Friday 18 March 2016

ಕಾಲೇಜಿಗೆ ಬರೋದು ಬರಿ ಟೈಂ ಪಾಸ್‍ಗಲ್ಲ...........

ಕಾಲೇಜಿಗೆ ಬರೋದು ಬರಿ ಟೈಂ ಪಾಸ್‍ಗಲ್ಲ.......

      ಆಗಿನ್ನು ಪ್ರಥಮ ವರ್ಷದ ಪದವಿಯನ್ನು ಮುಗಿಸಿ ಎರಡನೇ ವರ್ಷದ ಅವಧಿಗೆ ಕಾಲಿಟ್ಟಿದ್ದೆವು. ಇತಿಹಾಸ ಶಿಕ್ಷಕರಿಗೆ ಒಂದು ಕಾಯಿಲೆಯೋ ಅಥವಾ ಅಭ್ಯಾಸವೋ ಅದೊಂದು ದುರಭ್ಯಾಸವೋ ಎನೋ ಗೊತ್ತಿಲ್ಲ ಆದರೆ ಅವರು ಪಾಠ ಮಾಡಬೇಕಾದರೆ ಹುಡುಗರ ಕಡೆ ನೋಡದೆ ತಲೆಯನ್ನು ಮೇಲೆತ್ತಿ ಕ್ಲಾಸ್ ರೂಮಿನ ಟಾಪ್ ನೋಡುತ್ತಿದ್ದರು. ನಾವು ಪ್ರಥಮ ವರ್ಷ ಮುಗಿಸಿದಾಗ  ಇವರ ಬಗ್ಗೆ ಗೊತ್ತಿಲ್ಲದೆ ಇರುವುದರಿಂದ ನಾವು ಸುಮ್ಮೆ ಆಗಿದ್ದೆವು ಆಗ ತುಂಬಾ ಒಳ್ಳೆ ಹುಡುಗರು. 
    ನಾವು ಸುಮ್ಮನಿದ್ದರು ನಮ್ಮ ಅಣ್ಣ-ತಂಮ್ಮದಿರು ಸುಮ್ಮನೆ ಇರಬೇಕಲ್ಲ. ಒಂದು ದಿನ ನೋಡಿದರು ಎರಡನೆಯ ದಿನ ನೋಡಿದರು ಅವರು ಕತ್ತನ್ನು ಎಳಗೆ ಇಳಿಸಲೇ ಇಲ್ಲ ಮೂರನೆಯದಿನ ಕ್ಲಾಸ್ ರೂಮಿನ ಟಾಪ್ ಮೇಲೆ ಅಲ್ಲೇನು ಕೋತಿ ಕುಣಿಯತ್ತಿದೆಯ?, ಕಾಗೆ ಹಾರ್ತ ಇದೆಯಾ?, ಇನ್ನು ಮುಂತಾದ ಬರಹಗಳು ಅವರನ್ನು ಕುರಿತು ರಾರಾಜಿಸುತ್ತಿದ್ದವು. ಇದನ್ನು ನೋಡಿದ ಅವರು ಮತ್ತೆ ಮೇಲೆ ನೊಡಲಿಲ್ಲ ತಲೆ ಕೆಳಗೆ ಮಾಡುತ್ತಾ ಪಾಠ ಮಾಡಿ ಆಚೆ ನಡೆದರು.
      ನಮ್ಮ ಉದ್ದೇಶ ಯಾರನ್ನು ನೋಯಿಸುವುದಲ್ಲ. ತರಗತಿಗೆ ಬಂದವರೆ ಹರಟೆ ಹೊಡೆಯುತ್ತಾ, ಕೆಲಸಕ್ಕೆ ಬಾರದ ವಿಷಯಗಳನ್ನು ಮಾತನಾಡುತ್ತಾ 1 ಗಂಟೆ ಸಮಯವನ್ನು ಹಾಳು ಮಾಡುತ್ತಾರೆ. ಕಾಲೇಜಿಗೆ ಎಲ್ಲಾ ವಿದ್ಯಾರ್ಥಿಗಳು ಹರಟೆ ಹೊಡೆಯಲು ಟೈಂ ಪಾಸ್‍ಗೆಂದೆ ಬರುವುದಿಲ್ಲ ಜೀವನದಲ್ಲಿ ಎನನ್ನಾದರು ಸಾಧನೆ ಮಾದಬೇಕೆಂಬ ಕನಸನ್ನು ಸಹ ಇಟ್ಟುಕೊಂಡು ಬಂದಿರುತ್ತಾರೆ.
     ಈ ರೀತಿಯ ಬರಹಗಳನ್ನು ಬರೆಯಲು ಮೂಲ ಕಾರಣ ನಮ್ಮ ಕಾಲೇಜಿನಲ್ಲಿ ಹುಡುಗಿಯರು ಇಲ್ಲದೇ ಇದ್ದುದ್ದು. ಹೇಳಿಕೇಳಿ ನಮ್ಮದು ಬಾಯ್ಸ್ ಕಾಲೇಜು ಆಡಿದ್ದೇ ಆಟ ಉಡಿದ್ದೇ ಲೆಗ್ಗೆ ನಮ್ಮದು.
ಮಂಜುನಾಥ ಹೆಚ್.ಆರ್.
email : manjunathahr1991@gmail.com     
  

No comments:

Post a Comment