Wednesday 30 March 2016

ಸ್ನೇಹಾ ಅಂದ್ರೆ ಇದೇನಾ..........?

  ಸ್ನೇಹ ಅಂದ್ರೆ ಇದೇ ಅಲ್ವ


 ನನ್ನ ಹತ್ರ ಯಾವುದು ದುಡ್ಡಿಲ್ಲ, ಮಗೂನ ಸ್ಕೂಲಿಗೆ ಸೇರ್ಸಿಬೇಕು ಅರ್ಥಮಾಡ್ಕೋ ನಿನೇನು ಚಿಕ್ಕವನಲ್ಲ ನನ್ನ ಸಂಸಾರದ ಬಗ್ಗೆ ನಾನೂ ಯೋಚ್ನೆ ಮಾಡ್ಬೇಕು ಸರೀನಾ. ಎಂದು ರವೀಶ್ ಫೋನ್ ಕಟ್ ಮಾಡಿದನು.
   ಲಕ್ಷ್ಮಿ ನಾರಾಯಣನ ಅಣ್ಣ ರವೀಶ್ ಸಾಫ್ಟ್‍ವೇರ್ ಕಂಪನಿಯಲ್ಲಿ ಕೆಲಸ ಮಾಡ್ತಿರೋದು, ಸಂಬಳ? ಎಷ್ಟೆಂದು ಕೇಳಬೇಡಿ, ಅದು ಬಹುಶಹ ರವೀಶ್‍ಗೂ ಗೊತ್ತಿರಲಿಕ್ಕಿಲ್ಲ ಏಕೆಂದರೆ ಬರುವ ಪೂರ್ತಿ ಸಂಬಳ ಅವನ ಹೆಂಡತಿಯ ಕೈ ಸೇರುತ್ತಿತ್ತು. ಮೊದಲು ಹಿಗಿರಲಿಲ್ಲ ಮದುವೆ ಆದ ಮೇಲೆ ಹಿಗಾಗುತ್ತಾನೆಂದು ಯಾರೂ ಅಂದುಕೊಂಡಿರಲಿಲ್ಲ.
   ಫೋನ್ ಹಿಡಿದು ತಲೆ ತಗ್ಗಿಸಿ ಕುಳಿತಿದ್ದ ಲಕ್ಷ್ಮಿಯ ಮುಂದೆ ವರುಣ್ ಜೋರಾಗಿ ಬೈಕ್‍ನಲ್ಲಿ ಬಂದವನೆ ಧೂಳೆಬ್ಬಿಸಿ ಅವನೆದುರು ಬೈಕ್‍ಗೆ ಬ್ರೇಕ್ ಹೊಡೆದು ನಿಲ್ಲಿಸಿ ಬೈಕ್‍ನಿಂದಿಳಿದು ಲಕ್ಷ್ಮಿಯನ್ನು ಕಿಚಾಯಿಸಿದನು ಲಕ್ಷ್ಮಿ ಏನನ್ನು ಮಾತನಾಡಲಿಲ್ಲ ವರುಣ್ ಲಕ್ಷ್ಮಿಯ ತಲೆಯನ್ನು ಹಿಡಿದು ಮೇಲೆತ್ತಿದನು ಕಣ್ಣಿನಲ್ಲಿ ನೀರು ತುಂಬಿದ್ದನ್ನು ನೋಡಿ. ಯಾಕೋ ಏನಾಯ್ತೊ ಎಂದು ಕೇಳುವ ಬದಲು ಅಣ್ಣನಿಗೆ ಫೋನ್ ಮಾಡಿದ್ದ ಎಂದನು. ಇವನಿಗೆ ವಿದಿ ಇಲ್ಲದೆ ನಿಜ ಹೇಳಬೇಕಾಯಿತು. ನಾನು ಎಷ್ಟು ಸಲ ಹೇಳಿದ್ದಿನಿ ಅವನಿಗೆ ಫೋನ್ ಮಾಡ್ಬೇಡ ಅಂತ ನನ್ನ ಮಾತೇ ಕೇಳಲ್ಲ ಈಗ ಸಮಾಧಾನ ಆಯ್ತ ಎಂದು ಏರು ಧ್ವನಿಯಲ್ಲಿ ಕೂಗಿದನು.
  ಅದು ಹಾಗಲ್ಲ ಕಣೊ ವರುಣ್ ಮತ್ತೇಗೋ ಅವನೊಬ್ಬ ಅಣ್ಣ, ಯಾವಾಗಲೂ ಹೆಂಡತಿ ಸೆರಗು ಹಿಡುಕೊಂಡು ಒಡಾತ್ತಿರೊ ಸಂಗ ಅವನು. ವರುಣ್ ಪ್ಲೀಸ್ ಹಾಗೆಲ್ಲ ಮಾತಾಡ್ಬೇಡ. ಸರಿ ಬಿಡು ಏನ್ ನಿನ್ನ ಸಮಸ್ಯೆ ಯಾಕೆ ಅವನಿಗೆ ಫೋನ್ ಮಾಡಿದ್ದೆ? ಏನಿಲ್ಲ ಬಿಡೋ, ಪರವಗಿಲ್ಲ ಹೇಳಮ್ಮ? ಪರವಗಿಲ್ಲ ಅಂತ ಹೇಳಿನಲ್ಲ ಬಿಡೋ. ನನಗೆ ಕೋಪ ಬರಿಸ್ಬೇಡ ಸುಮ್ನೆ ಹೇಳು? ಫೀಸ್ ಕಟ್ಬೇಕು ನಾಳೆ ಲಾಸ್ಟ್ ಡೇಟ್ ಎಂದು ಮೆಲು ಧ್ವನಿಯಲ್ಲಿ ಹೇಳಿದನು. ವರುಣ್ ಕ್ಷಣ ಕಾಲ ಯೋಚನೆ ಮಾಡಿ ಎಷ್ಟು ಎಂದನು? 