Sunday 27 March 2016

ಕೋಪಕ್ಕೊಂದು ಕಾರಣ


   “ನಿಮ್ಮ ಕೆಲಸ ಎಸ್ಟಿದೆ ಅಷ್ಟು ನೋಡಿಕೊಳ್ಳಿ, ನನ್ನ ವಿಷಯಕ್ಕೆ ತಲೆ ಹಾಕಬೇಡಿ. ನನಗೆ ಗೊತ್ತಿದೆ ನಾನು ಏನು ಮಾಡಬೇಕೆಂದು” ಹೇಳಿ ಕ್ಲಾಸಿನಿಂದ ಹೊರ ಬಂದು ಕ್ಯಾಂಟಿನಿನಲ್ಲಿ ಕಾಫಿ ಕುಡಿಯುತ್ತಾ ಕುಳಿತಿದ್ದೆ ಒಬ್ಬನೆ.
    ಕಾರಣ ಇಷ್ಟೆ, ತೋಟದಲ್ಲಿ ಕೆಲಸ ಜಾಸ್ತಿ ಇದ್ದುದರಿಂದ ಕಾಲೇಜಿಗೆ ಒಂದೆರಡು ದಿನ ಹೋಗಲು ಸಾಧ್ಯವಾಗಿರಲಿಲ್ಲ. ಮರುದಿನ ಕ್ಲಾಸಿಗೆ ಹೋದೆ ನನ್ನ ಕರ್ಮಕ್ಕೆ ಮೊದಲ ಪೀರ್ಡ್ ಹೆಚ್.ಓ.ಡಿ ‘ಶಂಕರಪ್ಪ’ನವರದ್ದು. ಹೇಳಿ ಕೇಳಿ ಅವರು ತುಂಬಾ ಸ್ಟ್ರಿಟ್, ನಗ್ತ ನಗ್ತ ಚೆನ್ನಗಿಯೇ ಹುಗಿಯುತ್ತಾರೆ. ಎಲ್ಲರಿಗೂ ಆಗುವ ಮರ್ಯಾದೆ ನನಗೂ ಕೂಡ ಆಯ್ತು. ನನ್ನನ್ನು ನೋಡಿ ಇಡೀ ಕ್ಲಾಸ್ ತಲೆ ಬಗ್ಗಿಸಿಕೊಂಡು ನಗುತ್ತಿತ್ತು. ಅದನ್ನು ನೋಡಲಾಗದೆ ನೇರವಾಗಿ ಶಂಕರಪ್ಪ ಸರ್‍ನ ನೋಡುತ್ತಾ, ರೀ ಸ್ವಾಮಿ! ನೀವು ಕ್ಲಾಸಿಗೆ ಬಂದು ಪಾಠ ಮಾಡಿ ಹೋದ್ರೆ ಸಾಕು ನಮ್ಮ ಬಗ್ಗೆ ತಲೆ ಕೆಡಿಸಿಕೊಳ್ಳೊ ಅವಶ್ಯಕತೆ ಇಲ್ಲ ಎಂದು ಇನ್ನೊಂದೆರಡು ಸೇರಿಸಿ ರೇಗಿದೆ. 
      ಅವರಿಂದ ಬಂದ ಉತ್ತರ ಗೆಟ್ ಔಟ್ ಮೈ ಕ್ಲಾಸ್ ರೂಂ ಎಂಬುದಾಗಿತ್ತು. ಬಿಡ್ರಿ ಇಲ್ಲೆ ಏನು ಗೂಟ ಹೊಡಕೊಂಡು ಇರಲ್ಲ ಎಂದು ಹೇಳಿ ಆಚೆ ಬಂದಿದ್ದೆ. ಕ್ಯಾಂಟಿನ್ ಪರಿಸರದಲ್ಲಿ ಅಮ್ಮನ ನೆನಪಾಯಿತು ಅವರು ಹೇಲಿದ್ದು ಲೋ ಕಾಲೇಜಿನಲ್ಲಿ ಯಾರತ್ರನು ಜಗಳ ಆಡಬೇಡ, ನೀನ್ ಓದದಿದ್ದರು ಪರವಾಗಿಲ್ಲ ನಮಗೆ ಕೆಟ್ಟ ಹೆಸರು ಮಾತ್ರ ತರಬೇಡ, ವಿದ್ಯೆ ಕೊಟ್ಟ ಗುರುಗಳು ದೇವರಿಗೆ ಸಮಾನ ಅವರಿಗೆ ಗೌರವ ಕೊಡು ಎಂದು ಸಾರಿ ಸಾರಿ ಹೇಳಿದ್ದು ಕಿವಿಯಲ್ಲಿ ಹಾಗೆ ಬಂದು ಹೋಗಿತ್ತು. 
