲ್ಲಾ ಹುಡ್ಗೀರು ತೆಕ್ಕೊಟ್ಟಿರೊದು. ಹೇಗೂ ಇದೆಲ್ಲಾ? ಸುಳ್ಳು ಮಗಾ ಸುಳ್ಳು ನೋಡೋಕೆ ಸ್ವಲ್ಪ ಚೆನ್ನಾಗಿದನೆ ಅದನ್ನ ಈ ರೀತಿ ಎನ್ಕ್ಯಾಷ್ ಮಾಡ್ಕೊತಿದನೆ. ಸುಳ್ಳನ್ನೆ ನಿಜ ಅಂತ ನಂಬುತ್ತಿದ್ದಾರೆ. ಇವರಿಗೆ ಯಾವಾಗ ಬುದ್ಧಿ ಬರುತ್ತೊ?
ಮಂಜುನಾಥ ಹೆಚ್.ಆರ್
email : manjunathahr1991@gmail.com

No comments:

Post a Comment