Monday 28 March 2016

ದತ್ತಾಂಶ ಸಂಗ್ರಹಣೆ ಕನ್ನಡದಲ್ಲಿ ಆಗಲಿ


     ಇದು ತಂತ್ರ ಜ್ಣಾನ ಜಗತ್ತು ಯಾವುದೇ ಮಾಹಿತಿ, ವಿಚಾರವನ್ನು ತಂತ್ರಜ್ಞಾನದ ಮೂಲಕ ಕ್ಷಣಾರ್ಧದಲ್ಲಿ ಪಡೆದುಕೊಳ್ಳಬಹುದು. ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರು ಇದು ದೊರೆಯುವುದಂತೂ ಖಚಿತ ಇದರಿಂದಾಗಿಯೇ ಇಡೀ ವಿಶ್ವವೇ ಒಂದು ಪುಟ್ಟ ಗ್ರಾಮವಾಗಿದೆ.
     ಒಂದು ದುರಾದೃಷ್ಟಕರ ಸಂಗತಿಯೆಂದರೆ ಎಲ್ಲಾ ಮಾಹಿತಿಗಳು ಪ್ರಾದೇಶಿಕ ಭಾಷೆಗಳಲ್ಲಿ ದೊರೆಯದೆ ಇರುವಂತಹದು. ಇದರಲ್ಲಿ ಕನ್ನಡವೇನು ಹೊರತಾಗಿಲ್ಲ ಇಂಟರ್‍ನೆಟ್ ಸೌಲಭ್ಯದಿಂದ ಮಾಹಿತಿಯನ್ನು ಹುಡುಕಲು ಹೊರಟರೆ ಪ್ರಮುಖವಾಗಿ ಕಣ್ಣಿಗೆ ರಾಚುವುದು ಆಂಗ್ಲ ಭಾಷೆ ಉಳಿದಂತೆ ಬೇರೆ ಬೇರೆ ಭಾಷೆಗಳು ಕಾಣ ಸಿಗುತ್ತವೆ.
    ಭಾರತೀಯ ಭಾಷೆಗಳಾದ ಹಿಂದಿ, ಬೆಂಗಾಳಿ, ತಮಿಳು ಭಾಷೆಗಳಲ್ಲಿ ಹೆಚ್ಚು ಮಾಹಿತಿ ಇರುವುದನ್ನು ಕಾಣುತ್ತೇವೆ ಆದರೆ ಕನ್ನಡ ಭಾಷೆಯಲ್ಲಿ ಸಾಕಷ್ಟು ಮಾಹಿತಿ ಲಭ್ಯವಿಲ್ಲದಿರುವುದು. ಎಷ್ಟೂ ಕನ್ನಡಾಸಕ್ತರು ಪರಿತಪಿಸುವಂತಾಗಿದೆ. ಇವರಲ್ಲಿ ದೊಡ್ಡ ವಿದ್ಯಾರ್ಥಿ ಸಮೂಹವೇ ಇದೆ. ವಿಜ್ಞಾನ-ತಂತ್ರ ಜ್ಞಾನ, ಇತಿಹಾಸ, ಪಾಶ್ಚಿಮಾತ್ಯ ಸಾಹಿತ್ಯ ಸಂಸ್ಕøತಿ, ಗಣೀತ ಶಾಸ್ತ್ರ ಮೊದಲಾದ ವಿಷಯಗಳು ಸುಲಭವಾಗಿ ಕನ್ನಡದಲ್ಲಿ ಸಿಗುವಂತಿದ್ದರೆ ಎಷ್ಟೂ ಜನರಿಗೆ ಅವಶ್ಯಕವೆನಿಸುತ್ತಿತ್ತು.
  ಕನ್ನಡ ನಾಡು-ನುಡಿಯ ಬಗ್ಗೆ ಹೆಚ್ಚು ಮಾತನಾಡುವ ಕನ್ನಡ ಪರ ಸಂಘಟನೆಯಾಗಲಿ ಸಂಬಂಧಪಟ್ಟ ಇಲಾಖೆಯಾಗಲಿ ಇದರ ಗೊಡವೆಗೆ ಹೋದಂತೆ ಕಾಣುತ್ತಿಲ್ಲ. ಒಂದು ಭಾಷೆಯ ಪ್ರಗತಿಯಾಗುವುದು ಅದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವುದರಿಂದ. ಕರ್ನಾಟಕದಲ್ಲಿ ಕನ್ನಡ ಕಣ್ಮರೆಯಾಗುತ್ತಿರುವುದಕ್ಕೆ ಇದು ಒಂದು ಕಾರಣ ವಾಗಿರಬೇಕಲ್ಲವೇ. ಇದರ ಬಗ್ಗೆ ಸಂಬಂಧ ಪಟ್ಟವರು ಗಮನ ಹರಿಸಿ ಆದಷ್ಟು ಬೇಗನೆ ಅಂತರ್ ಜಾಲದಲ್ಲಿ ಕನ್ನಡದ ಮುಖಾಂತರ ಮಾಹಿತಿ ಲಭ್ಯವಾದರೆ ಒಳಿತು.
   
    ಇದರ ಕೆಲಸ ಕೇವಲ ಸಂಘಟನೆ, ಸಂಸ್ಥೆ, ಇಲಾಖೆಗಳಲ್ಲದೆ ಸಾಮಾನ್ಯ ಕನ್ನಡಿಗರು ಕೈಜೋಡಿಸಬೇಕಾಗಿದೆ. ತಮಗೆ ತಿಳಿದಿರುವ ಕನ್ನಡದ ಮಾಹಿತಿಯನ್ನು ಅಂತರ್ ಜಾಲದಲ್ಲಿ ಸೇರಿಸಿ ಕನ್ನಡವನ್ನು ಬೆಳೆಸಬೇಕಾಗಿದೆ. ಇತ್ತೀಚೆಗೆ ಕರ್ನಾಟಕದ ಗಡಿ ಪ್ರದೇಶದಲ್ಲಿ ಕನ್ನಡ ಕಲಿಯುವ ಮಕ್ಕಳ ಸಂಖ್ಯೆಯು ಹೆಚ್ಚಾಗುತ್ತಿದೆ. ಇದು ಹೆಚ್ಚಾಗ ಬೇಕಾದರೆ ಮಾಹಿತಿಯ ಪ್ರಸಾರ ಅತ್ಯವಶ್ಯಕ.


                 ಮಂಜುನಾಥ ಹೆಚ್.ಆರ್.
email : manjunathahr1991@gmail.com


No comments:

Post a Comment