Saturday 5 March 2016

ಬಸ್ಸಿನಲ್ಲೊಂದು ವಿಶ್ವ ಮಾನವ ಗೀತೆ

ಮಾನವೀಯತೆ ನಮಗೂ ಇದೆ........? 

     ಇತರೆ ಪ್ರಾಣಿಗಳಿಗಿಂತ ಬುದ್ಧಿಜೀವಿ ಮಾನವನೆಂದು ಎಲ್ಲರಿಗೂ ತಿಳಿದಿರುವ ವಿಷಯ ಆದರೆ ಆ ಬುದ್ಧಿ ಜೀವಿಗೆ ಯೋಚಿಸುವ ಒಳ್ಳೆಯದು ಯಾವುದು ಕೆಟ್ಟದ್ದು ಯಾವುದು ಪ್ರೀತಿ, ಪ್ರೇಮ, ವಾತ್ಸಲ್ಯ ಕರುಣೆ ಇವೆಲ್ಲವುದರ ಅರಿವಿದೆ. ಇದರ ಜೊತೆಗೆ ಅಸಹಾಯಕರನ್ನು ಕಂಡರೆ ಮರುಗುವ ಮತ್ತು ಅವರ ಮೇಲೆ ಪ್ರೀತಿಯನ್ನು ತೋರುವ ಔದಾರ್ಯವು ಸಹ ಇದೆ. ಇದು ಭಾರತೀಯರಿಗೆ ಹೆಚ್ಚಾಗಿಯೇ ಇದೆ ಎಂದರೆ ತಪ್ಪಾಗಲಾರದು ಆದರೆ ಇದು ವಾಸ್ತವವಾಗಿ ನಡೆಯುತ್ತದೆಯೋ ಅಥವಾ ಮೇಷ್ಟು ಪಾಠ ಮಾಡುವ ಪುಸ್ತಕದ ಬದನೆಕಾಯಿ ಅಷ್ಟೆಯೇ ಎಂದು ಕೊಂಡಿದ್ದೆ ಆದರೆ ನಿಜವಾಗಿಯೂ ನನ್ನ ಅನುಭವಕ್ಕೆ ಬರುತ್ತದೆ ಎಂದು ಭಾವಿಸಿರಲಿಲ್ಲ.
    ಅದೊಂದು ದಿನ ಮಧುಗಿರಿಯಿಂದ ಬೆಂಗಳೂರಿಗೆ ಹೊರಟಿದ್ದೆ ಸಂಜೆಯಾದ್ದರಿಂದ ಮಾಮೂಲಿಯಾಗಿ ಜನ ಸಂದಣಿ ಇತ್ತು ಖಾಸಗಿ ಬಸ್ ತಡವಾಗಿ ತಲುಪಬಹುದೆಂದು ಸರ್ಕಾರಿ ಬಸ್ ಅವಲಂಬಿಸಿ ಹೊರಟೆ ಬಸ್ಸಿನಲ್ಲಿ ಸೀಟುಗಳೆಲ್ಲ ತುಂಬಿ ಕಂಡಕ್ಟರ್ ಸೀಟಿನ ಪಕ್ಕದಲ್ಲಿ ಖಾಲಿ ಇರುವುದನ್ನು ನೋಡಿ ಅಲ್ಲೆ ಕುಳಿತೆ. ಒಬ್ಬನೆ ಇದ್ದದ್ದರಿಂದ ವಾಡಿಕೆಯಂತೆ ಹಾಡನ್ನು ಕೇಳಲು ಕಿವಿಗೆ ಇಯರ್ ಫೋನ್ ಸಿಕ್ಕಸಿ ಮೆಲೋಡಿಯಸ್ ಸಾಂಗ್ ಕೇಳುತ್ತಿದ್ದೆ. ಇದ್ದಕ್ಕಿದ್ದ ಹಾಗೆ ಯಾರೊ ಕಿಟಾರನೆ ಕಿರುಚಿದ ಹಾಗೆ ಕೇಳಿಸಿತು. ಕಿವಿಯಲ್ಲಿನ ಇಯರ್ ಫೋನ್ ತೆಗೆದು ಮುಂದೆ ನೋಡಿದರೆ ಒಂದು ಮಗು ಜೋರಾಗಿ ಅಳುತ್ತಿರುವುದು ಕೇಳಿಸಿತು. 
   ಸುಮಾರು 20 ಕಿ.ಮೀ ಬಸ್ಸು ಮುಂದೆ ನಡೆಯಿತು. ಮಗು ಒಂದೆ ಸಮನೆ ಅಳುತ್ತಿತ್ತು ನಾನು ಎನಾದರೂ ಸಹಾಯ ಮಾಡೋಣವೆಂದರೆ ಗಂಡು ಹುಡುಗ ಏನು ಮಾಡಲು ಸಾಧ್ಯ. ಪಕ್ಕದಲ್ಲೆ ಕುಳಿತಿದ್ದ ಸುಮಾರು 40 ವರ್ಷದ ಆಂಟಿ ಮಗುವನ್ನು ಎತ್ತಿ ಆಡಿಸಿ ಸಮಾಧಾನ ಪಡಿಸಲು ಪ್ರಯತ್ನಿಸಿದರು ಆದರೆ ಮಗು ಅಳುವನ್ನು ನಿಲ್ಲಿಸಲಿಲ್ಲ. ನಂತರ ಅವರ ಮುಂದೆ ಕುಳಿತಿರುವ ಸುಮಾರು 60 ವರ್ಷ ವಯಸ್ಸಿನ ಯಜಮಾನರೊಬ್ಬರು ಮಗುವಿಗೆ ನಿದ್ರೆ ಇರಬೇಕು ನಿಧಾನವಾಗಿ ಮಲಗಿಸಿ ಎಂದು ಹೇಳಿದರು ಅದು ಪ್ರಯೋಜನಕ್ಕೆ ಬರಲಿಲ್ಲ. ನಂತರದ ಸರದಿ 75 ವಯಸ್ಸಿನ ಅಜ್ಜಿಯದು, ಮಗುವಿಗೆ ಹಸಿವಾಗಿರಬಹುದೆನೊ ಹಾಲು ಕುಡಿಸಮ್ಮ ಎಂದು ಮಗುವಿನ ತಾಯಿಗೆ ಹೇಳಿದರು. ದಂಪತಿಗಳಿಗೆ ಮದುವೆಯಾಗಿ ಹೆಚ್ಚೆನು ಆಗಿರಲಿಲ್ಲ 2 ವರ್ಷ ಆಗಿರಬಹುದು. ಅದು ಅಲ್ಲದೆ ಮೊದಲ ಪಾಪು, ಮಗುವನ್ನು ಹೇಗೆ ಜೋಪಾನ ಮಾಡಬೇಕು, ನೋಡಿಕೊಳ್ಳಬೇಕು ಅದೆಲ್ಲ ಇರಲಿ ಹೇಗೆ ಹಾಲು ಕುಡಿಸಬೇಕು ಎಂದು ತಿಳಿದಿಲ್ಲದಂತೆ ಕಾಣುತ್ತಿತ್ತು ಅದು ಅಲ್ಲದೆ ಬಸ್ಸಿನಲ್ಲಿ ಹೇಗೆ ಎಂಬುದು ಅವರ ಚಿಂತೆ ಸ್ವಲ್ಪ ಮುಜುಗರ ಪಟ್ಟುಕೊಳ್ಳುತ್ತಲೆ ಮಗುವನ್ನು ಸಮಾಧಾನ ಪಡಿಸುತ್ತಿದ್ದರು.
    ಇಡೀ ಬಸ್ಸಿನಲ್ಲಿ ಇರುವವರೆಲ್ಲ ಒಂದಿಷ್ಟು ಬೇಜಾರು ಪಟ್ಟುಕೊಳ್ಳದೆ ಮಗುವನ್ನು ಸಮಾಧಾನ ಪಡಿಸಲು ಪ್ರಯತ್ನಿಸುತ್ತಿದ್ದರು. ಅದು ಸಾಧ್ಯವಾಗಲಿಲ್ಲ ಮಧುಗಿರಿಯಿಂದ ಬೆಂಗಳೂರಿಗೆ ಬರುವವರೆಗೂ ಹೀಗೆ ಎಲ್ಲರು ಮಗುವನ್ನು ತಮಗೆ ಅನ್ನಿಸಿದ ರೀತಿಯಲ್ಲಿ ಸಮಾಧಾನ ಪಡಿಸಿದರು ಅದು ಪ್ರಯೋಜನವಾಗಲಿಲ್ಲ.
   ಕೊನೆಗೆ ಒಬ್ಬರು ಸೀಟಿನಿಂದ ಮೇಲೆದ್ದು ಮಗುವಿಗೆ ಏನೋ ಪ್ರಾಬ್ಲಮ್ ಆಗಿರಬೇಕು ನೆಲಮಂಗಲದಲ್ಲಿ ನನಗೆ ಗೊತ್ತಿರೂ ಒಬ್ಬರು ಡಾಕ್ಟರ್ ಇದರೆ ಅವರಿಗೆ ಫೋನ್ ಮಾಡಿ ಹೇಳ್ತಿನಿ ನೀವ್ ಅಲ್ಲಿಗೆ ಹೋಗಿ ಟ್ರೀಟ್‍ಮೆಂಟ್ ತಗೊಂಡು ಬೇರೆ ಬಸ್ಸಿಗೆ ಬನ್ನಿ ಎಂದರು. ಮತ್ತೋಬ್ಬರು ಮೇಲೆದ್ದು ಸಾರ್ ನಿಮಗೆ ದುಡ್ಡು ಏನಾದ್ರು ಬೇಕಾದ್ರೆ ಹೇಳಿ ನಮ್ಮಿಂದ ಎಷ್ಟು ಆಗುತ್ತೊ ಸಹಾಯ ಮಾಡ್ತಿವಿ. ಈ ಮಾತಿಗೆ ಬಸ್ಸಿನಲ್ಲಿ ಇದ್ದವರೆಲ್ಲ ಧ್ವನಿಗೂಡಿಸಿದರು. ಪ್ರಯಾಣಿಕರ ಒಪ್ಪಿಗೆ ಪಡೆದು ಬಸ್ಸನ್ನು ಆಸ್ಪತ್ರೆಯ ಹತ್ತಿರ ನಿಲ್ಲಿಸಿ ಅವರನ್ನು ಅಲ್ಲಿಯೇ ಬಿಟ್ಟು ಬಸ್ಸು ಬೆಂಗಳೂರಿಗೆ ನಡೆಯಿತು. 
    ನಿಜಕ್ಕೂ ಇಂಥ ಜನರು ಇದ್ದಾರ ನಮ್ಮ ನಡುವೆ ಎಂದು ಅಶ್ಚರ್ಯ ಪಟ್ಟೆ ಅಂದು ಎಂಥ ಮಾನವೀಯತೆ ನಮ್ಮ ಜನದ್ದು ಎಂದು ಖುಷಿ ಪಟ್ಟೆ. 
                                                    ಮಂಜುನಾಥ ಹೆಚ್.ಆರ್.
E-mail : manjunathahr1991@gmail.com

No comments:

Post a Comment