30 ಸಾವಿರ, ಹೌದ? ಸರಿ ನಾಳೆ ಮಧ್ಯಾಹ್ನದ ಒಳಗೆ ಅರೇಂಜ್ ಮಾಡ್ತಿನಿ ಬಿಡು.
   ಬೇಡ ಕಣೊ, ಯಾಕೆ? ಲೋ ಹೇಗೋ ತಗೊಳ್ಳಿ ನಿನ್ನತ್ರ ಫಸ್ಟ್ ಇಯರ್ ಎಂಎಸ್ಸಿ ಫೀಸ್ ಎಲ್ಲಾ ನೀನೆ ಕಟ್ಟಿದಿಯಾ ಇವಗ ನೋಡಿದ್ರೆ ಇದಕ್ಕೂ ನೀನೆ ಕೊಡ್ತಿನಿ ಅಂತಿದಿಯ ಬೇಡ ಕಣೋ. ಫ್ರಂಡ್ಸ್ ಅಂದ್ರೆ ಅಷ್ಟೇಯೇನೋ ಕುಡಿಯೋದು, ತನ್ನೋದು, ಟ್ರಿಪ್ ಮಾಡೋದು, ಪಾರ್ಟಿ ಮಾಡೋದು ಅಷ್ಟೇ ಅಲ್ಲ ಕಷ್ಟದಲ್ಲಿ ಹೆಗಲಿಗೆ ಹೆಗಲಾಗಿ ಇರ್ಬೇಕು. ನೋವಲ್ಲಿ ಕಣ್ಣೀರ್ ಒರೆಸೊ ಮೊದಲ ಕೈ ಅದು ಇದೆಲ್ಲ ನಿನಗೆ ಅರ್ಥ ಆಗಲ್ಲ ಬಿಡು ಎಂದು ಬೈಕ್ ಹತ್ತಿ ನಾಳೆ ದುಡ್ಡಿನ ಜೊತೆ ಬರ್ತಿನಿ ಅಂತಹೇಳಿ ಹೊರಟು ಹೋದನು.
    ಮರುದಿನ ಲಕ್ಷ್ಮಿ ನಾರಾಯಣ ಬ್ಯಾಂಕ್ ಹತ್ತಿರ ಅವನಿಗಾಗಿ ಕಾಯುತ್ತಿದ್ದ. ವರುಣ್ ಜೋರಾಗಿ ಓಡಿ ಬಂದು ಲಕ್ಷ್ಮಿಗೆ 30 ಸಾವಿರ ನೀಡಿ ಬೇಗ ಹೋಗಿ ಕಟ್ಟು ಬ್ಯಾಂಕ್ ಕ್ಲೋಸ್ ಆಗುತ್ತೆ ಎಂದನು. ನಿನ್ನ ಬೈಕ್ ಎಲ್ಲಿ ಮಗಾ? ಈಗ ಅದೆಲ್ಲಾ ಬೇಕಾ? ಹೇಳೂ ಏನ್ ಮಾಡ್ದೆ ಅದು ಅದು ಎಂದು ರಾಗ ಎಳೆದು ಎಲ್ಲೂ ದುಡ್ಡು ಅಡ್ಜೆಸ್ಟ್ ಆಗ್ಲಿಲ್ಲ ಆದಕ್ಕೆ ಅದನ್ನ ಮಾರ್ಬಿಟ್ಟೆ. ಲೋ ಅದು ನೀನು ಇಷ್ಟ ಪಟ್ಟು ತಗೊಂಡಿದಲ್ವ ಬೇರೆ ತಗೊಂಡ್ರೆ ಆಯ್ತು ಬಿಡೋ ಫ್ರಂಡ್ಸ್‍ಗಿಂತ ಬೈಕ್ ಹೆಚ್ಚಲ್ಲ. ನೀನು ಕೆಲಸಕ್ಕೆ ಸೆರ್ದಿಮೇಲೆ ಹೊಸ ಬೈಕ್ ತೆಕ್ಕೊಡಿವಂತೆ ಬಿಡು. ಎಂದು ಲಕ್ಷ್ಮಿ ನಾರಾಯಣನನ್ನು ಮುಂದೆ ಮಾತನಾಡಲು ಬಿಡದೆ ಬ್ಯಾಂಕ್ ಒಳಗೆ ಎಳೆದುಕೊಂಡು ಹೋದನು. ಸ್ನೇಹ ಅಂದ್ರೆ ಇದೇ ಅಲ್ವ.
ಮಂಜುನಾಥ ಹೆಚ್.ಆರ್.
email : manjunathahr1991@gmail.com

No comments:

Post a Comment