    ಒಲ್ಲದ ಮನಸ್ಸಿನಿಂದ ಕಾಫಿ ಕುಡಿದು ಮುಗಿಸಿ ಶಂಕರ್ ಸರ್ ಹತ್ರ ಸಾರಿ ಕೇಳಲು ಹೊರಟೆ ಕಣ್ಣು ಕೆಂಪಾಗಿತ್ತು, ಶರ್ಟ್ ಎರಡು ತೋಳುಗಳನ್ನು ಮಡಚುತ್ತಾ ಬಲವಾದ ಹೆಜ್ಜೆ ಇಡುತ್ತ ಬಿರು ನಡಿಗೆಯಲ್ಲಿ ಅವರ ಎದುರಿಗೆ ಹೋಗುತ್ತಿದ್ದೆ. ನನ್ನನ್ನು ಹೊಡೆಯಲಿಕ್ಕೆ ಬಂದವನಂತೆ ಅವರಿಗೆ ಅನ್ನಿಸಿರಬೇಕು. ನನ್ನ ಮುಖವನ್ನು ನೋಡದೆ ಮುಂದೆ ನಡೆದರು. ಮತ್ತೆ ನಾನೇ ಹಿಂದೆ ಹೋಗಿ ಎದುರು ನಿಂತು ಕೈ ಕಟ್ಟಿಕೊಂಡು ಸಾರಿ ಸರ್ ಎಂದೆ. 
    ಅವರಿಂದ ಯಾವುದೇ ಉತ್ತರ ಬರಲಿಲ್ಲ ಸಾರಿ ಸಾರ್ ತಪ್ಪಾಯ್ತು ಎಂದೆ. ಮುಖ ನೋಡಿ ನಗುತ್ತಾ ನನಗೆ ಗೊತ್ತು ಕಣೋ ನೀನು ಹೇಗೆ ಅಂತಾ ನೆನ್ನೆ ಮೊನ್ನೆ ನಿನ್ನನ್ನು ನೋಡುತ್ತಿಲ್ಲ. ನೀನಾದ್ರೆ ಕೋಪ ಎಷ್ಟು ಬೇಗ ಬರುತ್ತೇ ಅಷ್ಟು ಬೇಗ ಸರಿ ಹೊಗ್ತೀಯ. ಆದರೆ ನಿನ್ನ ಫ್ರೆಂಡ್ಸ್? ನಾನ್ ಕೇರ್ ಮಾಡದಿದ್ದರೆ ಹಾಳಾಗ್ತಾರೆ. ಅದಕ್ಕೆ ನಿನ್ನ ಆಚೆ ಕಳ್ಸಿದೆ ಬೇಜಾರು ಮಾಡ್ಕೊಬೇಡ ಎಂದು ಹೇಳಿ ನನ್ನನ್ನು ನಗಿಸುತ್ತಾ ಅವರು ನಗುತ್ತಾ ಮುಂದೆ ಹೋದರು.
ಅವರನ್ನು ನೋಡುತ್ತಾ ಒಳಗೊಳಗೆ ನಗುತ್ತಾ ಅದಕ್ಕೆ ಗುರುಗಳೇ ನಿಮ್ಮನ್ನು ಆಚಾರ್ಯ ದೇವೋಭವ ಎಂದು ಕರೆಯೋದು ಎಂದು ಕ್ಲಾಸಿನ ಕಡೆ ಹೊರಟೆ.
                                                                                                       
    ಮಂಜುನಾಥ ಹೆಚ್.ಆರ್.

email : manjunathahr1991@gmail.com

No comments:

Post a Comment