Tuesday 15 March 2016

ಒಂತರ ಹುಚ್ಚ್‍ಹುಡುಗ್ರು ಸಾರ್......


ಒಂತರ ಹುಚ್ಚ್‍ಹುಡುಗ್ರು ಸಾರ್

   ಆರಂಭದಿಂದ ಹೀಗಿರಲಿಲ್ಲ ಅದೇನೊ ಡಿಗ್ರಿ ಫೈನಲ್ ಇಯರ್ ಬಂದ ಮೇಲೆ ಒಂದು ತರ ಧಿಮಾಕು ಬಂದು ಬಿಟ್ಟಿತ್ತು. ಯಾರು ಹೇಳಿದ ಮಾತನ್ನು ಕೇಳುವ ಮನಸ್ಥಿತಿ ಇರಲಿಲ್ಲ. ಇಡೀ ಕಾಲೇಜೆ ನಮ್ಮ ಕೈ ಕೆಳಗೆ ಇರಬೇಕೆಂಬುದೇ ನಮ್ಮ ಕಟ್ಟ ಕಡೆಯ ಆಸೆಯಾಗಿತ್ತು. ಕಾಲೇಜಿಗೆ ತಡವಾಗಿ ಹೋಗುವುದು ನಮಗೇನು ಹೊಸದಾಗಿರಲಿಲ್ಲ ಅದೊಂದು ನಿತ್ಯದ ಪರಿಪಾಠಲಾಗಿತ್ತು.
    ಅಂದು ನಮ್ಮ ಕಾಲೇಜಿನ ಇತಿಹಾಸ ತಜ್ಞ, ಹಿಸ್ಟರಿ ಭೀಷ್ಮ, ಮಿಸ್ಟರಿ ಉಪನ್ಯಾಸಕರೊಬ್ಬರು ಕ್ಲಾಸ್ ತಗೊಂಡಿದ್ದರು. ನಾವು ಐದು ಜನ ಪಂಚ ಪಾಂಡವರು ಮಾಮೂಲಿಯಂತೆ ತಡವಾಗಿ ಅವರ ಕ್ಲಾಸಿಗೆ ಎಂಟ್ರಿ ಕೊಟ್ಟೆವು. ಅವರು ನಮ್ಮ ಮುಖವನ್ನೊಮ್ಮೆ ನೋಡುತ್ತಾ ಮರು ಮಾತನಾಡದೆ ಕಣ್ಸ್‍ಸನ್ನೆಯಲ್ಲೆ ಒಳಗೆ ಕರೆದರು.
       ನಾವೇ ರಿಸರ್ವವೇಷನ್ ಮಾಡಿದ ಸೀಟಿನಂತೆ ಕೊನೆಯ ಬೇಂಚ್ ಖಾಲಿ ಇತ್ತು. ಅಲ್ಲಿ ಯಾರು ಕುಳಿತುಕೊಳ್ಳುತ್ತಿರಲಿಲ್ಲ. ನಾವು ಪಾಠದ ಮಧ್ಯೆ ಹೋಗಿದ್ದರಿಂದ ತಲೆ ಬುಡ ಏನು ಅರ್ಥ ಆಗುತ್ತಿರಲಿಲ್ಲ. ಮುಂದೆ ಕುಳಿತವರು ಮಾತ್ರ ಬಿಟ್ಟ ಕಣ್ಣು ಬಿಟ್ಟಂತೆ ಆ ವ್ಯಕ್ತಿಯ ನೋಡುತ್ತಿದ್ದರು. 
ಅದೇನೊ ರಾಜಕೀಯ ಪಕ್ಷದ ಬಗ್ಗೆ ಮಾತನಾಡುತ್ತಿರುವಂತೆ ಅಲ್ಪ ಸುಳಿವು ಸಿಕ್ಕಿತು ನಮ್ಮ ಗೆಳೆಯ ದಿಢೀರನೆ ಎದ್ದು ಕೈ ಮೇಲೆ ಮಾಡಿ ಸಾರ್ ನನಗೊಂದು ಅನುಮಾನ? ತಲೆ ಮೇಲೆತ್ತಿ ಪಾಠ ಮಾಡುತ್ತಿದ್ದ ಅವರು ಇವನನೊಮ್ಮೆ ನೋಡಿ ಏರು ಧ್ವನಿಯಲ್ಲಿ ಏನು? ಎಂದು ಕೇಳಿದರು. ಎನ್.ಟಿ.ಆರ್ ಕಟ್ಟಿದ ಪಕ್ಷ ಯಾವುದು ಸಾರ್?, ಇವನ ಮುಖವನ್ನು ದುರುಗುಟ್ಟುಕೊಂಡು ನೋಡುತ್ತಾ ನೀನು ಕ್ಲಾಸಿಗೆ ಸರಿಯಾಗಿ ಬರೊದಿಲ್ಲ ಪ್ರಶ್ನೆ ಬೇರೆ ಕೇಳ್ತಿಯ ? ಸುಮ್ನೆ ಕುತ್ತುಕೊಳೊ ಎಂದು ಬೈದು ಮುಗಿಸುವ ಮುನ್ನವೇ ನಮ್ಮ ಹುಚ್ಚ್‍ಹುಡುಗ್ರು ಸಂಘದ ತರಲೆ ಮಂಜು ಎದ್ದು ಲೋ ಅವರಿಗೆ ಉತ್ತರ ಗೊತ್ತಿಲ್ಲದ ಪ್ರಶ್ನೆ ಎಲ್ಲಾ ಕೇಳ್ತಿಯಲ್ಲೊ ಸುಮ್ನೆ ಕುತ್ತುಕೊಳೊ. ಎಂದು ಹಾಸ್ಯ ಚಟಾಕಿ ಹಾರಿಸಿದನು. 
      ಅವನು ಹೇಳಿದ ಮಾತಿಗೆ ಇಡೀ ತರಗತಿ ನಗೆಗಡಲಲ್ಲಿ ಮುಳುಗಿತು. ನಮ್ಮ ಹಿಸ್ಟರಿ-ಮಿಸ್ಟರಿಗೆ ಅವಮಾನವಾಗಿ ನಮ್ಮನ್ನು ಬಿರು ನುಡಿಗಳಿಂದ ಬೈದು ಆಚೆ ಹೊರಟು ಹೋದರು. ನಮ್ಮ ಉದ್ದೇಶ ಅವರನ್ನು ಅವಮಾನಿಸುವುದಾಗಿರಲಿಲ್ಲ ಕ್ಲಾಸಿನಲ್ಲಿ ಪಾಠವನ್ನು ಮಾಡದೆ ಕೆಲಸಕ್ಕೆ ಬಾರದ ವಿಷಯವನ್ನು ಒದರುತ್ತಿದ್ದರು. ಪ್ರತಿದಿನ ಇದನ್ನು ನೋಡಿದ ವಿಧ್ಯಾರ್ಥಿಗಳು ಅವರ ಕ್ಲಾಸಿಗೆ ಬರುವುದನ್ನೇ ಬಿಟ್ಟಿದ್ದರು. ಇದನ್ನು ನೋಡಲಾಗದೆ ಅವರ ಸ್ವಾಭಿಮಾನವನ್ನು ಕೆಣಕ ಬೇಕಾಯಿತು.
ಮಂಜುನಾಥ ಹೆಚ್.ಆರ್.
   email : manjunathahr1991@gmail.com     

No comments:

Post a Comment