Friday 18 March 2016

ಹಳೇ ಹುಲಿ ಲವ್ ಕಥೆ.......

70ರ ವ್ಯೆಥೆ 20ರ ಕಥೆ

   ಕಾಲದ ತಪ್ಪೋ ಅಥವಾ ಅದರ ಕೈ ಕೆಳಗೆ ಸಿಕ್ಕ ಎರಡು ಜೀವಗಳ ತಪ್ಪೋ ತಿಳಿಯದು. ಆಕಸ್ಮಿಕವಾಗಿ ಒಂದುಗೂಡಿ ಅನಿರೀಕ್ಷಿತವಾಗಿ ಬೇರೆಯಾಗಿ ಇಂದಿಗೂ ಜೊತೆಗೆ ಬಂದರೆ ಇರುವಷ್ಟು ದಿನವಾದರೂ ಅವಳ ಜೊತೆ ಕಳೆಯ ಬೇಕು ಎಂದು ಬಯಸುವ ಜೀವವೊಂದು ಅವಳನ್ನೆ ಹುಡುಕುತ್ತಿದೆ.
  ಫೆಬ್ರವರಿ 14 ರಂದು ಕಾಲೇಜಿಗೆ ಹೋಗದೆ ನಮ್ಮ ಹಳ್ಳಿಯಲ್ಲೇ ಸುರಸುಂದರಾಂಗಿ ಸಿಗಬಹುದೆಂದು ಅಲೆಯುತ್ತಿದ್ದೆ. ಅರಳೀಕಟ್ಟೆಯ ಮರವನ್ನು ಒರಗಿಕೊಂಡು ಹಿರಿ ತಲೆಯೊಂದು ಕುಳಿತ್ತಿತ್ತು. ಸಾಕಷ್ಟು ಪರಿಚಯವಿದ್ದುದ್ದರಿಂದ ಹತ್ತಿರ ಹೋಗಿ ಎನ್ ‘ಕೌಟು’ (ಮುದುಕ) ಹಿಂಗೇ ಕುತಿದಿಯ ಎಂದು ಚೇಡಿಸುವ ಧ್ವನಿಯಲ್ಲಿ ಹೇಳಿದೆ. ಅದಕ್ಕೆ ಬಂದ ಉತ್ತರ ಎನ್ ‘ಎಳೆ ನಿಂಬೆ ಕಾಯ್’ ಎಂದು ತಕ್ಷಣವೇ ಮುಖಕ್ಕೆ ಹೊಡೆದಂತೆ ಹೇಳಿದರು. ಹೋ...! ಇವರು ನಮಗಿಂತ ಸ್ಟ್ರಾಂಗ್ ಇದ್ದಾರೆ ಎಂದು ಮಾತು ಕಡಿಮೆ ಮಾಡಿದೆ.
   ನನ್ನ ಮುಖವನ್ನೊಮ್ಮೆ ನೋಡುತ್ತಿದ್ದರು ಏನ್ ಇವತ್ತು ನಿನ್ ಹಳೆ ಲವ್ವರ್ ನೆನಪಿಗೆ ಬದ್ಲ. ಕಣ್ಣು ಚಿಕ್ಕದಾಗಿ ಮಾಡಿ ಮತ್ತೆ ಮುಖವನ್ನು ನೋಡುತ್ತಾ ನಿನಗೇನು ಗೊತ್ತೊ ನನ್ನ ಪೀರುತಿ ಬಗ್ಗೆ. ಎಂಬ ಮಾತನ್ನು ಕೇಳಿ ನನಗೆ ಶಾಕ್ ಹೊಡೆದಾಗೆ ಆಯ್ತು. ಇದೇನಪ್ಪ ಹೀಗೆ ಹೇಳ್ತಿದರಲ್ಲ ಅವರಿಗೆ ಏನಿಲ್ಲವೆಂದರು 75 ರ ಗಡಿ ದಾಟಿತ್ತು ಆದ್ದರಿಂದ ಅನುಮಾನದಿಂದ ಕೇಳಿದೆ ತಾತ ನೀವು ಲವ್ ಮಾಡಿದ್ರ ? ಅದಕ್ಕೆ ಅವರು ಮಾಡಿದ್ರ ಅಲ್ಲ ಮಾಡ್ತಿದಿನಿ. 
   ಅಲ್ಲಿಂದ ಅವರ ಲವ್ ಸ್ಟೋರಿ ಸ್ಟ್ರಾಟ್ ಆಯ್ತು. ನನಗಾಗ 21 ಆಗ ಸಾಲೆ ಗೀಲೆ ಎಲ್ಲಾ ದೂರದ ಮಾತು ಮನೆಲಿ 75 ಕುರಿಗಳು ಇದ್ವು ಅವನ್ನ ಮೇಯಿಸೋಕೆ ಕಗ್ಗಲಿ ಹಳ್ಳದ ಕಡೆ ಹೋಗ್ತಿದ್ದೆ. ಅದೇ ಕಡೆಯಿಂದ ಸಾಲೆಗೆ ಹೋಗೊಕೆ ಪಟೇಲನ ಮಗಳು ನಾಗರತ್ನ ಬರ್ತಿದ್ಲು. ನಾಗರತ್ನ ಯಾರ್ ತಾತ ಅದೇ ಕಣೋ ಗುಡೇ ಮಾರನಹಳ್ಳಿ ಕೊಟ್ಟಿದರಲ್ಲ ಚಿಕ್ ಮಗಳು. ಅದೇ ಕೆಂಪಮ್ಮನ ಜಾತ್ರೆಗೆ ಬತ್ತರಲ್ಲಾ ಹೋ ಅವರ. ಹ ಅವಳೇ. ಅವರ ಬಗ್ಗೆ ಹೆಚ್ಚು ಕೇಳಲಿಲ್ಲ ಯಾಕೆಂದ್ರೆ ಅವರ ಮೊಮ್ಮಗಳು ಕೀರ್ತಿಗೆ ಲೈನ್ ಹೊಡಿತಿದ್ದೆ, ನಮ್ಮೂರಿನ ಜಾತ್ರೆಗೆ ಬಂದಾಗ. ಸರಿ ಮುಂದೆ ತಾತ ನಾವು ತುಂಬಾ ಬಡವರು ಒಂದ್ ಹೊತ್ತಿನ ಉಟಕ್ಕೂ ಕಷ್ಟ ಇತ್ತು. ಅವಳು ಸಾಲೆಗೆ ಹೋಗುವಾಗ ಅವಳ ಮನೆಯಿಂದ ರೊಟ್ಟಿ ತಂದು ಕೊಡ್ತಿದ್ಲು. ನಾನು ಅವಳಿಗೆ ಸೀಬೆ ಹಣ್ಣು, ನೇರಳೆ ಹಣ್ಣು, ಖಾರೆ ಹಣ್ಣು ಇನ್ನು ಎಲ್ಲಾ ಕೊಡ್ತಿದ್ದೆ.
    ಅವಳನ್ನ ನೋಡ್ದೆ ನನಗೆ ಇರೋಕೆ ಆಗ್ತಿರ್ಲಿಲ್ಲ ಒಂದೆರಡು ದಿನ ಶಾಲೆಗೆ ಬರ್ತಿಲಿಲ್ಲ ಅವರ ಮನೆ ಕಡೆ ಹೋಗಿ ನೋಡ್ದೆ ಆಚೆ ಗುಡಿಸಲು ಹಾಕಿ ಕೂರಿದ್ದರು. ಅದಾದ ಒಂದು ತಿಂಗಳಿಗೆ ಮತ್ತೆ ಬಂದಳು ನಾವಿಬ್ಬರು ಒಂದೆಡೆ ಕುಳಿತು ಇಬ್ಬರು ಮಾತನಾಡುತ್ತಿದ್ದವು. ಇದು ಅವರಪ್ಪನಿಗೆ ಗೊತ್ತಾಗಿ ಅವಳಿಗಂತು ಚೆನ್ನಾಗಿ ಹೊಡೆದರು. ನನಗಂತೂ ನಮ್ಮಪ್ಪ ಮೆಣಸಿನಕಾಯಿ ಹೊಗೆ ಹಾಕಿ ಎರಡು ದಿನ ಉಪವಾಸ ಇಟ್ಟರು ಅವಳನ್ನು ನೋಡುವ ಮಾತನಾಡುವ ತವಕ ನಿಲ್ಲಲಿಲ್ಲ. 
  ನಾನು ಹೋಗಿ ಮಾತನಾಡುವ ಮೊದಲೆ ಅವಳನ್ನ ಅವರ ಚಿಕ್ಕಮ್ಮನ ಮನೆಗೆ ಕಳಿಸಿದ್ದರು. ಅಲ್ಲಿಗೆ ಹೋಗುವುದರೊಳಗೆ ಅವಳಿಗೆ ಮುದುವೆ ನಿಶ್ಚಯ ಮಾಡಿ ಅವರಪ್ಪ ಅವಸರವರವಾಗಿ ಮದುವೆ ಮಾಡಿದ್ರು. ಆಮೇಲೆ ಎನಾಯ್ತು ತಾತ? ಅವಳು ಅಲ್ಲಿ ಚೆನ್ನಾಗಿಲ್ಲ ಅನ್ನೋದು ಗೊತ್ತಾಯ್ತು ಅವಳ ಗಂಡ ದಿನಾಲು ಜಗಳ ಮಾಡ್ತನಂತೆ ಹೊಡಿತಾನಂತೆ. ದಿನಾಲೂ ಅವಳನ್ನೆ ನೆನಪ್ ಮಾಡ್ಕೋತಿನಿ. ಇನ್ನು ಮರೆತಿಲ್ವ ? ಹೇಗೆ ಮರಿಲಿ ಅದು ಇಂದು ಹುಟ್ಟಿ ನಾಳೆ ಮರೆತೊಗೋ ಮೊಬೈಲ್ ಪ್ರೀತಿ ಅಲ್ಲಾ. ಹೋ ಬಿಡಿ ಯಾರು ಮಾಡ್ದಿದ್ ಏನು ಮಾಡಿಲ್ಲ. ಆಗ ಯಾರು ಮಾಡಿರ್ಲಿಲ್ಲ ಇವಗ ಮಾಡ್ದರೇ ಇಲ್ಲ. ಅಲ್ಲಿಂದ ಕಥೆ ಕೇಳಿ ಹೊರಡುವ ಹೊತ್ತಿಗೆ ನನ್ ಹುಡುಗಿ ನೆನಪಾಗಿದ್ಲು.


ಮಂಜುನಾಥ ಹೆಚ್.ಆರ್
Mail : manjunathahr1991@gmail.com
  

No comments:

Post a Comment